ರಿಪೇರಿ ಖರ್ಚು ಕಡಿಮೆ ಮಾಡ್ರಿ, ವಿಮಾ ಕಂಪನಿಗಳ ಆಗ್ರಹ

Posted By:
ವಿಮೆ ಇದೆ ಅಂತಾ ಗೊತ್ತಾದ್ರೆ ಬಿಲ್ ಹೆಚ್ಚಾಗುವುದು ಮಾಮೂಲು. ಆರೋಗ್ಯ ವಿಮೆ ಇದೆಯೆಂದು ತಿಳಿದ್ರೆ ಕೆಲವು ಆಸ್ಪತ್ರೆಗಳು ಜಾಸ್ತಿ ಬಿಲ್ ಬರೆಯುತ್ತವೆ. ಅದೇ ರೀತಿ ವಾಹನ ಕಂಪನಿಗಳ ರಿಪೇರಿ ವೆಚ್ಚ ಕೂಡ ಅಧಿಕವಾಗಿರುತ್ತದೆ. ಇದರಿಂದ ನಷ್ಟವಾಗುವುದು ವಿಮಾ ಕಂಪನಿಗಳಿಗೆ.

ಶೀಘ್ರದಲ್ಲಿ ನಿಮ್ಮ ಕಾರು ರಿಪೇರಿ ಖರ್ಚು ಕಡಿಮೆಯಾಗುವ ಸೂಚನೆಗಳಿವೆ. ಯಾಕೆಂದರೆ ಕಾರು ರಿಪೇರಿ ದರವನ್ನು ಕಡಿಮೆ ಮಾಡುವಂತೆ ಹಲವು ವಿಮಾ ಕಂಪನಿಗಳು ಕಾರು ಕಂಪನಿಗಳನ್ನು ಆಗ್ರಹಿಸಿವೆ. ಇದಕ್ಕೆ ಕಾರು ಕಂಪನಿಗಳು ಸಕಾರಾತ್ಮಕವಾಗಿ ಸ್ಪಂಧಿಸಿವೆಯಂತೆ.

ವಾಹನ ರಿಪೇರಿ ಖರ್ಚು ಭರಿಸುವ ಕಾರಣದಿಂದ ವಾಹನ ಕಂಪನಿಗಳಿಗೆ ವಿಮಾ ಕಂಪನಿಗಳು ಅತ್ಯಧಿಕವಾಗಿ ಹಣ ಪಾವತಿಸುತ್ತಿವೆ. ಇದರಿಂದ ವಿಮಾ ಕಂಪನಿಗಳಿಗೆ ನಷ್ಟವಾಗುತ್ತದೆ. ಇದರಿಂದಾಗಿ ವಿಮಾ ಕಂಪನಿಗಳು ರಿಪೇರಿ ದರ ಕಡಿಮೆ ಮಾಡಿ ಎಂದು ಕಾರು ಕಂಪನಿಗಳಿಗೆ ಸೂಚಿಸಿವೆ.

English summary
The cost of repairing your vehicle is set to slide for the first time in many years after general insurers forced carmakers to reduce repair prices. Carmakers have responded positively to insurers demand for low prices. The insurance sector makes the biggest payment to auto firms for repairs.
Story first published: Thursday, February 2, 2012, 16:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark