ಕಾರುಗಳ ಬಣ್ಣದ ಕಾಗದ ತೆಗೆದ ನಿರ್ಮಲ್ ಹೇರ್ ಆಯಿಲ್

ಬೆಂಗಳೂರು, ಜೂ 16: ನಿರ್ಮಲ್ ಕೊಕನಟ್ ಹೇರ್ ಆಯಿಲ್ ಸಂಸ್ಥೆಯು ಆಯೋಜಿಸಿದ್ದ ಕಾರುಗಳ ಬಣ್ಣದ ಗಾಜು ತೆಗೆಯುವ ಅಭಿಯಾನ ಯಶಸ್ವಿಯಾಗಿ ಇತ್ತೀಚೆಗೆ(ಜೂ 13) ಕೊನೆಗೊಂಡಿದೆ. ಸಂಸ್ಥೆಯು ಬೆಂಗಳೂರು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿ ಸುಮಾರು 500 ಕಾರುಗಳ ಟಿಂಟೆಡ್ ಗ್ಲಾಸ್ ರಿಮೂವ್ ಮಾಡಿದೆ.

ಟಿಂಟೆಡ್ ಗಾಜು ಕುರಿತಾದ ಜಾಗೃತಿ ಮೂಡಿಸಿರುವುದಕ್ಕೆ ಮತ್ತು ಬಣ್ಣದ ಗಾಜು ತೆಗೆಯಲು ಸಹಕರಿಸಿದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಕಂಪನಿ ಹೇಳಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳು ವಾಹನಗಳಿಗೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ಇತ್ತೀಚೆಗೆ ಸುಪ್ರಿಂ ಕೋರ್ಟ್ ನಿಷೇಧಿಸಿದೆ.

"ನಿರ್ಮಲ್ ಆಯಿಲ್ ಸಂಸ್ಥೆಯ ಈ ಕಾರ್ಯತಂತ್ರ ಅತ್ಯುತ್ತಮವಾಗಿದೆ. ತಮ್ಮ ಉತ್ಪನ್ನವನ್ನು ಪ್ರಚಾರಗೊಳಿಸಲು ಕಂಪನಿಯು ಆಯ್ಕೆ ಮಾಡಿಕೊಂಡ ದಾರಿ ನನಗೆ ಇಷ್ಟವಾಗಿದೆ" ಎಂದು ಸುನೀಲ್ ಕುಮಾರ್ ಹೇಳುತ್ತಾರೆ. ಅವರ ಕಾರಿನ ಟಿಂಟೆಡ್ ಗಾಜನ್ನು ನಿರ್ಮಲ್ ಆಯಿಲ್ ಸಂಸ್ಥೆಯು ತೆಗೆದ ನಂತರ ಅವರು ಪ್ರತಿಕ್ರಿಯಿಸಿದರು.

"ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ದಾರಿ. ನಿರ್ಮಲ್ ಮತ್ತು ತಂಡವು ಸಾರ್ವಜನಿಕರಿಗೆ ಸಹಾಯ ಮಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಹೇರ್ ಆಯಿಲ್ ಕಂಪನಿಗೆ ಥ್ಯಾಂಕ್ಸ್" ಎಂದು ಜಯದೇವ್ ನಾಯಕ್ ಹೇಳುತ್ತಾರೆ.

ದಂಡ: ಮೊದಲ ಬಾರಿಗೆ ಟಿಂಟೆಡ್ ಗ್ಲಾಸ್ ತೆಗೆಯದೇ ಸಿಕ್ಕಿಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಎರಡನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ಮತ್ತು ಮೂರನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Most Read Articles

Kannada
English summary
Manufacturers of India’s first transparent Nirmal coconut hair oil who started the initiative to support the Bangalore Traffic Police in removing the sun control films from four wheelers to make it transparent, is concluding successfully on Wednesday June 13, 2012
Story first published: Saturday, June 16, 2012, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X