ನಮ್ದು ಚಿರತೆ, ಮಾರುತಿದು ಮೊಲ: ಆನಂದ್ ಮಹೀಂದ್ರ

Posted By:

ನಾನು ಬೆಕ್ಕಾದರೆ ನೀನು ಇಲಿ, ನಾನು ಹುಲಿಯಾದರೆ ನೀನು ಜಿಂಕೆ, ನಾನು ಆನೆ ನೀನು ಇರುವೆ ಎಂದೆಲ್ಲ ಹೇಳುವುದನ್ನು ನೀವು ಕೇಳಿರುತ್ತೀರಿ. ಅಂದೊಮ್ಮೆ ಆನಂದ್ ಮಹೀಂದ್ರ ತನ್ನ ನೂತನ ಉತ್ಪನ್ನ ಎಕ್ಸ್ ಯುವಿ 500ನ್ನು ಚಿರತೆ ಎಂದು ಕರೆದಿದ್ದರು. ಈ ಸ್ಪೋರ್ಟ್ಸ್ ಯುಟಿಲಿಟಿ ನೋಡಲು ಚೀತಾದಂತೆ ಇದೆ ಎಂದೆಲ್ಲ ಹೇಳಿದ್ದರು.

ಇದೀಗ ಆನಂದ್ ಮಹೀಂದ್ರ ತನ್ನ ಪ್ರತಿಸ್ಪರ್ಧಿ ಕಂಪನಿ ಮಾರುತಿ ಸುಜುಕಿಯ ಜಿಪ್ಸಿಯನ್ನು ಮೊಲ ಎಂದು ಟ್ವಿಟ್ಟರಿನಲ್ಲಿ ಬಣ್ಣಿಸಿದ್ದಾರೆ. ಅವರು ಯಾವುದೋ ಟ್ವಿಟ್ಟರಿಗೆ ಮರುಟ್ವಿಟ್ ಮಾಡುತ್ತ "ಚಿರತೆಯ ಗರ್ಜನೆಗೆ ಮೊಲ ಉಳಿಯುವುದೇ" ಎಂಬರ್ಥದ ಮಾತುಗಳನ್ನಾಡಿದ್ದಾರೆ.

To Follow DriveSpark On Facebook, Click The Like Button

ಟ್ವಿಟ್ಟರ್ ಫಾಲೊವರ್ ಒಬ್ಬರು "ಮಹೀಂದ್ರ ಗ್ರೇಟ್ ಎಸ್ಕೇಪ್ ರೇಸಿನಲ್ಲಿ ಜಿಪ್ಸಿಯೊಂದಿಗೆ ಪಾಲ್ಗೊಬಹುದಾ?" ಎಂದು ತಮಾಷೆಯಿಂದ ಕೇಳಿದ್ದರು. ಅದಕ್ಕೆ ಮರು ಉತ್ತರವಾಗಿ ಆನಂದ್ ಮಹೀಂದ್ರ "ಚಿರತೆ(ಎಕ್ಸ್ ಯುವಿ500) ಜೊತೆ ಮೊಲ(ಜಿಪ್ಸಿ) ಸೆಣಸುವುದೇ?" ಎಂದಿದ್ದಾರೆ.

ಸ್ಪೋರ್ಟ್ ಯುಟಿಲಿಟಿ ವೆಹಿಕಲ್‌ ಸೆಗ್ಮೆಂಟಿನಲ್ಲಿ ಮಹೀಂದ್ರ ಎಕ್ಸ್ ಯುವಿ ಆಕರ್ಷಕ ಬೆಲೆಗೆ ದೊರಕುವುದುಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಕಾರಿನ ಆರಂಭಿಕ ದರ 11,38,000 ರು. ಆಗಿದೆ. ಮಾರುತಿ ಸುಜುಕಿ ಕೂಡ ದೇಶಕ್ಕೆ ಜಿಪ್ಸಿ ಪರಿಷ್ಕೃತ ಆವೃತ್ತಿಯೊಂದನ್ನು ಶೀಘ್ರದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

English summary
Mr Mahindra who is among the most followed Indian industrialists on Twitter has tweeted: " Is it safe to let rabbits roam where cheetahs prowl." This tweet was in response to a tweet by one of his followers who had asked if he could participate in the Mahindra Great Escape in his Gypsy.
Story first published: Wednesday, July 18, 2012, 17:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark