ವಾಹನ ಮಾರಾಟದಲ್ಲಿ ನಾವು ಫಸ್ಟ್, ಚೀನಾ ಸೆಕೆಂಡ್

Posted By:
ಸತತ ಎರಡನೇ ವರ್ಷವೂ ವಾಣಿಜ್ಯ ವಾಹನ ಮಾರಾಟದಲ್ಲಿ ದೇಶವು ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಟ್ರಕ್ ಮತ್ತು ಬಸ್ ಮಾರಾಟದಲ್ಲಿ ದೇಶವು ಪ್ರಥಮ ಸ್ಥಾನ ಪಡೆದರೆ ಎದುರಾಳಿ ಚೀನಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2011ರಲ್ಲಿ ಟ್ರಕ್, ಬಸ್ ಮತ್ತು ವಾಣಿಜ್ಯ ವಾಹನ ಮಾರಾಟದಲ್ಲಿ ಶೇಕಡ 11ರಷ್ಟು ಏರಿಕೆ ಕಂಡಿದೆ.

ಆದರೆ ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಮುಖ ಎದುರಾಳಿ ಚೀನಾದ ವಾಣಿಜ್ಯ ವಾಹನ ಮಾರಾಟ ಶೇಕಡ 10ರಷ್ಟು ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಅಮೆರಿಕದ ಟ್ರಕ್ ಮಾರಾಟ ಶೇಕಡ 13ರಷ್ಟು ಏರಿಕೆ ಕಂಡಿದೆ. ಅಮೆರಿಕ ಕೂಡ ವಾಣಿಜ್ಯ ವಾಹನ ಮಾರಾಟದಲ್ಲಿ ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ.

"ಪ್ರಸಕ್ತ ಬಜೆಟಿನಲ್ಲಿ ಅಬಕಾರಿ ಸುಂಕ ಹೆಚ್ಚಾಗಿದದರೂ, ಮುಂಬರುವ ದಿನಗಳಲ್ಲಿಯೂ ವಾಣಿಜ್ಯ ವಾಹನ ಮಾರಾಟದಲ್ಲಿ ಸದೃಢ ಪ್ರಗತಿ ಕಾಣುವ ನಿರೀಕ್ಷೆ ನಮಗಿದೆ" ಎಂದು ದೇಶದ ವಾಹನ ತಯಾರಕರ ಒಕ್ಕೂಟದ ಚೇರ್ಮನ್ ಹೇಳಿದ್ದಾರೆ.

ದೇಶದ ವಾಣಿಜ್ಯ ವಾಹನ ಸೆಗ್ಮೆಂಟಿಗೆ ಡೈಮ್ಲಾರ್ ಎಜಿ, ವೊಲ್ವೊ, ಸ್ಕಾನಿಯಾ, ಎಂಎಎನ್, ನಾವಿಸ್ಟಾರ್, ಕಮಾಜ್ ವಿಕ್ಟ್ರಾ ಮತ್ತು ಹಿನೊ ಮೋಟರ್ಸ್ ಮುಂತಾದ ಜಾಗತಿಕ ಹೂಡಿಕೆದಾರರು ಕೂಡ ಪ್ರವೇಶಿಸುತ್ತಿದ್ದಾರೆ. ಜೊತೆಗೆ ಶಿನೊಟ್ರಕ್ ಇಂಟರ್ ನ್ಯಾಷನಲ್, ಶಾಂದೊಕ್ ಶಿಫೆಂಗ್, ಬೆಕಿ ಫೊಟೊನ್ ಮೋಟರ್ಸ್ ಮುಂತಾದ ಚೈನಾ ಕಂಪನಿಗಳೂ ಬಂದಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
India has emerged top on the commercial vehicle sales chart for the second consecutive year. The country has surpassed all other countries in truck and bus sales including China. India saw a growth of 22% in the sale of commercial vehicles mainly truck, buses and light commercial vehicles in 2011.
Story first published: Saturday, March 31, 2012, 12:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark