ಹೋಂಡಾ ಬೈಕ್ ಮತ್ತು ಸ್ಕೂಟರ್ ಮಾರಾಟ ಹೆಚ್ಚಳ

Posted By:
ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(ಎಚ್ಎಂಎಸ್ಐ) ಕಳೆದ ತಿಂಗಳು ಎರಡು ಲಕ್ಷ ಯುನಿಟಿಗಿಂತ ಹೆಚ್ಚು ವಾಹನ ಮಾರಾಟ ಮಾಡಿದೆ. ಜಪಾನಿನ ಕಂಪನಿಯು ದೇಶದಲ್ಲಿ ಹೀರೋ ಜೊತೆ ಕಳೆದ ವರ್ಷ ಮೈತ್ರಿ ಕಡಿದುಕೊಂಡಿತು. ಹೀರೊ ಮೊಟೊಕಾರ್ಪ್ ನೆರವಿಲ್ಲದೆಯೇ ಕಂಪನಿಯು ದೇಶದಲ್ಲಿ ಭರ್ಜರಿ ವಾಹನ ಮಾರಾಟ ಮಾಡುತ್ತಿರುವುದು ವಿಶೇಷ.

2012ರ ಮಾರ್ಚ್ ತಿಂಗಳಲ್ಲಿ ಕಂಪನಿಯು 2,20,487 ಯುನಿಟ್ ವಾಹನ ಮಾರಾಟ ಮಾಡಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯ ಮಾರಾಟ 1,47,301 ಯುನಿಟ್ ಆಗಿತ್ತು. ಇದರಿಂದ ಕಂಪನಿಯ ಮಾರಾಟ ಶೇಕಡ 49.68ರಷ್ಟು ಏರಿಕೆ ಕಂಡಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲೂ ಕಂಪನಿಯ ಒಟ್ಟು ಮಾರಾಟ 21,07,228 ಯುನಿಟ್ ತಲುಪಿದ್ದು, ಇದಕ್ಕೂ ಹಿಂದಿನ ಹಣಕಾಸು ವರ್ಷದ 16,56,727 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 27.19ರಷ್ಟು ಹೆಚ್ಚಾಗಿದೆ.

ಕಳೆದ ತಿಂಗಳು ಕಂಪನಿಯು 82,353 ಯುನಿಟ್ ಬೈಕ್ ಮಾರಾಟ ಮಾಡಿದೆ. ಕಳೆದ ವರ್ಷ ಮಾರ್ಚ್ ತಿಂಗಳ 65,899 ಯುನಿಟ್ ಬೈಕ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 25ರಷ್ಟು ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಕಂಪನಿಯು 1,38,134 ಯುನಿಟ್ ಸ್ಕೂಟರ್ ಮಾರಾಟ ಮಾಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳ 81,402 ಯುನಿಟಿಗೆ ಹೋಲಿಸಿದರೆ ಶೇಕಡ 69.69ರಷ್ಟು ಏರಿಕೆ ದಾಖಲಿಸಿದೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯು ಒಟ್ಟು 12,40,771 ಸ್ಕೂಟರ್ ಮಾರಾಟ ಮಾಡಿದ್ದು ಶೇಕಡ 36.67ರಷ್ಟು ಏರಿಕೆ ದಾಖಲಿಸಿದೆ.

ಹೋಂಡಾ ಆಕ್ಟಿವಾ ಮತ್ತು ಡಿಯೊ ಸ್ಕೂಟರ್ ಮಾರಾಟ ಗಮನಾರ್ಹ ಪ್ರಗತಿ ಕಾಣುತ್ತಿದೆ. ಏವಿಯೇಟರ್ ಮಾರಾಟ ಉತ್ತಮವಾಗಿದ್ದರೂ ಆಕ್ಟಿವಾ ಮತ್ತು ಡಿಯೊ ಹಿಂದಿಕ್ಕಲು ಸಾಧ್ಯವಾಗಿಲ್ಲ. (ಕನ್ನಡ ಡ್ರೈವ್‌ಸ್ಪಾರ್ಕ್)

English summary
Honda’s Sales Up 50% In March 2012. The company has now sold 2,20,487 vehicles in March 2012 as against the 1,47,301 vehicles it sold in March 2011.
Story first published: Tuesday, April 3, 2012, 10:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark