ಜೂಟ್..! ಸ್ಕೋಡಾ ಫಾಬಿಯಾ ಸ್ಕಾಟ್ ಬರೋದ್ಯಾವಾಗ?

ಸ್ಕೋಡಾ ಕಂಪನಿಯು ಫಾಬಿಯಾದ ಆವೃತ್ತಿಗಳನ್ನು ಹೆಚ್ಚಿಸುವಲ್ಲಿ ಮಗ್ನವಾಗಿದೆ. ಇದೀಗ ಕಂಪನಿಯು ಹೊಸ ಫಾಬಿಯಾ ಸ್ಕಾಟ್ ಕಾರನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಕಂಪನಿಯು ಇತ್ತೀಚೆಗೆ ಕಂಪನಿಯು ಫಾಬಿಯಾ ಆಕ್ಟಿವ್ ಪ್ಲಸ್ ಮತ್ತು ಆಂಬಿಷನ್ ಪ್ಲಸ್ ಪರಿಚಯಿಸಿತ್ತು.

ದೇಶದ ರಸ್ತೆಯಲ್ಲಿ ಸ್ಕೋಡಾ ಫಾಬಿಯಾ ಕಾರುಗಳು ಜನಪ್ರಿಯವಾಗಿವೆ. ಕಂಪನಿಯ ನೂತನ ಫಾಬಿಯಾ ಸ್ಕಾಟ್ ಕಾರು 2012ರಲ್ಲಿ ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಈಗಾಗಲೇ ಕಂಪನಿಯು ದೇಶದ ರಸ್ತೆಯಲ್ಲಿ ಸ್ಕಾಟ್ ಕಾರಿನ ಟೆಸ್ಟ್ ಮಾಡಿದೆ. ಇತರ ಫಾಬಿಯಾ ಆವೃತ್ತಿಗಳಿಗೆ ಹೋಲಿಸಿದರೆ ನೂತನ ಸ್ಕಾಟ್ ಹೆಚ್ಚು ಸ್ಪೋರ್ಟಿ ವಿನ್ಯಾಸ ಹೊಂದಿರಲಿದೆ.

ಫಾಬಿಯಾ ಸ್ಕಾಟ್ ಫೋರ್ ವೀಲ್ಹ್ ಡ್ರೈವ್ ಕಾರಾಗಿದ್ದು, ಫಾಬಿಯಾ ಸಣ್ಣ ಕಾರುಗಳಿಗೆ ಹೋಲಿಸಿದರೆ ಇದು ಹೆಚ್ಚು ಆಕರ್ಷಕವಾಗಿರಲಿದೆ. ಇದು 1.6 ಎಂಪಿಎಫ್ಐ ಪೆಟ್ರೋಲ್ ಮತ್ತು 1.6 ಸಿಆರ್ ಡಿಐ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಒಂದು ವದಂತಿಯ ಪ್ರಕಾರ ನೂತನ ಫಾಬಿಯಾ ಸ್ಕಾಟ್ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆಯಂತೆ.

ಒಟ್ಟಾರೆ ದೇಶದ ಹ್ಯಾಚ್ ಬ್ಯಾಕ್ ಕಾರುಪ್ರೇಮಿಗಳಿಗೆ ನೂತನ ಸ್ಕಾಟ್ ಹೆಚ್ಚು ಇಷ್ಟವಾಗುವ ನಿರೀಕ್ಷೆಯಿದೆ. ಇದರ ದರ ಕೈಗೆಟುಕುವ ಮಟ್ಟದಲ್ಲಿ ಹೆಚ್ಚು ಜನರು ಖರೀದಿಸಬಹುದು. ಇಲ್ಲದಿದ್ದರೆ ಹಳೆಯ ಫಾಬಿಯಾ ಕಾರುಗಳಿಗೆ ತೃಪ್ತಿಪಡಬಹುದು. ನೂತನ ಫಾಬಿಯಾ ಸ್ಕಾಟ್ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಯಾವುದಕ್ಕೂ ನಿಮ್ಮ ಕಣ್ಣು "ಕನ್ನಡ ಡ್ರೈವ್ ಸ್ಪಾರ್ಕ್" ಮೇಲಿರಲಿ.

Most Read Articles

Kannada
English summary
Skoda India developing new Fabia Scout crossover car. New Fabia Scout expected launch in India in 2012. Company already launch Fabia active plus and ambition plus in India.
Story first published: Saturday, November 26, 2011, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X