ಎಫ್12 ಬರ್ಲಿನೆಟ್ಟಾ, ಫೆರಾರಿ ಫ್ಯಾಮಿಲಿಗೆ ಕೆಟ್ಟ ಹುಡುಗನ ಆಗಮನ

Posted By:
ಸೂಪರ್ ಕಾರು ಪ್ರೇಮಿಗಳ ಹೃದಯದ ಬಡಿತ ಲಬೋ ಲಬೋ ಎನಿಸುವ ಸುದ್ದಿಯೊಂದು ಫೆರಾರಿ ಫ್ಯಾಕ್ಟರಿ ಕಡೆಯಿಂದ ಬಂದಿದೆ. ವಾಹನ ಲೋಕಕ್ಕೆ ಎಫ್12 ಬರ್ಲಿನೆಟ್ಟಾನೆಂಬ ಕೆಟ್ಟ ಹುಡುಗ ಆಗಮಿಸಿದ್ದಾನೆ. ರಸ್ತೆಗಳಿಗೆ ಮತ್ತೆ ನಡುಕ ಶುರುವಾಗಿದೆ.

ವೇಗದ ಆವೇಗಕ್ಕೆ ಸೆಡ್ಡುಹೊಡೆಯುವ ಸೂಪರ್ ಕಾರೊಂದನ್ನು ಫೆರಾರಿ ಹೊರತಂದಿದೆ. ನಿನ್ನೆ(ಫೆ29) ಈ ಕಾರಿನ ಚಿತ್ರಗಳನ್ನು ಕಂಪನಿ ಪ್ರದರ್ಶಿಸಿದೆ. ಎಫ್12 ಬರ್ಲಿನೆಟ್ಟಾ ನಾಮಾಂಕಿತ ಈ ಕಾರನ್ನು ಕಂಪನಿಯು ಮಾರ್ಚ್ ಆರರಂದು ಜಿನಿವಾ ವಾಹನ ಪ್ರದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಿದೆ.

ಫೆರಾರಿ ಎಫ್12 ಬರ್ಲಿನೆಟ್ಟಾನೆಂಬ ವಾಹನ ಲೋಕದ ಕೆಟ್ಟ ಹುಡುಗನ ಹೃದಯದ ಹೆಸರು ವಿ12. ಅರ್ಥಾತ್ 6.2 ಲೀಟರಿನ ವಿ12 ಎಂಜಿನ್. ಅವಳಿ ಕ್ಲಚ್ ಎಫ್1 ಟ್ರಾನ್ಸ್ ಮಿಷನ್ ವೇಗದ ಸವಾರಿಗೆ ಸಹಕರಿಸುತ್ತದೆ. ಈ ಕಾರು 8,500 ಆರ್ ಪಿಎಂಗೆ 730 ಅಶ್ವಶಕ್ತಿ ನೀಡುತ್ತದೆ.

ಫೆರಾರಿ 599 ಮುಂದುವರೆದ ಆವೃತ್ತಿಯಾಗಿ ಆಗಮಿಸಿರುವ ಎಫ್12ನಂತಹ ದಕ್ಷ ಎಂಜಿನಿನ ಕಾರೊಂದು ಇಲ್ಲಿವರೆಗೆ ರಸ್ತೆಗಿಳಿದಿಲ್ಲವೆಂದು ಫೆರಾರಿ ಹೇಳಿಕೊಂಡಿದೆ. ಕಂಪನಿಯ ಪ್ರಕಾರ ಇದು ಮಧ್ಯಮ-ಮುಂಭಾಗದಲ್ಲಿ ಎಂಜಿನ್ ಇರುವ ಸ್ಪೋರ್ಟ್ಸ್ ಕಾರು. ವಿ12 ಎಂಜಿನನ್ನು ಬಾನೆಟ್ ಹಿಂಭಾಗದಲ್ಲಿ ಜೋಡಿಸಲಾಗಿದೆಯಂತೆ. ಹೀಗಾಗಿ ಹ್ಯಾಂಡ್ಲಿಂಗ್ ಸುಲಲಿತವೆಂದು ಕಂಪನಿ ಹೇಳಿದೆ.

ನೂತನ ಫೆರಾರಿ ಎಫ್12 ಬರ್ಲಿನೆಟ್ಟೊ ವೇಗದ ಕಾರೆಂಬುದರಲ್ಲಿ ಸಂಶಯವಿಲ್ಲ. ಇದು ಪ್ರತಿಗಂಟೆಗೆ 340 ಕಿ.ಮೀ.ಗಿಂತಲೂ ವೇಗದಲ್ಲಿ ಸಾಗುತ್ತದೆ ಎಂದು ಕಂಪನಿ ಹೇಳಿದೆ. ಕೇವಲ 3.1 ಸೆಕೆಂಡಿನಲ್ಲಿ 0-62 ಕಿ.ಮೀ. ವೇಗ ಪಡೆದುಕೊಳ್ಳಬಹುದು.

ವಾಹನ ಪ್ರೀಯರು ಇಷ್ಟಪಡುವಂತಹ ಸೆಕ್ಸಿ ಸುಂದರಿಯಾಗಿ ಎಫ್12 ಆಗಮಿಸಿದೆ. ಇದು ಹಳೆಯ ಫೆರಾರಿ 599ಗಿಂತ ತುಸು ಚಿಕ್ಕದಾಗಿದೆ. ಸ್ಕಲ್ಗೆಟ್ಟಿ ಎಂಬ ಕಂಪನಿಯೊಂದಿಗಿನ ತಾಂತ್ರಿಕ ಸಹಕಾರದಲ್ಲಿ ಕಂಪನಿಯು ಈ ಸೂಪರ್ ಕಾರನ್ನು ವಿನ್ಯಾಸ ಮಾಡಿದೆ. ಈ ಕಾರಿನ ತೂಕ 1,525 ಕೆ.ಜಿ.

ಮಿಸ್ ಮಾಡ್ಕೊಬೇಡಿ: ಫೆರಾರಿ ಲೋಕದ ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ಓದಿರಿ

ಈ ಕಾರಿನ ಅಂದಾಜು ದರ 250,000 ಪೌಂಡ್. ರೂಪಾಯಿಗೆ ರೂಪಾಂತರಿಸಿದರೆ ಸುಮಾರು 1.9 ಕೋಟಿ ರುಪಾಯಿ. ಭಾರತಕ್ಕೆ ಆಗಮಿಸಿದಾಗ ಸುಂಕ, ಶುಲ್ಕವೆಲ್ಲ ಸೇರಿ ಹಲವು ಕೋಟಿ ರುಪಾಯಿ ದಾಟಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

English summary
Italian sports carmaker Ferrari has released pictures of a brand new super car F12 Berlinetta days before its official unveiling at the Geneva Motor Show. The Ferrari F12 Berlinetta is claimed to be the fastest and most powerful Ferrari ever built.
Story first published: Thursday, March 1, 2012, 11:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark