ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

Posted By:

ಸಾಧಿಸುವ ಛಲವಿದ್ದಲ್ಲಿ ಏನೇ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದೊಂದು ಸ್ಪಷ್ಟ ನಿದರ್ಶನ ಮಾತ್ರ. ತಮಿಳುನಾಡಿನ ಪ್ರತಿಭಾವಂತ ವ್ಯಕ್ತಿಯೊಬ್ಬರು ದೈಹಿಕ ಅಸಮರ್ಥ ವ್ಯಕ್ತಿಗಳ ಚಾಲನೆಗೆ ನೆರವಾಗುವ ರೀತಿಯಲ್ಲಿ ಕಾರುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತಿದ್ದಾರೆ.

ಅಂದ ಹಾಗೆ ನಮ್ಮ ರಸ್ತೆಗಳಲ್ಲಿ ಓಡಾಡುವ ಪ್ರಯಾಣಿಕ ಕಾರುಗಳನ್ನೇ ಉದಯ್ ಕುಮಾರ್ ವಿಶೇಷವಾಗಿಯೂ ಪರಿಷ್ಕೃತಗೊಳಿಸುತ್ತಿದ್ದಾರೆ. ಸ್ವತ: ದೈಹಿಕ ಅಸಾಮರ್ಥ್ಯ ಹೊಂದಿರುವ ಹೊರತಾಗಿಯೂ ಉದಯ್ ಸಾಧನೆಯನ್ನು ಮೆಚ್ಚಲೇ ಬೇಕು.

ಮೂಲತ: ತಮಿಳುನಾಡಿನ ಕುಂಭಕೋಣ ನಿವಾಸಿಯಾಗಿರುವ ಉದಯ್ ಕುಮಾರ್ ಅವರಿಗೆ ಮೂರು ವಯಸ್ಸಿದ್ದಾಗಲೇ ಪೊಲಿಯೋ ಎಂಬ ಮಾರಕ ರೋಗ ಬಾಧಿಸಿತ್ತು. ಆದರೆ ಒಬ್ಬ ಸಾಮಾನ್ಯ ಮನುಷ್ಯನಂತೆ ಕಾರು ಚಲಾಯಿಸುವ ಕನಸು ಅವರನ್ನು ನೂತನ ಅವಿಷ್ಕಾರದ ಯೋಚನೆಗೆ ಎಡೆಮಾಡಿಕೊಟ್ಟಿತ್ತು.

ಇದರಿಂದಲೇ ಸ್ಪೂರ್ತಿ ಪಡೆದ ಉದಯ್ ಕಾರುಗಳ ಸ್ಟೀರಿಂಗ್ ಬಳಿಯಲ್ಲಿ ಬ್ರೇಕ್, ಕ್ಲಚ್ ಹಾಗೂ ಆಕ್ಸಿಲೇಟರ್ ಜೋಡಣೆ ಮಾಡಿದ್ದಾರೆ. ಅಂದರೆ ಕಾರು ಚಲಾವಣೆ ವೇಳೆಯಲ್ಲಿ ಕಾಲಿನಲ್ಲಿ ನಿರ್ವಹಿಸಬಹುದಾದ ಎಲ್ಲ ಕೆಲಸವನ್ನು ಕೈಯಿಂದಲೇ ಮಾಡಬಹುದಾಗಿದೆ. ಈ ಮೂಲಕ ಬ್ರೇಕ್, ಕ್ಲಚ್, ಆಕ್ಸಿಲೇಟರ್ ಮೇಲೆ ಸುಲಭವಾಗಿ ನಿಯಂತ್ರಣ ಸಾಧಿಸಬಹುದಲ್ಲದೆ ಒಬ್ಬ ಸಾಮಾನ್ಯ ಪ್ರಯಾಣಿಕನಂತೆ ಅಂಗವಿಕಲ ವ್ಯಕ್ತಿಯೂ ಆರಾಮದಾಯಕವಾಗಿ ಡ್ರೈವಿಂಗ್ ಮಾಡಬಹುದಾಗಿದೆ.

ಉದಯ್ ಎಂಬ ಪ್ರತಿಭೆ ಇದೀಗ ಭಾರಿ ಜನಮನ್ನಣೆಗೆ ಪಾತ್ರವಾಗುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಉದಯ್ ತಮ್ಮ ಸೇವೆಗಾಗಿ ಸೇವಾ ಶುಲ್ಕವನ್ನು ಪಡೆಯುತ್ತಿಲ್ಲ. ಆದರೆ ಕಾರಿನ ಬಿಡಿಭಾಗ ಜೋಡಣೆಗೆ ಮಾತ್ರ ತಗುಲುವ ವೆಚ್ಚವನ್ನು ಗ್ರಾಹಕರೇ ನೀಡಬೇಕಾಗುತ್ತದೆ. ಮಾರುತಿಯ ಆಲ್ಟೊದಿಂದ ಹಿಡಿದು ದುಬಾರಿ ಪೋರ್ಚುನರ್ ವರೆಗೂ ತಮ್ಮ ತಂತ್ರಜ್ಞಾನದ ಪ್ರಯೋಗ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಾರೆ.

ನಿಜಕ್ಕೂ ಉದಯ್ ಕುಮಾರ್ ಪ್ರಯತ್ನ ಕಾರು ಚಾಲನೆಯ ಕನಸನ್ನು ಹೊಂದಿರುವ ಅಂಗವಿಕಲರಿಗೆ ಹೊಸ ಆಶಾಕಿರಣವಾಗಿದೆ. ಅಂದ ಹಾಗೆ ಆಲ್ಟೊ ಬಿಡಿಭಾಗಗಳಿಗೆ 58,000 ರು.ಗಳಿಂದ ಹಿಡಿದು ಫೋರ್ಚುನರ್‌ಗೆ 1 ಲಕ್ಷ ವರೆಗೂ ವೆಚ್ಚ ತಗಲುತ್ತದೆ.

ಉದಯ್ ಈ ಪ್ರಯತ್ನ ಐಐಟಿ ಮಾನ್ಯತೆ ಪಡೆದಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಅಪೂರ್ವ ಸಾಧನೆ ಮಾಡಿರುವ ಉದಯ್ ಪ್ರಯತ್ನಕ್ಕೆ ಹಾಟ್ಸ್ ಅಪ್ ಹೇಳಲೇಬೇಕು.

To Follow DriveSpark On Facebook, Click The Like Button
ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

ಸ್ಟೀರಿಂಗ್ ಸಮೀಪದಲ್ಲೇ ಕ್ಲಚ್, ಆಕ್ಸಿಲೇಟರ್, ಬ್ರೇಕ್ ನಿಯಂತ್ರಣವನ್ನು ಉದಯ್ ಕುಮಾರ್ ಜೋಡಿಸಿದ್ದಾರೆ.

ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

ಮೂಲತ: ತಮಿಳುನಾಡು ನಿವಾಸಿ ಉದಯ್ ಕುಮಾರ್ ಸಾಧನೆ ಮೆಚ್ಚಲೇಬೇಕು.

ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

ಕಾರಿನ ವೇಗ ನಿಯಂತ್ರಣ ಕೂಡಾ ಮಾಡಬಹುದಾಗಿದೆ.

ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

ಅಂಗವಿಕಲರ ಕನಸು ನನಸಾಗಿಸಿದ್ದ ಉದಯ್ ಕುಮಾರ್ ಸಾಧನೆ.

ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್

ತಮ್ಮ ತಂತ್ರಜ್ಞಾನದ ನೆರವು ಬಯಸುವವರಿಗೆ ಉದಯ್ ಕುಮಾರ್ ಯಾವುದೇ ರೀತಿಯ ಸೇವಾ ಶುಲ್ಕವನ್ನು ವಿಧಿಸುತ್ತಿಲ್ಲ. ಆದರೆ ವಾಹನ ತಯಾರಕ ಕಂಪನಿಗಳಿಗೆ ಮಾತ್ರ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಸ್ತಾಂತರಿಸಲು ನಿರಾಕರಿಸುತ್ತಿದ್ದಾರೆ.

English summary
Uday Kumar a physically challenged car modifier from Kumbakonam, TN is known for his uniqueness. Being physically challenged he has not stopped his passion for driving. Uday Kumar has modified a car, that can suitable for Physically challenged drivers.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark