ಮುನ್ನೋಟ: 2013ರ ಷೆವರ್ಲೆ ಬೀಟ್ ಸಣ್ಣಕಾರು

Posted By:

ದೇಶದ ರಸ್ತೆಗೆ ಜನರಲ್ ಮೋಟರ್ಸ್ ಫ್ಯಾಕ್ಟರಿಯಿಂದ ಹೊಸ ಬೀಟ್ ಸಣ್ಣಕಾರೊಂದು ಆಗಮಿಸಲಿದೆ. ಮುಂದಿನ ವರ್ಷ ಆಗಮಿಸಲಿರುವ ಷೆವರ್ಲೆ ಬೀಟ್ ನೂತನ ಆವೃತ್ತಿಯು ಹಳೆಯ ಆವೃತ್ತಿಗಿಂತ ಸಾಕಷ್ಟು ಅಪ್ ಗ್ರೇಡ್ ಆಗಿರಲಿದೆ.

ಜಾಗತಿಕ ಮಾರುಕಟ್ಟೆಗೆ ನೂತನ ಬೀಟ್ ಶೀಘ್ರದಲ್ಲಿ ಆಗಮಿಸಲಿದೆ. ಹೇಳಲು ಮರೆತೆ, ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮಲ್ಲಿರುವ ಬೀಟ್ ಕಾರಿಗೆ ಸ್ಪಾರ್ಕ್ ಎಂದು ಹೆಸರು. ಈ ಬೀಟ್ ಕುರಿತು ಕೊಂಚ ಮಾಹಿತಿ ಕೆಳಗಿದೆ.

To Follow DriveSpark On Facebook, Click The Like Button

ಹಳೆಯ ಷೆವರ್ಲೆ ಬೀಟಿಗಿಂತ ಕಾಸ್ಮೆಟಿಕ್ ವಿನ್ಯಾಸದಲ್ಲಿ ನೂತನ ಬೀಟ್ ಬದಲಾಗಿರಲಿದೆ. ಅಂದರೆ ಇನ್ನಷ್ಟು ಆಕರ್ಷಕವಾಗಿ ಆಗಮಿಸಲಿದೆ. ಹೊಸ ಹೆಡ್ ಲ್ಯಾಂಪ್, ಗ್ರಿಲ್ ಇರಲಿದೆ. ಹೊಸ ಬಂಪರುಗಳು ಕೂಡ ನೂತನ 2013ರ ಬೀಟ್ ಕಾರಿನಲ್ಲಿರಲಿದೆ.

ನೂತನ ಷೆವರ್ಲೆ ಬೀಟ್ ಹಳೆಯ 1 ಲೀಟರ್ ಡೀಸೆಲ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೇ ಆಗಮಿಸುವ ನಿರೀಕ್ಷೆಯಿದೆ. ನೂತನ ಷೆವರ್ಲೆ ಬೀಟ್ ಕಾರಿನ ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಕಾಣುವ ನಿರೀಕ್ಷೆಯಿದೆ. ಇದರೊಳಗೆ ಸ್ಥಳಾವಕಾಶವೂ ಹೆಚ್ಚಾಗುವ ಸಾಧ್ಯತೆಯಿದೆ.

ಇವೆಲ್ಲ ಜಾಗತಿಕ ಸ್ಪಾರ್ಕ್(ನಮ್ಮಲ್ಲಿ ಬೀಟ್) ಕಾರಿನ ಹೊಸ ವಿನ್ಯಾಸದ ಕುರಿತ ಮಾಹಿತಿಗಳು. ಇದೇ ವಿನ್ಯಾಸದಲ್ಲಿ ದೇಶದ ರಸ್ತೆಗೆ ಆಗಮಿಸುವುದೇ, ಇಲ್ಲವೇ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು.

ಈ ಪ್ರಶ್ನೆಗೆ ಉತ್ತರ ದೊರಕಲು ನೀವು ಕೊಂಚ ಕಾಯಬೇಕು. ನಾವು ಮುಂಬರುವ ಪ್ಯಾರೀಸ್ ವಾಹನ ಪ್ರದರ್ಶನದಲ್ಲಿ ನೂತನ ಕಾರಿನ ಕುರಿತು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ. ಪ್ಯಾರೀಸ್ ವಾಹನ ಪ್ರದರ್ಶನ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ನಡೆಯಲಿದೆ.

ಓದಿ: ಹೃದಯದ ಬಡಿತ ಹೆಚ್ಚಿಸೋ ಷೆವರ್ಲೆ ಬೀಟ್ ಡೀಸೆಲ್ ರಿವ್ಯೂ

English summary
2013 Chevrolet Beat Hatchback. The all new 2013 Chevrolet Beat, gets a dewy front grille and headlamps. The beat has let go of the old front and rear bumpers, and now the center rear stop lamp has been moved closer to the spoiler.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark