ಕ್ಲಿಯರೆನ್ಸ್ ಮಾರಾಟ: ಆಡಿ ಎ4 ಕಾರಿಗೆ ಬಡ್ಡಿ ಕಟ್ಬೇಕಾಗಿಲ್ಲ
ಆಡಿ ಎ4 ಕಾರಿಗೆ 24 ಲಕ್ಷ ರು. ಸಾಲ ದೊರಕುತ್ತದೆ. ಇದನ್ನು ಝೀರೋ ಬಡ್ಡಿದರದಲ್ಲಿ 36 ತಿಂಗಳು ಪಾವತಿ ಮಾಡಿದರೆ ಸಾಕು. ಆಡಿ ಕಾರೊಂದನ್ನು ಖರೀದಿಸಲು ಬಯಸುವರು ಕಂಪನಿಯ ಈ ಆಫರನ್ನು ಬಳಸಿಕೊಳ್ಳಬಹುದು.
ಆಡಿ ಇಂಡಿಯಾ ಕಂಪನಿಯು ಸಿಬಿಯು ಹಾದಿ ಮೂಲಕ ಕಾರುಗಳನ್ನು ಆಮದು ಮಾಡಿಕೊಳ್ಳುತ್ತದೆ. 2012-13ನೇ ಸಾಲಿನಲ್ಲಿ ಕೇಂದ್ರ ಸರಕಾರವು ಆಮದು ಸುಂಕವನ್ನು ಶೇಕಡ 60ರಿಂದ ಶೇಕಡ 75ಕ್ಕೆ ಹೆಚ್ಚಿಸಿತ್ತು.
ಆಡಿ ಝೀರೊ ಬಡ್ಡಿದರಕ್ಕೆ ಕಾರಣವೇನು ಎಂಬ ಸಂದೇಹ ನಿಮಗಿರಬಹುದು. ಬಜೆಟ್ ಪೂರ್ವದಲ್ಲಿ ಆಮದು ಮಾಡಿಕೊಂಡ ಕೆಲವು ಎ4 ಕಾರುಗಳು ಮಾರಾಟವಾಗದೆ ಉಳಿದಿವೆ. ಈ ಸ್ಟಾಕ್ ಕ್ಲೀಯರ್ ಮಾಡಲು ಕಂಪನಿಯು ಬಡ್ಡಿದರವಿಲ್ಲದೆ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಆಡಿ ಕಂಪನಿಯ ಐಷಾರಾಮಿ ಕಾರುಗಳಲ್ಲಿ ಎ4 ಪ್ರಮುಖ. ಇದು 8 ಏರ್ ಬ್ಯಾಗ್ ಮುಂತಾದ ಸುರಕ್ಷತೆಯ ಫೀಚರುಗಳನ್ನು ಹೊಂದಿದೆ. ಜರ್ಮನಿಯ ಕಾರು ಕಂಪನಿಯ ಈ ಕಾರು ರಸ್ತೆಯಲ್ಲಿ ಅತ್ಯುತ್ತಮ ಸವಾರಿ ಅನುಭವ ನೀಡುತ್ತದೆ. ಸೊನ್ನೆ ಬಡ್ಡಿದರದ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಆಡಿ ಇಂಡಿಯಾ ಶೋರೂಂಗೆ ಭೇಟಿ ನೀಡಿ.


Click it and Unblock the Notifications









