ಕಠಿಣ ವಾಹನ ಕಾಯಿದೆಗೆ ಅಸ್ತು ಎಂದ ಸಂಸತ್ತು

Posted By:

 

ಚಾಲಕರೇ ಜೋಕೆ, ಇನ್ನು ಮುಂದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದರೆ ಕಠಿಣ ಕ್ರಮ ಎದುರಿಸಬೇಕಾದೀತು. ಮೋಟರ್ ವೆಹಿಕಲ್ ಆಕ್ಟ್ ನಲ್ಲಿ ಪ್ರಸ್ತಾವಿತ ಬದಲಾವಣೆಗಳನ್ನು ಸಂಸತ್ತು ಗುರುವಾರ ಅಂಗೀಕರಿಸಿದೆ.

ರಾಜ್ಯಸಭೆಯಲ್ಲಿ ನಡೆದ ಬಜೆಟ್ ಸೆಸನಿನಲ್ಲಿ ನೂತನ ಕಾಯಿದೆಗೆ ಸಮ್ಮತಿ ಪಡೆಯಲಾಯಿತು. ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದರೆ, ಸೀಟ್ ಬೆಲ್ಟ್ ಧರಿಸದಿದ್ದರೆ ಅಥವಾ ಸಿಗ್ನಲ್ ಜಂಪ್ ಮಾಡಿದರೆ ಸುಮಾರು 500 ರುಪಾಯಿನಷ್ಟು ದಂಡ ಪಾವತಿಸಬೇಕು.

ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಿದರೆ ಈ ದಂಡ ಎರಡು ಪಟ್ಟು ಹೆಚ್ಚಾಗಲಿದೆ. ಕುಡಿದು ವಾಹನ ಚಲಾಯಿಸುವರ ವಿರುದ್ಧ ನೂತನ ಕಾಯಿದೆ ಹೆಚ್ಚು ಕಠಿಣವಾಗಿದೆ. ರಕ್ತದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಎರಡು ವರ್ಷ ಜೈಲು ಶಿಕ್ಷೆ ಅಥವಾ 5 ಸಾವಿರ ರು. ದಂಡ ಅಥವಾ ಇವೆರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಧರಿಸದೆ ಇರುವುದು ಇತ್ಯಾದಿ ಅಪರಾಧಗಳಿಗೆ 500 ರುಪಾಯಿಯಿಂದ 1,500 ರು.ವರೆಗೆ ದಂಡವಿದೆ. ಮೊಬೈಲ್ ಫೋನ್ ಬಳಸಿ ಪ್ರಥಮ ಬಾರಿಗೆ ಸಿಕ್ಕಿಬಿದ್ದರೆ 500 ರುಪಾಯಿ ದಂಡ. ಇದಢ ತಪ್ಪು ಹಲವು ಬಾರಿ ಮಾಡಿದರೆ 5 ಸಾವಿರ ರು. ದಂಡ ವಿಧಿಸಲಾಗುವುದು. ರಸ್ತೆ ಅಪಘಾತಗಳಿಗೆ ಮೊಬೈಲ್ ಫೋನ್ ಬಳಕೆ ಪ್ರಮುಖ ಕಾರಣವಾಗಿರುವುದರಿಂದ ಈ ವಿಷ್ಯದ ಕುರಿತು ಕಾಯಿದೆ ಹೆಚ್ಚು ಕಠಿಣವಾಗಿದೆ.

ಮೊದಲ ಬಾರಿಗೆ ವೇಗದ ಮಿತಿ ಮೀರಿ ಪ್ರಯಾಣಿಸಿದರೆ 1 ಸಾವಿರ ರುಪಾಯಿ ದಂಡ ನೀಡಬೇಕು. ಈ ತಪ್ಪನ್ನು ಪುನಾರವರ್ತಿಸಿದರೆ 5 ಸಾವಿರ ರು.ವರೆಗೆ ದಂಡ ಪಾವತಿಸಬೇಕಾಗಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

ಓದಿ: ಲೈಸನ್ಸ್ ಇಲ್ಲದೇ ಆನಂದ್ ಆಸ್ನೋಟಿಕರ್ ಮಾಡಿದ ತಪ್ಪು

English summary
Traffic Offenders beware! The union cabinet has approved some sweeping changes in the Motor Vehicle Act through the Motor Vehicle Amendment Bill. According to the new changes, serious traffic offenses such as drunken driving and over speeding will receive fines that are as much as time times higher than current levels.
Story first published: Thursday, March 1, 2012, 15:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark