ಟಾಟಾ ನ್ಯಾನೊ: ಹೊಸ ಐಡಿಯಾ ಮಾಡ್ಯಾರಾ..

Tata Nano National Institute of Design Tie up

ದೇಶದ ಪ್ರಮುಖ ವಿನ್ಯಾಸ ಶಾಲೆಗಳಲ್ಲಿ ನ್ಯಾಷನಲ್ ಇನ್ಶುಟ್ಯೂಟ್ ಆಫ್ ಡಿಸೈನ್(ಎನ್ಐಡಿ) ಪ್ರಮುಖ. ಇದೀಗ ಟಾಟಾ ಮೋಟರ್ಸ್ ಮತ್ತು ಎನ್ಐಡಿ ಉದ್ಯಮ ಮತ್ತು ಸಾಂಸ್ಥಿಕ ಒಪ್ಪಂದ ಮಾಡಿಕೊಂಡಿವೆ.

ಟಾಟಾ ಮೋಟರ್ಸ್ ಕಂಪನಿಯು ಎನ್ಐಡಿಗೆ ಒಂದು ನ್ಯಾನೊ ಕಾರನ್ನು ಕಳುಹಿಸಿದೆ. ಇದಕ್ಕೆ ಹೊಸ ವಿನ್ಯಾಸ ಮತ್ತು ಐಡಿಯಾಗಳಿದ್ದರೆ ತಿಳಿಸಲು ವಿದ್ಯಾರ್ಥಿಗಳಲ್ಲಿ ಸೂಚಿಸಲಾಗಿದೆಯಂತೆ. ನಿಜ ಹೇಳಬೇಕೆಂದರೆ ನ್ಯಾನೊ ಕಾರು ಈಗ ಹೊಸ ವಿನ್ಯಾಸದಲ್ಲಿದೆ. ಸದ್ಯ ಇದಕ್ಕೆ ಯಾವುದೇ ಮರುವಿನ್ಯಾಸ ಅಗತ್ಯವಿಲ್ಲ.

ಆದರೆ ಎನ್ ಐಡಿ ವಿದ್ಯಾರ್ಥಿಗಳು ಯಾವುದಾದರೂ ಉತ್ತಮ ವಿನ್ಯಾಸ ಮಾಡಿದರೆ ಕಂಪನಿ ಬಳಸಿಕೊಳ್ಳಬಹುದು. ಯಾರಿಗೊತ್ತು ಯಾವ ವಿದ್ಯಾರ್ಥಿಯಲ್ಲಿ ಅತ್ಯುತ್ತಮ ವಿನ್ಯಾಸಕ ಇದ್ದಾನೆಂದು. ಸದ್ಯ ಪುಟ್ಟ ನ್ಯಾನೊ ಕಾರು ಎನ್ ಐಡಿ ಅಂಗಳದಲ್ಲಿದೆ.

ಟಾಟಾ ಹೊಸ ನ್ಯಾನೊ:
ಇತ್ತೀಚೆಗೆ ಟಾಟಾ ಮೋಟರ್ಸ್ ನೂತನ ನ್ಯಾನೊ ಆವೃತ್ತಿಗಳನ್ನು ಹತ್ತು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಇದು ಹೆಚ್ಚು ಶಕ್ತಿಶಾಲಿ ಗ್ಯಾಸೊಲಿನ್ ಎಂಜಿನ್ ಹೊಂದಿದ್ದು ಪ್ರತಿಲೀಟರ್ ಇಂಧನಕ್ಕೆ ಸುಮಾರು 25.4 ಕಿ.ಮೀ. ಮೈಲೇಜ್ ನೀಡುತ್ತದೆ.

ನೂತನ ನ್ಯಾನೊ ಕಾರು 624 ಸಿಸಿ ಎಂಜಿನ್ ಹೊಂದಿದ್ದು, 38 ಪಿಎಸ್ ಪವರ್ ಮತ್ತು 51 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಹಳೆಯ ನ್ಯಾನೊ ಕಾರು 23.6 ಕಿ.ಮೀ. ಮೈಲೇಜ್ ನೀಡುತ್ತಿತ್ತು. ಈ ಕಾರಿನ ಕರ್ಬ್ ತೂಕ 600 ಕೆ.ಜಿ. ಇದೆ. ಈ ಕಾರಿನಲ್ಲಿ ಗರಿಷ್ಠ 105 ಕಿ.ಮೀ. ವೇಗದಲ್ಲಿ ಪ್ರಯಾಣಿಸಬಹುದಾಗಿದೆ.

ಟಾಟಾ ಮೋಟರ್ಸ್ ಹೊರತಂದ 2012ರ ನ್ಯಾನೊ ಸ್ಟಾಂಡರ್ಡ್ ಆವೃತ್ತಿಗೆ ದೆಹಲಿ ಎಕ್ಸ್ ಶೋರೂಂ ದರ 1.40 ಲಕ್ಷ ರುಪಾಯಿ. ನ್ಯಾನೊ ಸಿಎಕ್ಸ್ ಕಾರಿಗೆ 1.70 ಲಕ್ಷ ರು. ನ್ಯಾನೊ ಎಲ್ ಎಕ್ಸ್ ಕಾರಿಗೆ 1.96 ಲಕ್ಷ ರು. ಇದೆ.

Most Read Articles

Kannada
English summary
National Institute of Design(NID) and Tata Motors approached industry-institute tie up. Tata Motors sending a Nano to NID.
Story first published: Wednesday, November 30, 2011, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X