ವರ್ಷದ ಬೆಸ್ಟ್ ಫ್ಯಾಮಿಲಿ ಕಾರು ಪ್ರಶಸ್ತಿ ಪಡೆದ ರಾಪಿಡ್

Posted By:
Skoda Rapid Best Family Car of the Year 2011
"ವಸುದೇವ ಕುಟುಂಬಕಂ" ಅಥವಾ ಕುಟುಂಬಗಳ ದೇಶ ಭಾರತ. ಇಲ್ಲಿ ಕುಟುಂಬ ಸವಾರಿಗೆ ಪೂರಕವಾಗಿರುವ ಕಾರುಗಳಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿ ಸಾಕಷ್ಟು ಫ್ಯಾಮಿಲಿ ಕಾರುಗಳಿವೆ. ಪರಂತು, ಈ ವರ್ಷದ ಅತ್ಯುತ್ತಮ ಫ್ಯಾಮಿಲಿ ಕಾರು ಪ್ರಶಸ್ತಿ ಪಡೆದದ್ದು ಮಾತ್ರ ಕಾಂಪ್ಯಾಕ್ಟ್ ಸೆಡಾನ್ ಕಾರು ಸ್ಕೋಡಾ ರಾಪಿಡ್.

ರೆನಾಲ್ಟ್ ಡಸ್ಟರ್ ಮತ್ತು ಸ್ಕೋಡಾ ಒಕ್ಟಾವಿಯ ಕಾರುಗಳಿಗೆ ಗ್ರಾಹಕರು ಮತಹಾಕುವ ನಿರೀಕ್ಷೆಯಿತ್ತು. ಆದರೆ ಅಂತಿಮವಾಗಿ ಹೆಚ್ಚಿನ ಜನರು ಸ್ಕೋಡಾ ರಾಪಿಡ್ ಈ ವರ್ಷದ ಬೆಸ್ಟ್ ಫ್ಯಾಮಿಲಿ ಕಾರು ಎಂದು ಆಯ್ಕೆ ಮಾಡಿದ್ದಾರೆ.

ಸ್ಕೋಡಾ ರಾಪಿಡ್ ಕಾರು ಇತ್ತೀಚೆಗೆ ದೇಶದ ರಸ್ತೆಗಿಳಿದಿತ್ತು. ಆದರೆ ಯುರೋಪ್ ಗ್ರಾಹಕರು ಈ ಕಾರಿನ ಬರುವಿಕೆಗಾಗಿ ಇನ್ನು ಕಾಯುತ್ತಿದ್ದಾರೆ. "ರಾಪಿಡ್ ಗೆ ಪ್ರತಿಷ್ಠಿತ ಪ್ರಶಸ್ತಿ ದೊರಕಿದ್ದು ಸಂತೋಷವಾಗಿದೆ. ನಾವಿನ್ನು ಜಾಗತಿಕವಾಗಿ ಈ ಕಾರಿನ ಮಾರಾಟ ಹೆಚ್ಚಿಸಲು ಯೋಜನೆ ಹಮ್ಮಿಕೊಳ್ಳಲಿದ್ದೇವೆ" ಎಂದು ಸ್ಕೋಡಾ ಚೇರ್ಮೆನ್ ಎಚ್ ಸಿ ವಿನ್ ಫ್ರಿಡ್ ಹೇಳಿದ್ದಾರೆ.

ರಾಪಿಡ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಬೇಸ್ ಆವೃತ್ತಿ ಹೆಸರು ಆಕ್ಟಿವ್, ಮಧ್ಯಮ ಆವೃತ್ತಿ ಆಂಬಿಷನ್ ಮತ್ತು ಟಾಪ್ ಆವೃತ್ತಿ ಹೆಸರು ಎಲೆಗೆನ್ಸ್ ಎಂದಾಗಿದೆ. ಈ ಮೂರು ಆವೃತ್ತಿಗಳೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನಲ್ಲಿ ದೊರಕುತ್ತಿದೆ.

ರಾಪಿಡ್ ವಿಮರ್ಶೆ, ಫಸ್ಟ್ ಡ್ರೈವ್, ದರ, ಮೈಲೇಜ್ ಗಾಗಿ ಇಲ್ಲಿ ಕ್ಲಿಕ್ ಮಾಡಿರಿ.

English summary
Skoda Rapid compact sedan voted best family car of the year 2011 in Indian Auto Industry. Rapid Price, Mileage, Specification, Review, Test drive, Features....
Story first published: Saturday, December 17, 2011, 10:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark