ಬಿಡುಗಡೆ ಮೊದಲೇ ಇಕೊಸ್ಪೋರ್ಟ್ ಬುಕ್ಕಿಂಗ್?

Posted By:

ಹೊಸ ವರ್ಷಕ್ಕೆ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಖರೀದಿಸಲು ನೀವು ಯೋಜನೆ ಹಾಕಿಕೊಂಡಿದ್ದೀರಾ? ಹಾಗಿದ್ದರೆ ಇನ್ಯಾಕೆ ತಡ ಈವಾಗಲೇ ಸಮೀಪದ ಡೀಲರ್‌ಗಳನ್ನು ಸಮೀಪಿಸಿ. ಯಾಕೆಂದರೆ ಮೂಲಗಳ ಪ್ರಕಾರ ಮುಂದಿನ ವರ್ಷ ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌‍ಯುವಿ ಕಾರಿನ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಈಗಾಗಲೇ ಬ್ರೆಜಿಲ್‌ನಲ್ಲಿ ಬಿಡುಯಾಗಿರುವ ಫೋರ್ಡ್ ಇಕೊಸ್ಪೋರ್ಟ್ ಹೊಸ ವರ್ಷಕ್ಕೆ ದೇಶದ ರಸ್ತೆಗಿಳಿಯಲಿದೆ. ಮುಂದಿನ ಜನವರಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ದೇಶದಲ್ಲಿನ ಫೋರ್ಡ್‌ನ ಮೊದಲ ಎಸ್‌ಯುವಿ ಕಾರನ್ನು ಲಾಂಚ್ ಮಾಡಲಿದ್ದಾರೆ.

ಸಾಮಾನ್ಯವಾಗಿ ಲಾಂಚ್ ದಿನ ನಿಗದಿಯಾದ ಕೂಡಲೇ ಕಾರು ಖರೀದಿ ಗ್ರಾಹಕರು ಬುಕ್ಕಿಂಗ್ ಆರಂಭಿಸುತ್ತಾರೆ. ಅಂತೆಯೇ ಫೋರ್ಡ್ ಡೀಲರ್‌ಗಳು ಇಕೊಸ್ಪೋರ್ಟ್‌ಗಾಗಿ ರು. 25,000ದಿಂದ 50,000 ರು. ವರೆಗೆ ಶುಲ್ಕ ವಿಧಿಸುತ್ತಿದೆ.

ಅಮೆರಿಕದ ಈ ಕಾರು ಕಂಪನಿಯಿಂದ ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್ ಪ್ರಸ್ತುತ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ರೆನೊ ಡಸ್ಟರ್ ಹಾಗೂ ಮಹೀಂದ್ರ ಕ್ವಾಂಟೊಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಇದರ ಕಾಂಪಾಕ್ಟ್ ವಿನ್ಯಾಸ ಹಾಗೂ 1 ಲೀಟರ್ ಇಕೊಸ್ಪೋರ್ಟ್ ಡೀಸೆಲ್ ಎಂಜಿನ್ ಉತ್ತಮ ನಿರ್ವಹಣೆಯ ಭರವಸೆ ನೀಡುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್

ಚೆನ್ನೈ ಸಮೀಪವಿರುವ ಫೋರ್ಡ್ ಘಟಕದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಲಾಂಚ್ ಮಾಡಲಿದ್ದಾರೆ. ನೂತನ ಇಕೊಸ್ಪೋರ್ಟ್ ದರ ಸುಮಾರು 10 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫಿಯೆಸ್ಟಾ ಸೆಡಾನ್ ಪ್ಲಾಟ್ ಪ್ಲಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಇಕೊಸ್ಪೋರ್ಟ್ ದೇಶದಲ್ಲಿ ಪೋರ್ಡ್‌ನಿಂದ ಬಿಡುಗಡೆಯಾಗುತ್ತಿರುವ ಮೊದಲ ಕಾಂಪಾಕ್ಟ್ ಎಸ್‌ಯುವಿ ಕಾರಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಪ್ರಸಕ್ತ ಸಾಲಿನ ಆರಂಭದಲ್ಲೇ ದೆಹಲಿ ಎಕ್ಸ್ ಪೋದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

ಫೋರ್ಡ್ ಇಕೊಸ್ಪೋರ್ಟ್

ಈಗಾಗಲೇ ಪೆಟ್ರೋಲ್ ಎಂಜಿನ್ ಇಕೊಸ್ಪೋರ್ಟ್ ಅವೃತ್ತಿಯು ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಿದೆ. ಅಲ್ಲದೆ ಉತ್ತಮ ಬೇಡಿಕೆಯೂ ಕಂಡುಬಂದಿದೆ.

ಫೋರ್ಡ್ ಇಕೊಸ್ಪೋರ್ಟ್

ಮೂಲಗಳ ಪ್ರಕಾರ ಫೋರ್ಡ್ ಇಕೊಸ್ಪೋರ್ಟ್ ಅನಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಫೋರ್ಡ್ ಇಕೊಸ್ಪೋರ್ಟ್

ಪ್ರಸ್ತುತ ಫೋರ್ಡ್ ಇಕೊಸ್ಪೋರ್ಟ್ ಡೀಸೆಲ್ ಆವೃತ್ತಿ ದೇಶದಲ್ಲಿ ಬಿಡುಗಡೆಯಾಗಲಿದೆ. ಸಮಕಾಲೀನ ಪರಿಸ್ಥಿತಿಯಲ್ಲಿ ಡೀಸೆಲ್ ಕಾರುಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ.

ರಿಯರ್ ವ್ಯೂ

ರಿಯರ್ ವ್ಯೂ

ಇನ್ಯಾಕೆ ತಡ ನಿಮ್ಮ ಸಮೀಪದ ಫೋರ್ಡ್ ಡೀಲರ್‌ಶಿಪ್‌ಗೆ ತೆರಳಿ ಇಕೊಸ್ಪೋರ್ಟ್ ಬುಕ್ಕಿಂಗ್ ಮಾಡಿಸಿ.

English summary
Are you interested to buy the Ford EcoSport Compact SUV? Then you might not actually have to wait for it to be launched to book it. Reports say some Ford dealers have already started taking bookings for the Ford EcoSport discretely

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark