ನಿಸ್ಸಾನ್ ಸ್ಪೋರ್ಟಿ ಬ್ಯೂಟಿ ಸವಾರಿಗೆ ನಾವು ರೆಡಿ

ಚೆನ್ನೈ ಮೂಲದ ನಿಸ್ಸಾನ್ ಕಂಪನಿಯು ತನ್ನ ಸ್ಪೋರ್ಟ್ ಕಾರನ್ನು ವಿಶೇಷವಾಗಿ ಬೆಂಗಳೂರಿಗೆ ತರಲಿದೆ. ಈ ಟೆಸ್ಟ್ ಡ್ರೈವ್ ನಡೆಯಲಿರುವ ಸ್ಥಳ ಬೆಂಗಳೂರು ನೈಸ್ ರಸ್ತೆ. ಹಿಂದೊಮ್ಮೆ ಸನ್ನಿ ಕಾರನ್ನು ಇಲ್ಲೇ ಡ್ರೈವಿಂಗ್ ಮಾಡಿದ "ಹಿಸ್ಟರಿ" ನಮ್ಮಲ್ಲಿದೆ.
ನಿಸ್ಸಾನ್ 370ಝಡ್ ಕಾರು 350ಝಡ್ ಕಾರಿನ ಬದಲಿಗೆ ರಸ್ತೆಗಿಳಿದಿದೆ. ಈ ಸ್ಪೋರ್ಟ್ 2008ರಲ್ಲಿ ರಸ್ತೆಗಿಳಿದಿತ್ತು. ಜಾಗತಿಕವಾಗಿ ಐಕಾನಿಕ್ ಸ್ಪೋರ್ಟ್ ಕಾರಾಗಿ ಇದು ಖ್ಯಾತಿ ಪಡೆದಿದೆ. ಇದು 3.6 ಲೀಟರಿನ ವಿ6 ಎಂಜಿನ್ ಹೊಂದಿದ್ದು, ಸುಮಾರು 332 ಹಾರ್ಸ್ ಪವರ್ ನೀಡುತ್ತದೆ. ಇದು 7 ಸ್ಪೀಡಿನ ಆಟೋಮ್ಯಾಟಿಕ್ ಮತ್ತು 6 ಸ್ಪೀಡಿನ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತಿದೆ. (ಟೆಸ್ಟ್ ಡ್ರೈವ್)


Click it and Unblock the Notifications








