ಜನರಲ್ ಮೋಟರ್ಸ್ ಕಂಪನಿಯಿಂದ ಮೂರು ಸಣ್ಣಕಾರು

Posted By:

ಪ್ರಸಕ್ತ ವರ್ಷ ದೇಶದ ರಸ್ತೆಗೆ ಮೂರು ನೂತನ ಸಣ್ಣಕಾರುಗಳನ್ನು ಪರಿಚಯಿಸುವ ಮೂಲಕ ತನ್ನ ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಲು ಜನರಲ್ ಮೋಟರ್ಸ್ ಇಂಡಿಯಾ ಯೋಜಿಸಿದೆ. ಕಂಪನಿಯು ಈ ಮೂರು ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕವಾಗಿ ತನ್ನ ಮಾರಾಟವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

ಜನರಲ್ ಮೋಟರ್ಸ್ ಕಂಪನಿಯು ನೂತನ ಅವಿಯೊ ಯುವಿ-ಎ ಹ್ಯಾಚ್ ಬ್ಯಾಕ್ ಮತ್ತು ಅವಿಯೊ ನೊಚ್ ಬ್ಯಾಕ್ ಕೈ ಬಿಡಲು ನಿರ್ಧರಿಸಿದೆ. ಈ ಕಾರುಗಳಿಗೆ ಬದಲಾಗಿ ನೂತನ ಸೇಲ್ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಕಾಂಬೊ ಕಾರು ಹೊರತರಲು ನಿರ್ಧರಿಸಿದೆ. ನೂತನ ಸೇಲ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕಲಿದೆ. ಕಂಪನಿಯು ಪ್ರಸಕ್ತ ವರ್ಷದ ಅಂತ್ಯದೊಳಗೆ ಮಲ್ಟಿ ಪರ್ಪೊಸ್ ವೆಹಿಕಲೊಂದನ್ನು ಹೊರತರಲು ಸಹ ನಿರ್ಧರಿಸಿದೆ.

"ದೇಶದ ವಾಹನ ಮಾರುಕಟ್ಟೆಗೆ ಉತ್ಸಾಹ ತರುವಂತಹ ನೂತನ ಕಾರುಗಳನ್ನು ಹೊರತರಲು ನಾವು ನಿರ್ಧರಿಸಿದ್ದೇವೆ. ಹ್ಯಾಚ್ ಬ್ಯಾಕ್ ಮತ್ತು ಸಣ್ಣ ಸೆಡಾನ್ ಕಾರು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಹೀಗಾಗಿ ಸೇಲ್ ಬ್ರಾಂಡನ್ನು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಹೊರತರಲು ಬಯಸಿದ್ದೇವೆ" ಎಂದು ಜಿಎಂ ಇಂಡಿಯಾದ ಅಧ್ಯಕ್ಷರಾದ ಲೊವೆಲ್ ಪಡೊಕ್ ಹೇಳಿದ್ದಾರೆ.

ಇದರೊಂದಿಗೆ ಕಂಪನಿಯು ಷೆವರ್ಲೆ ಸ್ಪಾರ್ಕ್ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಕಂಪನಿಯು ಕೆಲವು ಫೀಚರುಗಳನ್ನು ಸೇರಿಸಿ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆ ಮಾಡಿ ನೂತನ ಸ್ಪಾರ್ಕ್ ಕಾರನ್ನು ಪರಿಚಯಿಸಲಿದೆ. ಕಂಪನಿಯು ಇತ್ತೀಚೆಗೆ ನೂತನ ಕ್ರೂಝ್ ಕಾರನ್ನು ಪರಿಚಯಿಸಿತ್ತು. ಪರಿಷ್ಕೃತ ಎಂಜಿನ್ ಹೊಂದಿರುವ ಕ್ರೂಝ್ ದರ 13.85 ಲಕ್ಷ ರುಪಾಯಿ ಇದೆ.

ಇದೇ ವಾರದಲ್ಲಿ ಕಂಪನಿಯು ನೂತನ ಕ್ಯಾಪ್ಟಿವಾ ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲನ್ನು ಪರಿಚಯಿಸಿತ್ತು. ಒಟ್ಟಾರೆ ಕಂಪನಿಯು ದೇಶದ ವಾಹನ ಮಾರುಕಟ್ಟೆಗೆ ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ವಹಿವಾಟು ವಿಸ್ತರಿಸಲು ಯೋಜಿಸಿದೆ.

English summary
General Motors India is expanding its product range by launching 3 new small cars in India this year. The American carmaker aims at high sales figures with the launch of these new cars.
Story first published: Thursday, June 28, 2012, 15:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark