15,999 ರುಪಾಯಿಗೆ ಬಿಎಂಡಬ್ಲ್ಯು ಎಕ್ಸ್1 ಮನೆಗೆ ಕೊಂಡೊಯ್ಯಿರಿ

Posted By:
To Follow DriveSpark On Facebook, Click The Like Button
ಮರ್ಸಿಡಿಸ್ ಬೆಂಝ್, ಆಡಿ ಮತ್ತು ಬಿಎಂಡಬ್ಲ್ಯು ಕಂಪನಿಗಳ ಐಷಾರಾಮಿ ಕಾರುಗಳ ದರ ಬೆಚ್ಚಿಬೀಳಿಸುವಂತಿರುತ್ತದೆ. ಆದರೆ ಈ ದುಬಾರಿ ಕಾರು ಕಂಪನಿಗಳು ಸಹ ಹೆಚ್ಚು ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತವೆ. ಆದರೂ ಈ ಕಂಪನಿಗಳು ಬ್ರಾಂಡ್ ಮೌಲ್ಯಕ್ಕೆ ದಕ್ಕೆಯಾಗದಂತೆ ದುಬಾರಿ ಕಾರುಗಳನ್ನೇ ಹೆಚ್ಚೆಚ್ಚು ಮಾರಾಟ ಮಾಡುತ್ತವೆ.

ಬಿಎಂಡಬ್ಲ್ಯು ಕಂಪನಿಯ ದುಬಾರಿ ಕಾರುಗಳಲ್ಲಿ ಎಕ್ಸ್1 ಕೂಡ ಪ್ರಮುಖ. ಇದು ಜರ್ಮನ್ ಕಾರು ಕಂಪನಿಯ ಎಂಟ್ರಿ ಲೆವೆಲ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದೆ. ಇದು ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವ ಕಾರಾಗಿದ್ದು, ಹೆವಿ ಟ್ರಾಫಿಕ್ ನಲ್ಲೂ ಇದನ್ನು ಹ್ಯಾಂಡಲ್ ಮಾಡಬಹುದಾಗಿದೆ.

ಬಿಎಂಡಬ್ಲ್ಯು ಎಕ್ಸ್1 ದೆಹಲಿ ಎಕ್ಸ್ ಶೋರೂಂ ದರ ಸುಮಾರು 22 ಲಕ್ಷ ರುಪಾಯಿ ಇದೆ. ಇದೇ ದರಕ್ಕೆ ಟೊಯೊಟಾ ಫಾರ್ಚ್ಯುನರ್ ಮತ್ತು ಷೆವರ್ಲೆ ಕ್ಯಾಪ್ಟಿವಾ ಕಾರುಗಳು ದೊರಕುವುದರಿಂದ ಹೆಚ್ಚು ಜನರು ಎಕ್ಸ್1 ಆಯ್ಕೆ ಮಾಡುತ್ತಾರೆ.

ಜರ್ಮನಿಯ ಕಾರು ಕಂಪನಿ ಬಿಎಂಡಬ್ಲ್ಯುನ ಹಣಕಾಸು ವಿಭಾಗವು ಎಕ್ಸ್1 ಆಕರ್ಷಕತೆಯನ್ನು ಈಗ ಇನ್ನಷ್ಟು ಹೆಚ್ಚಿಸಿದೆ. ಯಾಕೆಂದರೆ ಕಂಪನಿಯು ಆಶ್ಚರ್ಯವೆಂಬಂತೆ ಎಕ್ಸ್1 ಡೌನ್ ಪೇಮೆಂಟ್ ಮತ್ತು ಇನ್ ಸ್ಟಾಲ್ ಮೆಂಟ್ ಕಡಿಮೆ ಮಾಡಿದೆ.

ನಂಬಿದರೆ ನಂಬಿ, ಈ ಐಷಾರಾಮಿ ಕಾರಿಗೆ ಈಗ ಡೌನ್ ಪೇಮೆಂಟ್ ಕೇವಲ 15,999 ರುಪಾಯಿ. ಭಾರತದಲ್ಲಿ ಬಿಎಂಡಬ್ಲ್ಯು ಕಾರುಗಳಲ್ಲಿ ಅತ್ಯಧಿಕ ಕಡಿಮೆಯ ಇಎಂಐ ಇದಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
BMW Finance's Attractive Scheme For the X1 SUV. BMW has stated in its website that the EMI for the X1 is just Rs.15,999. This is quite a low sum considering the car's price.
Story first published: Wednesday, February 22, 2012, 14:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark