ಹೀರೊ ಮೊಟೊಕಾರ್ಪ್ ಬೈಕ್ ಗ್ರಾಹಕರಿಗೆ ಒಂದು ಸೂಚನೆ

ಕಂಪನಿಯು ಈಗ ಗ್ರಾಹಕ ಸ್ನೇಹಿ ಸೇವೆಯನ್ನು ಆರಂಭಿಸಲು ಮನಸು ಮಾಡಿದೆ. ಅಂದರೆ ಕಂಪನಿಯು ಹೀರೋ ಗ್ರಾಹಕರಿಗೆ ತಮ್ಮ ಬೈಕುಗಳನ್ನು ಪೋಸ್ಟ್ ವಾರೆಂಟಿ ಮೇಟೆಂನ್ಸ್ ಕ್ಯಾಂಪ್ ಮೂಲಕ ಸರ್ವಿಸ್ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಈ ಕ್ಯಾಂಪ್ ಈಗಾಗಲೇ ಆರಂಭವಾಗಿದ್ದು ಜನವರಿ 25ನೇ ತಾರೀಖು ಕೊನೆಗೊಳ್ಳಲಿದೆ.
ಹೀರೊ ಮೊಟೊಕಾರ್ಪ್ ಗ್ರಾಹಕರು ಈಗಾಗಲೇ ಉಚಿತ ಸರ್ವಿಸ್ ಕೂಪನ್ ಗಳನ್ನು ಮುಗಿಸಿದ್ದರೆ ಚಿಂತಿಸಬೇಕಿಲ್ಲ. ಈ ಕ್ಯಾಂಪ್ ನಲ್ಲಿ ಭಾಗವಹಿಸಬಹುದು ಎಂದು ಕಂಪನಿ ಹೇಳಿದೆ. ಇಷ್ಟು ಮಾತ್ರವಲ್ಲದೇ ಈ ಕ್ಯಾಂಪಿನಲ್ಲಿ ಕಾರ್ಮಿಕ ಶುಲ್ಕದಲ್ಲಿ ಶೇಕಡ 50ರಷ್ಟು ಡಿಸ್ಕೌಂಟ್ ಮಾಡಲಿದೆ. ಬಿಡಿಭಾಗಗಳನ್ನು ಶೇಕಡ 5ರಷ್ಟು ವಿನಾಯಿತಿ ದರದಲ್ಲಿ ನೀಡಲಿದೆ.
ಈ ಕ್ಯಾಂಪನಲ್ಲಿ ಇಂತಹ ಹಲವು ಲಾಭಗಳಿವೆ. ಹೀರೊ ಮೊಟೊಕಾರ್ಪ್ ಬೈಕ್ ಹೊಂದಿದ್ದವರು ಬೈಕನ್ನು ಉಚಿತವಾಗಿ ಚೆಕ್ ಮಾಡಿಸಿಕೊಳ್ಳಬಹುದು ಎಂಬುದು ಕನ್ನಡ ಡ್ರೈವ್ ಸ್ಪಾರ್ಕ್ ಪುಕ್ಕಟೆ ಸಲಹೆ ಮತ್ತು ಸೂಚನೆ.


Click it and Unblock the Notifications








