ಓದುಗರ ಪ್ರಶ್ನೆ: ಟ್ರಾಫಿಕ್ ಪೊಲೀಸರು ಯಾಕೆ ಹೀಗೆ?

ವಾಹನ ಚಾಲಕರನ್ನು ರಸ್ತೆಗಳಲ್ಲಿ ಅಡ್ಡಗಟ್ಟಿ ದಂಡ ಪೀಕಿಸುವ ಟ್ರಾಫಿಕ್ ಪೊಲೀಸ್ ಕುರಿತಾದ ಲೇಖನವೊಂದನ್ನು ಇತ್ತೀಚೆಗೆ ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಟಿಸಿತ್ತು. ಇದಕ್ಕೆ ಓದುಗರಿಂದ ಹತ್ತು ಹಲವು ಪ್ರತಿಕ್ರಿಯೆಗಳು ಬಂದಿವೆ. ಇವುಗಳಲ್ಲಿ ಟ್ರಾಫಿಕ್ ಪೊಲೀಸರೆಡೆಗೆ ಆಕ್ರೋಶ, ಅಸಹನೆಯೇ ಹೆಚ್ಚಾಗಿತ್ತು.

ಓದುಗರ ಪ್ರತಿಕ್ರಿಯೆಗಳು

ಚಕ್ರಪಾಣಿ: ನೇರವಾಗಿ ಸಿಕ್ಕಿಹಾಕಿಕೊಂಡಲ್ಲಿ ಕ್ರಮ ತೆಗೆದುಕೊಳ್ಳಿ. ಅದನ್ನುಬಿಟ್ಟು ಅಟ್ಟಿಸಿಕೊಂಡು ಹೋಗುವುದು ತಪ್ಪು. ಹಾಗೂ ಕೆಲವು ಕಡೆ, ಉದಾಹರಣೆಗೆ ಮೈಸೂರು ಬ್ಯಾಂಕ್ ರಸ್ತೆಯ ಅರಮನೆ ರಸ್ತೆಯಲ್ಲಿ ಬಲಕ್ಕೆ ತಿರುಗಿದಲ್ಲಿ ಗಾಂಧಿ ನಗರಕ್ಕೆ ಹೋಗುವ ರಸ್ತೆಯಲ್ಲಿ ಸಂಜೆ ವೇಳೆ ಟ್ರಾಫಿಕ್ ಪೊಲೀಸರೇ ಇರುವುದಿಲ್ಲ. ನೋಡಿದರೆ ಪಕ್ಕದಲ್ಲಿ ಹೆಲ್ಮೆಟ್ ಇಲ್ಲದವರನ್ನು, ಗೂಡ್ಸ್ ಗಾಡಿಯವರನ್ನು ಚೆಕ್ ಮಾಡುತ್ತ ನಿಂತಿರುತ್ತಾರೆ. ಇದನ್ನು ತಪ್ಪಿಸಿ.

ದಿಲೀಪ್ ಕುಮಾರ್: ಹೌದು, ಇವರು ತುಂಬಾ ಲಂಚ ತಗೋತಾರೆ. ನಾನೇ ಎಷ್ಟೋ ಸಲ ದಂಡ ಕಟ್ಟಿದ್ದೇನೆ. ಆದ್ರೆ ಇವರು ನಂಗೆ ಯಾವುದೇ ಚೀಟಿ ಕೊಟ್ಟಿಲ್ಲ. 100 ರು. ದುಡ್ಡು ತಗೊಂಡು ಮುಂದಿನ ಸಲಹ ಹೀಗೆ ಮಾಡಬೇಡ ಅಂತ ಹೇಳ್ತಾರೆ. ಇದು ನ್ಯಾಯಾನ? ಹೊಸ ರೂಲ್ಸ್ ತುಂಬಾ ಚೆನ್ನಾಗಿದೆ.

ಸುರೇಶ್, ನವೀನ್ ಗೌಡ, ಸ್ವಾಮಿ: ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಅಡ್ಡಗಟ್ಟಿ ದಂಡ ಪೀಕಿಸುವುದನ್ನು ನಿಲ್ಲಿಸಿದರೆ ಸಾರ್ವಜನಿಕರಿಗೆ ಒಳ್ಳೆಯದು, ಸರ್ಕಾರಕ್ಕೂ ದಂಡ ವಸೂಲಿಯಾಗುತ್ತದೆ. ಆದರೆ ಪೊಲೀಸಿನವರಿಗೆ ಮಾಮೂಲಿ ಸಿಗೋದಿಲ್ಲವಲ್ಲ! ಬೆಂಗಳೂರು ಟ್ರಾಫಿಕ್ ಪೊಲೀಸರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನು ಮುಂದೆ ಲಂಚ ಕಡಿಮೆಯಾಗಬಹುದು. ಕಳ್ಳರ ಥರ ಬಾಚಿಕೊಂಡು ದಂಡ ಕಲೆಕ್ಟ್ ಮಾಡ್ತಾರಲ್ಲ. ಅದ್ಯಾವ ನ್ಯಾಯ?

ಎಚ್. ಎಂ. ನಾಯ್ಕ್: ಮಸೀದಿ ಮುಂದೆ, ದೇವಸ್ಥಾನದ ಮುಂದೆ ವಾಹನ ನಿಲ್ಲಿಸಿದರೆ ದಂಡ ಹಾಕುತ್ತಾರೆ. ಇದು ಸರಿನಾ? ನೂತನ ರೂಲ್ಸ್ ಸಾರ್ವಜನಿಕರಿಗೆ ಒಳ್ಳೆಯದು. ಸರಕಾರಕ್ಕೂ ದಂಡ ವಸೂಲಿಯಾಗುತ್ತದೆ. ಕೆಲವು ದಕ್ಷ ಪೊಲೀಸರೂ ಇದ್ದಾರೆ.

ರಾಜು: ಪೊಲೀಸರು ವಸೂಲಿ ದಂದೆ ನಿಲ್ಲಿಸಿದರೆ ಸಾಕು. ಸಾಕಷ್ಟು ಸಮಸ್ಯೆಗಳು ಕಡಿಮೆಯಾಗುತ್ತೆ. ಕೇಸು ಇಲ್ಲ ಅಂದ್ರೂ, ನಂಬರ್ ಪ್ಲೇಟ್ ಸರಿ ಇಲ್ಲ, ಮಿರರ್ ಇಲ್ಲ ಅಂತ ನೆಪ ಹೇಳಿ 100 ರುಪಾಯಿ ಕೊಡು ಇಲ್ಲಾಂದ್ರೆ ಗಾಡಿ ಸೈಡಿಗೆ ಹಾಕಿ ಸ್ಟೇಷನಿಗೆ ಬಂದು ತಗೋ ಅನ್ನೋದು ಬಿಟ್ರೆ ಇವ್ರು ಟ್ರಾಫಿಕ್ ಪ್ರಾಬ್ಲಂ ಸಾಲ್ವ್ ಮಾಡೋದು ಕಡಿಮೆ.

ವಿರುಪಾಕ್ಷ: ಅಲ್ಲಾ ಸ್ವಾಮಿ, ಎಲ್ಲಾ ಆನ್ಲೈನ್ ಆಗಿರುವಾಗ ಇವರೇನು ಸಿಗ್ನಲ್ ಕಾಯೋ ನೆಪದಲ್ಲಿ ದುಡ್ಡು ವಸೂಲಿ ಮಾಡೋದು. ಅದು ಬಿಟ್ಟು ಸರಿಯಾಗಿ ಸಿಗ್ನಲ್ ಕಾಯಲಿ. ಹೇಗಿದ್ರೂ, ದಂಡ ಕಟ್ಟೋ ನೋಟಿಸು ಮನೆಗೆ ಬರುತ್ತೆ. ದಂಡ ಕಟ್ಟೇ ಕಟ್ಟುತ್ತಾರೆ.

ಸೋಮಶೇಖರ್, ಕುಮಾರ್: ಒಬ್ಬ ಅಮಾಯಕನ ಜೀವ ತೆಗೆದಿದ್ದಾರೆ. ಹಲೋ ಪೊಲೀಸಿನವರೇ ನೀವು ಮಾಮೂಲಿಗೊಸ್ಕರ ಹೋಗಿದ್ದೀರಾ?. ಇವರ ಕಾಟ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇವರ ಕಾಟ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಗಮನಿಸಿ, ಟ್ರಾಫಿಕ್ ಪೊಲೀಸರ ಕುರಿತೂ ಓದುಗರಿಂದ ಒಂದೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಸಾರ್ವಜನಿಕ ಸ್ನೇಹಿಯಾಗಿ ವರ್ತಿಸಲು ಟ್ರಾಫಿಕ್ ಪೊಲೀಸರು ಇನ್ನಷ್ಟು ಗಮನ ಹರಿಸಬೇಕಿದೆ - ಕನ್ನಡ ಡ್ರೈವ್ ಸ್ಪಾರ್ಕ್.

Most Read Articles

Kannada
English summary
Kannada Drivespark readers comments about traffic police practice of booking traffic offenders on busy traffic junctions. The traffic police have been criticized for focusing more on finding traffic offenders rather than regulating traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X