ಈ ಅಪ್ಲಿಕೇಷನ್ ಇದ್ರೆ ಹೆಂಡ್ತಿಗೆ ಸುಳ್ಳು ಹೇಳ್ಬಾರ್ದು

Posted By:
Ford Presents Futuristic Mobile Apps
ಹೆಂಡ್ತಿ ಬಳಿ ಸುಳ್ಳು ಹೇಳೋದು ಕಷ್ಟ. ಆದ್ರೂ ಸುಳ್ಳು ಹೇಳಿ ಬದುಕೋರು ಇದ್ದಾರೆ. ಎಲ್ಲಿದ್ದೀರಿ ರೀ ಎಂದು ಕರೆ ಮಾಡಿದ ಆಕೆಗೆ ಎಲ್ಲೋ ಇರುವ ನೀವು ಆಫೀಸ್ ನಲ್ಲಿದ್ದೀನಿ ಬರೋದು ಸ್ವಲ್ಪ ಲೇಟಾಗುತ್ತೆ ಅನ್ನುತ್ತಿರಬಹುದು. ಆದ್ರೆ ಭವಿಷ್ಯದಲ್ಲಿ ಈ ರೀತಿ ಸುಳ್ಳು ಹೇಳುತ್ತ ಬದುಕೋದು ಕಷ್ಟ.

ಫೋರ್ಡ್ ಕಂಪನಿಯು ಭವಿಷ್ಯದ ಮೊಬೈಲ್ ಅಪ್ಲಿಕೇಷನೊಂದನ್ನು ಪ್ರದರ್ಶಿಸಿದೆ. ಕಂಪನಿ ಅಭಿವೃದ್ಧಿಪಡಿಸುತ್ತಿರುವ ಈ ಆಪ್ ನಮ್ಮ ನಮ್ಮ ಗಮನಕ್ಕೆ ಬಾರದಂತೆ ಫೋನ್ ಮತ್ತು ಕಾರಿನ ನಡುವೆ ಸಂಭಾಷಣೆ ನಡೆಸಲಿದೆ.

ಕಾರು ಮತ್ತು ಫೋನ್ ನಡುವೆ ಸಂವಹನ ನಡೆಸುವ ಅಪ್ಲಿಕೇಷನ್ ಹಲವು ಅನುಕೂಲಗಳನ್ನು ಹೊಂದಿದೆ. ಕಾರಿನ ಕಮ್ಯುನಿಕೇಷನ್ ಸಿಸ್ಟಮ್ ಗಳ ಜೊತೆ ವ್ಯವಹರಿಸುವ ಅಪ್ಲಿಕೇಷನ್ ಚಾಲಕನಿಗೆ ಕೆಲವು ಅಗತ್ಯ ಸಲಹೆಗಳನ್ನು ರವಾನಿಸುತ್ತದೆ. ಫೋರ್ಡ್ ಕಂಪನಿಯ ಪ್ರಕಾರ ಈ ಅಪ್ಲಿಕೇಷನ್ ಮೂಲಕ ಚಾಲಕನ ಆಪ್ತರಿಗೂ ಸಂದೇಶ ಅಥವಾ ಇಮೇಲ್ ರವಾನಿಸಬಹುದಂತೆ.

ಕಾರು ವೇಗದ ಮಿತಿ ಮೀರಿದರೆ ಈ ಆಪ್ ಎಚ್ಚರಿಸುತ್ತದೆ. ಕ್ರಮಿಸಬೇಕಾದ ದೂರವನ್ನು ಅಥವಾ ಕ್ರಮಿಸಿದ ದೂರದ ಮಾಹಿತಿಯನ್ನೂ ಈ ಅಪ್ಲಿಕೇಷನ್ ನೀಡುತ್ತದೆ.ಹೀಗೆ ಹತ್ತು ಹಲವು ಫೀಚರುಗಳಿರುವ ಭವಿಷ್ಯದ ಅಪ್ಲಿಕೇಷನ್ ಅಭಿವೃದ್ಧಿಪಡಿಸುತ್ತಿದೆ ಫೋರ್ಡ್.

ಈ ಅಪ್ಲಿಕೇಷನ್ ದೂರ ಪ್ರಯಾಣ ಮಾಡುವರಿಗೆ ಸಹಕರಿಸಬಹುದು. ನೀವು ಎಲ್ಲಿಗೆ ತಲುಪಿದ್ದೀರಿ. ಯಾವ ರೂಟ್ ನಲ್ಲಿ ಹೋಗುತ್ತಿದ್ದೀರಿ. ಮನೆಯಿಂದ ಎಷ್ಟು ದೂರವಿದ್ದೀರಿ ಇತ್ಯಾದಿ ಮಾಹಿತಿಗಳನ್ನು ನಿಮಗೆ ಮಾತ್ರವಲ್ಲದೇ ನೀವು ಇಷ್ಟಪಟ್ಟ(ಸೇವ್ ಮಾಡಿಟ್ಟ ವಿಳಾಸ)ವರಿಗೆ ಸೆಂಡ್ ಮಾಡುತ್ತದೆ. ಹೀಗಾಗಿ ಈ ಅಪ್ಲಿಕೇಷನ್ ಇದ್ರೆ ಹೆಂಡ್ತಿ ಬಳಿ ಸುಳ್ಳು ಹೇಳಿ ಗೋವಾಕ್ಕೆ ಹೋಗೋ ಆಗಿಲ್ಲ!

English summary
A day will come when your phone and your car will be talking to each other and you will not know about it. Ford has showcased its unique and futuristic mobile phone apps it is developing with its research partners. While most of us think that using a mobile phone while driving will be distraction, Ford begs to differ. The American carmaker wants to integrate the use of the phone with the journey.
Story first published: Tuesday, February 28, 2012, 15:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark