ಸ್ಯಾಂಟ್ರೊ ಮಾರಾಟ ನಿಲ್ಲಿಸುವುದೇ ಹ್ಯುಂಡೈ

Posted By:
ಕೊರಿಯಾದ ಕಾರು ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ಸ್, ದೇಶದ ವಾಹನ ಮಾರುಕಟ್ಟೆಯಲ್ಲಿ ಸ್ಯಾಂಟ್ರೊ ಮಾರಾಟ ಸ್ಥಗಿತಗೊಳಿಸಲು ಯೋಜಿಸಿದೆ ಎಂದು ವರದಿಗಳು ಹೇಳಿವೆ. ದೇಶದ ರಸ್ತೆಗೆ 1998ಕ್ಕೆ ಹ್ಯುಂಡೈ ಸ್ಯಾಂಟ್ರೊ ಆಗಮಿಸಿತ್ತು. ಸ್ಯಾಂಟ್ರೊ ಕಾರಿನ ಯಾವುದೇ ಪರಿಷ್ಕೃತ ಆವೃತ್ತಿ ಇಲ್ಲಿವರೆಗೆ ರಸ್ತೆಗಿಳಿದಿಲ್ಲ.

ಹ್ಯುಂಡೈ ಮೋಟರ್ಸ್ 2011ರಲ್ಲಿ ಇಯಾನ್ ಎಂಬ ಸಣ್ಣಕಾರು ಪರಿಚಯಿಸಿದೆ. ಇದಕ್ಕೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದೆ. ದೇಶದಲ್ಲಿ ಅತ್ಯಧಿಕ ಮಾರಾಟವಾಗುವ ಐದು ಕಾರುಗಳಲ್ಲಿ ಇಯಾನ್ ಕಾರಿಗೆ ಒಂದು ಸ್ಥಾನವಿದೆ.

ಒಂದು ಸಮಯದಲ್ಲಿ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದ್ದ ಸ್ಯಾಂಟ್ರೊ ಕಾರಿನ ಮಾರಾಟ ಇತ್ತೀಚೆಗೆ ಗಮನಾರ್ಹವಾಗಿ ಇಳಿಕೆ ಕಂಡಿದೆ. ಹೆಚ್ಚಿನ ಜನರು ಸ್ಯಾಂಟ್ರೊ ಪರ್ಯಾಯವಾಗಿ ಇಯಾನ್ ಕಾರು ಖರೀದಿಸುತ್ತಿದ್ದಾರೆ.

ಹ್ಯುಂಡೈ ಇಯಾನ್ ದರವು 3.28 ಲಕ್ಷ ರು.ನಿಂದ 4.48 ಲಕ್ಷ ರುಪಾಯಿವರೆಗಿದೆ. ಸ್ಯಾಂಟ್ರೊ ದರ 3.48 ಲಕ್ಷ ರು.ನಿಂದ 4.63 ಲಕ್ಷ ರು.ವರೆಗಿದೆ. ಹೀಗಾಗಿ ಇವೆರಡು ಕಾರುಗಳ ದರದಲ್ಲಿ ಪ್ರಮುಖ ವ್ಯತ್ಯಾಸವಿಲ್ಲ.

ಈಗ ಹ್ಯುಂಡೈ ಸ್ಯಾಂಟ್ರೊ ಪೆಟ್ರೋಲ್, ಎಲ್ ಪಿಜಿ ಮತ್ತು ಸಿಎನ್ ಜಿ ಆಯ್ಕೆಗಳಲ್ಲಿ ದೊರಕುತ್ತದೆ. ಆದರೆ ಇಯಾನ್ ಕೇವಲ ಪೆಟ್ರೋಲ್ ಮತ್ತು ಎಲ್ ಪಿಜಿ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಸ್ಯಾಂಟ್ರೊ ಉತ್ಪಾದನೆ ನಿಲ್ಲಿಸುವ ಕುರಿತು ಇಲ್ಲಿವರೆಗೆ ಹ್ಯುಂಡೈ ಯಾವುದೇ ಪ್ರಕಟಣೆ ನೀಡಿಲ್ಲ.

English summary
Korean carmaker Hyundai is reportedly planning to pull of its popular Santro small car from the market. The Santro which was first launched in the market in 1998 has been aging and haven't undergone any major upgrades off late.
Please Wait while comments are loading...

Latest Photos