ಟ್ರಾಫಿಕ್ ಪೊಲೀಸರಿನ್ನು ಅಡ್ಡಗಟ್ಟಿ ದಂಡ ಕೇಳೋದಿಲ್ವಂತೆ!

ಬೆಂಗಳೂರು, ಸೆ 17: ರಸ್ತೆಗಳಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ದಂಡ ಪೀಕಿಸುವ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು(ಬಿಟಿಪಿ) ನಿರ್ಧರಿಸಿದ್ದಾರೆ. ಟ್ರಾಫಿಕ್ ಸಿಸಿ ಕ್ಯಾಮರಾ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಚಾಲಕರ ಮೇಲೆ ನಿಗಾವಿಡುವ ಪ್ರಕ್ರಿಯೆಯನ್ನು ಬಿಟಿಪಿ ಹೆಚ್ಚಿಸಲಿದೆ.

ಇತ್ತೀಚಿನ ಪ್ರಕರಣವೊಂದರಲ್ಲಿ ಟ್ರಾಫಿಕ್ ಪೊಲೀಸರಿಂದ ಪಾರಾಗಲು ಬೈಕ್ ಸವಾರನೊಬ್ಬ ವೇಗವಾಗಿ ಬೈಕ್ ಚಲಾಯಿಸಿ ಬಿಎಂಟಿಸಿ ಬಸ್ಸಿನಡಿಗೆ ಬಿದ್ದು ಮೃತ ಪಟ್ಟಿದ್ದ. ಟ್ರಾಫಿಕ್ ಪೊಲೀಸರಿಂದ ಬಚಾವಾಗಲು ಯತ್ನಿಸಿ ಅಪಘಾತಕ್ಕೀಡಾಗುವ ಹಲವು ಪ್ರಕರಣಗಳು ದಿನನಿತ್ಯ ನಡೆಯುತ್ತಿವೆ.

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಬದಲು, ಕೇಸ್ ದಾಖಲಿಸುವ ಪ್ರಕ್ರಿಯೆಯಲ್ಲೇ ಟ್ರಾಫಿಕ್ ಪೊಲೀಸರು ಕಳೆದು ಹೋಗುವುದರ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಪೊಲೀಸರ ಈ ಮನೋಭಾವದಿಂದ ಟ್ರಾಫಿಕ್ ದಟ್ಟಣೆ ನಿಯಂತ್ರಣ ಸಮರ್ಪಕವಾಗುತ್ತಿರಲಿಲ್ಲ.

ಹಾಗಂತ ಸಂಚಾರ ನೀತಿ ನಿಯಮಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ಹೋಗಬಹುದು ಎಂದುಕೊಳ್ಳಬೇಡಿ. ನೀವು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ದಂಡ ಕಟ್ಟುವಂತೆ ನೋಟಿಸ್ ಬರಬಹುದು. ಹತ್ತಿರದ ಪೊಲೀಸ್ ಸ್ಟೇಷನಿಗೆ ಹೋಗಿ ದಂಡ ಕಟ್ಟಿದರಾಯ್ತು.

ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದಿದ್ದರೂ, ನಸುಕಿನ ಜಾವಾ, ರಾತ್ರಿ ವೇಳೆ ಟ್ರಾಫಿಕ್ ರೂಲ್ಸ್ ಗಳ ಎಲ್ಲೆ ಮೀರಿ ಡ್ರೈವಿಂಗ್ ಮಾಡುವರ ಮೇಲೂ ಟ್ರಾಫಿಕ್ ಸಿಸಿ ಕ್ಯಾಮರಾಗಳು ನಿಗಾವಿಡುತ್ತವೆ.

ಓದುಗರೇ, ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ದಂಡ ವಸೂಲು ಮಾಡುವ ಕ್ರಮದ ಕುರಿತು ನಿಮ್ಮ ಅಭಿಪ್ರಾಯ, ಅನಿಸಿಕೆ, ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Most Read Articles

Kannada
English summary
The Bangalore traffic police have finally decided to do away with the practice of booking traffic offenders on busy traffic junctions. The traffic police have been criticized for focusing more on finding traffic offenders rather than regulating traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X