ಜನವರಿಯಲ್ಲಿ ಹ್ಯುಂಡೈ ಮಾರಾಟ ಶೇ. 15ರಷ್ಟು ಹೆಚ್ಚಳ

Posted By:
Hyundai India January Sales up 15 Percent
ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ಸ್ ಇಂಡಿಯಾ ಕಳೆದ ತಿಂಗಳು ಕಾರು ಮಾರಾಟವನ್ನು ಶೇಕಡ 15ರಷ್ಟು ಹೆಚ್ಚಿಸಿಕೊಂಡಿದೆ. ಜನವರಿ ತಿಂಗಳಲ್ಲಿ ಕಂಪನಿಯು 49,901 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಜನವರಿಯ 43,316 ಯುನಿಟ್ ಕಾರು ಮಾರಾಟಕ್ಕೆ ಹೋಲಿಸಿದರೆ ಶೇಕಡ 15ರಷ್ಟು ಏರಿಕೆ ಕಂಡಿದೆ.

ಕಂಪನಿಯ ದೇಶಿ ವಾಹನ ಮಾರಾಟ ಅತ್ಯಧಿಕ ಸಂಖ್ಯೆಯಲ್ಲಿದ್ದದ್ದು ಒಟ್ಟಾರೆ ಪ್ರಗತಿಗೆ ನೆರವಾಗಿದೆ. ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ ಸುಮಾರು 33,900 ಕಾರು ಮಾರಾಟ ಮಾಡಿದೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಕಂಪನಿಯು ದೇಶದಲ್ಲಿ ಸುಮಾರು 30,306 ಕಾರು ಮಾರಾಟ ಮಾಡಿದ್ದಾಗಿ ಹ್ಯುಂಡೈ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಮಯದಲ್ಲಿ ಹ್ಯುಂಡೈ ಇಂಡಿಯಾ ಸುಮಾರು 16,001 ಕಾರುಗಳನ್ನು ರಫ್ತು ಮಾಡಿದ್ದು ಶೇಕಡ 22.99ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕಂಪನಿಯ ಮಾರಾಟ 13,010 ಯುನಿಟ್ ಆಗಿತ್ತು.

ಕಂಪನಿಯು ಕಳೆದ ತಿಂಗಳು ಸುಮಾರು 44,960 ಎ2 ಸೆಗ್ಮೆಂಟ್ ಕಾರುಗಳನ್ನು ಮಾರಾಟ ಮಾಡಿದೆ. ಹ್ಯುಂಡೈ ಇಯಾನ್, ಸ್ಯಾಂಟ್ರೊ, ಐ10 ಮತ್ತು ಐ20 ಕಾರುಗಳು ಎ2 ಸೆಗ್ಮೆಂಟಿನಲ್ಲಿವೆ. ಅಸೆಂಟ್ ಮತ್ತು ವೆರ್ನಾ ಸೇರಿದಂತೆ ಎ3 ಸೆಗ್ಮೆಂಟ್ ಕಾರುಗಳ ಮಾರಾಟ 4,797 ಯುನಿಟಿಗೆ ತಲುಪಿದೆ.

English summary
Hyundai Motor India reported 2012 January Sales 15.20 per cent jump. Company total sales touched 49,901 units in January.
Story first published: Thursday, February 2, 2012, 15:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark