ಜನರಲ್ ಮೋಟಾರ್ಸ್‌ನಿಂದ ಷೆವರ್ಲೆ ಸ್ಪಾರ್ಕ್ ಬಿಡುಗಡೆಗೆ ರೆಡಿ

ಈ ಹಬ್ಬದ ಸೀಸನಿನಲ್ಲಿ ದೇಶದ ಪ್ರತಿಯೊಂದು ವಾಹನ ತಯಾರಕ ಕಂಪೆನಿಗಳು ತಮ್ಮ ತಮ್ಮ ಬ್ರಾಂಡ್‌ಗಳನ್ನು ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇದರಂತೆ ಒಂದರ ಬಳಿಕ ಮತ್ತೊಂದರಂತೆ ಅತ್ಯಾಕರ್ಷಕ ಕಾರುಗಳನ್ನು ಅನಾವರಣಗೊಳಿಸಿದೆ. ಇದೀಗ ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ಸಹ ಷೆವರ್ಲೆ ಸ್ಪಾರ್ಕ್ ಫೇಸ್‌ಲಿಫ್ಟಡ್ ಕಾರನ್ನು ನೂತನ ವಿನ್ಯಾಸದೊಂದಿಗೆ ಭಾರತಕ್ಕೆ ಪ್ರಸ್ತುತಪಡಿಸುತ್ತಿದೆ. ಸದ್ಯ ಲಭಿಸಿರುವ ಮಾಹಿತಿಯಂತೆ ಈ ಬಹುನಿರೀಕ್ಷಿತ ಕಾರು ಅಕ್ಟೋಬರ್ 25ರಂದು ರಸ್ತೆಗಿಳಿಯಲಿದ್ದು, ದರ 3.30ರಿಂದ 4.2 ಲಕ್ಷ ರುಪಾಯಿಗಳ ವರೆಗೆ ಇರುವ ನಿರೀಕ್ಷೆಯಿದೆ.

ನೂತನ ಷೆವರ್ಲೆ ಸ್ಪಾರ್ಕ್ ಕಾರಿನಲ್ಲಿ ಅನೇಕ ಆಧುನಿಕ ಫೀಚರ್‌ಗಳನ್ನು ಆಳವಡಿಸಿರುವುದು ಆಕರ್ಷಕ ವಿನ್ಯಾಸಕ್ಕೆ ಕಾರಣವಾಗಿದೆ. ಈ ಮಾಡೆಲ್ ಅನ್ನು 2007ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶದಲ್ಲಿ ಪರಿಚಯಿಸಲಾಗಿತ್ತು. ಇದೀಗ ಕಂಪನಿಯು ಪರಿಷ್ಕೃತ ಕಾರನ್ನು ಲಾಂಚ್ ಮಾಡಲು ಮುಂದಾಗಿದ್ದು, ಭಾರಿ ನಿರೀಕ್ಷೆಗಳನ್ನು ಹೊಂದಿದೆ.

ಹೊಸ ಸ್ಪಾರ್ಕ್‌ನಲ್ಲಿ ಆಕರ್ಷಕ ಗ್ರಿಲ್ ಹಾಗೂ ಬಂಪರ್ ಆಳವಡಿಸಲಾಗಿದೆ. ಇದರ ಜತೆ ಹೊಸ ಫಾಗ್ ಲ್ಯಾಂಪ್, ಗ್ರಿಲ್ ಕೂಡಾ ಇದೆ. ಕಾರನ್ನು ಇನ್ನಷ್ಟು ಅಂದಗೊಳಿಸಲು ರಿಯರ್ ವ್ಯೂ ಮಿರರ್ ಮತ್ತು ಇಂಟರ್‌ಗ್ರೇಟಡ್ ಟರ್ನ್ ಲೈಟ್ಸ್ ಕೂಡಾ ಸೇರಿವೆ. ಆದರೆ ಎಂಜಿನ್ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಈ ಹಬ್ಬದ ಸೀಸನಿನಲ್ಲಿ ಕಾರು ಖರೀದಿಗಾರರು ನೂತನ ಷೆವರ್ಲೆ ಸ್ಪಾರ್ಕ್ ಆಕರ್ಷಿಸುವ ನಿರೀಕ್ಷೆಯನ್ನು ಕಂಪೆನಿ ಹೊಂದಿದೆ. ನಿಮ್ಮ ಮಾಹಿತಿಗಾಗಿ, ಈ ನೂತನ ಕಾರಿನಲ್ಲಿ 1.0 ಇಂಧನ ದಕ್ಷತೆಯ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇದರಿಂದ ಕಾರಿಗೆ ಅತಿಯಾದ ವೇಗದ ಜತೆ ಉತ್ತಮ ಮೈಲೇಜ್ ಕೂಡಾ ದೊರಕಲಿದೆ.

Most Read Articles

Kannada
English summary
Genaral Motors India is all set to launch its New Chevrolet Spark 2012 on 25th October 2012. New Spark will have new graphics, headlights, fog lamps, a chrome grille and dual-tone front and rear bumpers etc. This version of the Chevrolet spark was first unveiled during the 2010 Auto Expo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X