ಶೈನ್, ಟ್ವಿಸ್ಟರ್, ಆಕ್ಟಿವಾ ವೇಟಿಂಗ್ ಪಿರೆಯಿಡ್ ಕಡಿಮೆಯಾಗುತ್ತ?

ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ(ಎಚ್ಎಂಎಸ್ಐ) ಕಂಪನಿಯು ರಾಜಸ್ಥಾನದ ಎರಡನೇ ಘಟಕದಲ್ಲಿ ಉತ್ಪಾದನೆ ಆರಂಭವಾಗಿದೆ. ಇದರಿಂದ ಆಕ್ಟಿವಾ, ಶೈನ್ ಮತ್ತು ಸಿಬಿ ಟ್ವಿಸ್ಟರ್ ದ್ವಿಚಕ್ರ ವಾಹನಗಳ ವೇಟಿಂಗ್ ಪಿರೆಯಿಡ್ ಕಡಿಮೆಯಾಗುವ ನಿರೀಕ್ಷೆಯಿದೆ.

ಆಕ್ಟಿವಾ ಸ್ಕೂಟರುಗಳೆಂದರೆ ಹೆಚ್ಚಿನವರಿಗೆ ಅಚ್ಚುಮೆಚ್ಚು. ಈ ಸ್ಕೂಟರ್ ಬುಕ್ ಮಾಡಿ ಕೈಗೆ ದೊರಕಬೇಕಾದರೆ ಕಡಿಮೆಯೆಂದರೂ ಮೂರು ತಿಂಗಳು ಕಾಯಬೇಕು. ಶೈನ್ ಮತ್ತು ಸಿಬಿ ಟ್ವಿಸ್ಟರ್ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ಕಂಪನಿಯು ಇಲ್ಲಿವರೆಗೆ ಕೇವಲ ಮಾನೆಸರ್ ಘಟಕದಲ್ಲಿ ಮಾತ್ರ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತಿತ್ತು. ಆದರೆ ಇದೀಗ ರಾಜಸ್ಥಾನದ ಎರಡನೇ ಘಟಕದಲ್ಲಿ ಫೆ 14ರಿಂದ ಉತ್ಪಾದನೆ ಆರಂಭಿಸಿದೆ. ಇದರಿಂದಾಗಿ ಈ ಮೂರು ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.

ಈ ಮೂರು ಆವೃತ್ತಿಗಳು ಸ್ಮೂತ್ ಮತ್ತು ದಕ್ಷ ಎಂಜಿನ್ ಮೂಲಕ ಜನಪ್ರಿಯವಾಗಿವೆ. ಹೋಂಡಾ ಆಕ್ಟಿವಾ ದೇಶದ ಅತ್ಯಧಿಕ ಮಾರಾಟದ ಸ್ಕೂಟರಾಗಿದೆ. ಈ ಸ್ಕೂಟರ್ 2000ನೇ ಇಸವಿಯಲ್ಲಿ ರಸ್ತೆಗಿಳಿದಿತ್ತು. ಇತ್ತೀಚೆಗೆ ನೂತನ 110ಸಿಸಿಯ ಆಕ್ಟಿವಾ ರಸ್ತೆಗಿಳಿದಿತ್ತು.

Most Read Articles

Kannada
English summary
Honda Motorcycles and Scooters India (HMSI) has begun production at its second assembly line in its plant in Tapukara, Rajasthan. This will help the Japanese two wheeler manufacturer reduce the waiting periods of its popular models such as the Activa scooter and the Shine and CB Twister motorcycles. Honda has seen a huge jump in demand for its models that has resulted in long waiting lists.
Story first published: Friday, February 17, 2012, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X