ನವೆಂಬರ್‌ನಲ್ಲಿ ರಸ್ತೆಗಿಳಿಯಲಿದೆ ಷೆವರ್ಲೆ ಸೈಲ್ ಯು-ವಿಎ

By Nagaraja

ದೇಶದ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ಅತ್ಯಾಕರ್ಷಕ ವಿನ್ಯಾಸಗಳ ನೂತನ ಕಾರುಗಳನ್ನು ಪರಿಚಯಿಸುತ್ತಿರುವ ವಿಶ್ವದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಜನರಲ್ ಮೋಟಾರ್ಸ್ ಇದೀಗ ಮುಂಬರುವ ನವೆಂಬರ್ ತಿಂಗಳಾರಂಭದಲ್ಲಿ ನೂತನ ಷೆವರ್ಲೆ ಸೈಲ್ ಯು-ವಿಎ ಬ್ರಾಂಡ್ ಅನ್ನು ಪರಿಚಯಿಸಲಿದೆ.

ಹೌದು, ಮುಖ್ಯವಾಗಿಯೂ ಭಾರತದ ಹಬ್ಬದ ಸೀಸನ್ ಗುರಿಯಾರಿಸಿಕೊಂಡು ಹ್ಯಾಚ್-ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಜನರಲ್ ಮೋಟಾರ್ಸ್ 3.16 ಲಕ್ಷ ಬಜೆಟ್‌ನ ಎಪಿಜಿ ವೆರಿಯಂಟ್ ಷೆವರ್ಲ್ ಸ್ಪಾರ್ಕ್ ಅನಾವರಣಗೊಳಿಸಿತ್ತು. ಅಲ್ಲದೆ ಈ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಷೆವರ್ಲೆ ಸೈಲ್ ಬಲಿಷ್ಠ ಎಂಜಿನ್

ಷೆವರ್ಲೆ ಸೈಲ್ ಬಲಿಷ್ಠ ಎಂಜಿನ್

ಕಾರು ಖರೀದಿ ಗ್ರಾಹಕರಿಗೆ ಸಿಹಿ ಸುದ್ದಿಯೆಂಬಂತೆ, ಷೆವರ್ಲೆ ಸೈಲ್ ಕಾರು ಡೀಸೆಲ್ ಹಾಗೂ ಪೆಟ್ರೋಲ್ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಈ ನೂತನ ಕಾರಿನ ಪೆಟ್ರೋಲ್ ಆವೃತ್ತಿಯು 1.2 ಲೀಟರಿನ ಆಲ್ ಅಲ್ಯುಮಿನಿಯಂ ಎಂಜಿನ್ ಹಾಗೂ ಡೀಸೆಲ್ ಆವೃತ್ತಿಯು 1.3 ಲೀಟರಿನ ಎಂಜೆಡಿ ಎಂಜಿನ್ ಹೊಂದಿರಲಿದೆ.

ಆಧುನಿಕ ಫೀಚರ್‌ಗಳೊಂದಿಗೆ ಷೆವರ್ಲೆ ಸೈಲ್

ಆಧುನಿಕ ಫೀಚರ್‌ಗಳೊಂದಿಗೆ ಷೆವರ್ಲೆ ಸೈಲ್

ಜನರಲ್ ಮೋಟಾರ್ಸ್ ನೂತನ ಷೆವರ್ಲೆ ಸೈಲ್ ಕಾರನ್ನು ಅತ್ಯಾಧುನಿಕ ಫೀಚರ್‌ಗಳೊಂದಿಗೆ ದೇಶದ ಮಾರುಕಟ್ಟೆಗೆ ಇಳಿಸಲಿದೆ. ಇದು ಫೈವ್ ಡೋರ್ ಹ್ಯಾಚ್‌ಬ್ಯಾಕ್ ಕಾರು ಆಗಿರಲಿದೆ. ಕಾರಿನ ಆಕಾರವೇ ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದ್ದು, ಒಳಗೂ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಾಗಿದೆ.

ಷೆವರ್ಲೆ ಸೈಲ್ ಯು-ವಿಎ

ಷೆವರ್ಲೆ ಸೈಲ್ ಯು-ವಿಎ

ಷೆವರ್ಲೆ ಸೈಲ್ ಕಾರಿನ ಸುರಕ್ಷತೆ ದೃಷ್ಟಿಯಿಂದಲೂ ಅತ್ಯಂತ ಹೆಚ್ಚು ನಿಗಾ ವಹಿಸಲಾಗಿದೆ. ಕಾರಿನ ಫ್ರಂಟ್ ವೀಲ್‌ನಲ್ಲಿ ಎಬಿಎಸ್ ಇಬಿಡಿ ಬ್ರೇಕಿಂಗ್ ಸಿಸ್ಟಂ ಪ್ರಯೋಗಿಸಲಾಗಿದ್ದು, ಇದರಿಂದ ರಭಸದಲ್ಲೂ ಬ್ರೇಕ್ ಹಾಕಿದರೂ ಚಾಲಕನಿಗೆ ಸಮತೋಲನೆ ಲಭಿಸಲಿದೆ. ಇದರ ಜತೆ ರಿಯರ್ ವೀಲ್‌ನಲ್ಲೂ ಗುಣಮಟ್ಟದ ಡ್ರಮ್ ಬ್ರೇಕ್ ಕೂಡಾ ಆಳವಡಿಸಲಾಗಿದೆ.

ಷೆವರ್ಲೆ ಸೈಲ್ ಆಕರ್ಷಕ ಡ್ಯಾಶ್‌ಬೋರ್ಡ್

ಷೆವರ್ಲೆ ಸೈಲ್ ಆಕರ್ಷಕ ಡ್ಯಾಶ್‌ಬೋರ್ಡ್

ಷೆವರ್ಲೆ ಕಾರಿನ ಒಟ್ಟು ಭಾರ 1065 ಕಿಲೋಗ್ರಾಂ ಆಗಿದೆ. ಈ ಕಾರಿನಲ್ಲಿ ಕಂಪೆನಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರಯೋಗ ಮಾಡಿದೆ. ಇದರ ಜತೆ ಕಾರಿನ ಇಂಟಿರಿಯರ್ ಭಾಗಗಳನ್ನು ಉತ್ತಮ ವಿನ್ಯಾಸಗಳೊಂದಿಗೆ ತಯಾರಿಸಿದೆ.

ಷೆವರ್ಲೆ ಸೈಲ್ ಬುಕ್ಕಿಂಗ್ ಆರಂಭ

ಷೆವರ್ಲೆ ಸೈಲ್ ಬುಕ್ಕಿಂಗ್ ಆರಂಭ

ಕಾರಿನ ಹೊರಮೈ ನೋಟ ಕಣ್ಮನ ಸೆಳೆಯುವಂತಿದೆ. ಷೆವರ್ಲೆ ಸೈಲ್ ಅಧುನಿಕ ಫೀಚರ್‌ಗಳೊಂದಿಗೆ ಲಭ್ಯವಾಗಲಿದ್ದು, ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಷೆವರ್ಲೆ ಸೈಲ್ ವಾರಂಟಿ

ಷೆವರ್ಲೆ ಸೈಲ್ ವಾರಂಟಿ

ನೂತನ ಷೆವರ್ಲೆ ಸೈಲ್ ಕಾರಿಗೆ ಒಂದು ಲಕ್ಷ ಕಿಲೋ ಮೀಟರ್ ಹಾಗೂ ಮೂರು ವರ್ಷಗಳ ವಾರಂಟಿ ಲಭಿಸಲಿದೆ. ಇನ್ಯಾಕೆ ತಡ ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಆಕರ್ಷಕಗೊಳಿಸಲು ಷೆವರ್ಲೆ ನಿಮ್ಮದಾಗಿಸಿ.

ಷೆವರ್ಲೆ ಸೈಲ್ ದರ ಮಾಹಿತಿ

ಷೆವರ್ಲೆ ಸೈಲ್ ದರ ಮಾಹಿತಿ

ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಿಗೆ ಹೋಲಿಸಿದಾಗ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಅಂತೆಯೇ ಜನರಲ್ ಮೋಟಾರ್ಸ್ ದೇಶದ ರಸ್ತೆಗೆ ಅನುಸಾರವಾಗಿ ಷೆವರ್ಲೆ ಸೈಲ್ ಕಾರು ತಯಾರು ಮಾಡಿದೆ. ಹಾಗಿದ್ದರೂ ದರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡದಿದ್ದರೂ 4.5 ಲಕ್ಷ ರುಪಾಯಿಗಳ ಅಸುಪಾಸಿನಲ್ಲಿರುವ ಸಾಧ್ಯತೆಗಳಿವೆ.

Most Read Articles

Kannada
English summary
General Motors is planning to increase its car range in Indian market. This time company is considering to launch new Chevrolet Sail hatchback. As per information New Chevrolet Sail will be launch on 2nd of November 2012. Here we are giving Pre-Launch review of Chevrolet Sail.
Story first published: Monday, October 29, 2012, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X