ಜೇಮ್ಸ್ ಬಾಂಡ್ ಚಿತ್ರದ 5 ಜನಪ್ರಿಯ ಕಾರುಗಳು
ಎಂದೋ ನೋಡಿದ್ದ ಜೇಮ್ಸ್ ಬಾಂಡ್ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ. ಆಕಾಶಕ್ಕೆ ನೆಗೆಯುವ ಅದ್ಭುತ ಕಾರುಗಳು, ಸಾಗರದೊಳಗೆ ಈಜುವ ಕಾರುಗಳು, ಕಾರಿನೊಳಗಿನಿಂದ ಹೊರಬರುವ ಗನ್ ಗಳನ್ನು ನೋಡಿ ಅಬ್ಬಾಬ್ಬಾ ಎಂದವರೆಷ್ಟೋ ಮಂದಿ. ಇಲ್ಲಿದೆ ನೋಡಿ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಬಳಕೆಯಾಗಿದ್ದ ಟಾಪ್ 5 ಕಾರುಗಳ ಝಲಕ್.
ಆಸ್ಟನ್ ಮಾರ್ಟಿನ್ ಡಿಬಿ5: 1964ರಲ್ಲಿ ಗೋಲ್ಡ್ ಫಿಂಗರ್ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ಆಸ್ಟನ್ ಮಾರ್ಟಿನ್ ಡಿಬಿ5 ಕಾರು ಬಳಕೆಯಾಗಿತ್ತು. ನಂತರ ಥಂಡರ್ ಬಾಲ್ ಚಿತ್ರದಲ್ಲೂ ಆಸ್ಟನ್ ಮಾರ್ಟಿನ್ ಡಿಬಿ5 ಬಳಕೆ ಮಾಡಲಾಗಿತ್ತು. ಈ ಕಾರಲ್ಲಿ ರಹಸ್ಯ ಕ್ಯಾಮರಾ, ಬದಲಾವಣೆ ಮಾಡಬಹುದಾದ ನಂಬರ್ ಪ್ಲೇಟ್, ರಹಸ್ಯ ಗನ್‌ಗಳು ಈ ಕಾರಿನಲ್ಲಿದ್ದು ನೋಡುಗರಲ್ಲಿ ಥ್ರಿಲ್ ಮೂಡಿಸಿದ್ದವು. ಜೇಮ್ಸ್ ಬಾಂಡ್ ಚಿತ್ರದಲ್ಲಿ ಬಳಕೆಯಾಗಿದ್ದ ಈ ಆಸ್ಟನ್ ಮಾರ್ಟಿನ್ ಡಿಬಿ4 ಕಾರು 2010ರಲ್ಲಿ 41 ಲಕ್ಷ ಡಾಲರಿಗೆ ಹರಾಜಾಗಿತ್ತು.
ಲೋಟಸ್ ಎಸ್ಪ್ರಿಟ್ ಎಸ್1: ಬಿಳಿಬಣ್ಣದ ಈ ಕಾರನ್ನು 1977ರಲ್ಲಿ ದಿ ಸ್ಪೈ ವೂ ಲವ್ಡ್ ಮೀ ಸಿನಿಮಾದಲ್ಲಿ ಬಳಕೆಮಾಡಲಾಗಿತ್ತು. ಶತ್ರುಗಳಿಂದ ಲೀಲಾಜಾಲವಾಗಿ ಪಾರಾಗಲು ಜೇಮ್ಸ್ ಬಾಂಡ್ ಗೆ ಲೋಟಸ್ ಕಾರು ನೆರವಾಗುತ್ತಿತ್ತು. ಈ ಚಪ್ಪಟೆ ಆಕಾರದ ಕಾರು ಜೇಮ್ಸ್ ಬಾಂಡ್ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.
ಬಿಎಂಡಬ್ಲ್ಯು 750ಐಎಲ್: ಇದು ಕಾರ್ಪೊರೆಟ್ ಸೆಡಾನ್ ಕಾರಿನಂತೆ ಕಾಣುವ ಕಾರು. ಈ ಕಾರನ್ನು "ಟುಮಾರೊ ನೆವರ್ ಡೈಸ್" ಚಿತ್ರದಲ್ಲಿ ಬಳಕೆ ಮಾಡಲಾಗಿತ್ತು. ಈ ಕಾರನ್ನು ರಿಮೋಟ್ ಮೂಲಕ ಜೇಮ್ಸ್ ಬಾಂಡ್ ಚಿತ್ರದಲ್ಲಿ ಕಂಟ್ರೋಲ್ ಮಾಡಲಾಗುತ್ತಿತ್ತು.
ಸಿಟ್ರೊಯಿನ್ 2ಸಿವಿ: ಈ ಕಾರನ್ನು "ಫಾರ್ ಯುವರ್ ಅಯ್ಸ್ ಓನ್ಲಿ" ಚಿತ್ರದಲ್ಲಿ 1981ರಲ್ಲಿ ಬಳಕೆ ಮಾಡಲಾಗಿತ್ತು. ಈ ಕಾರು ನೋಡಲು ಕ್ಲಾಸಿಕ್ ಲುಕ್ ಹೊಂದಿದೆ.
ಆಸ್ಟನ್ ಮಾರ್ಟಿನ್ ವಿ20 ವ್ಯಾಂಗಿಷ್: ಡೈ ಎನೆದರ್ ಡೇ ಸಿನಿಮಾದಲ್ಲಿ ಜೇಮ್ಸ್ ಬಾಂಡ್ ಬಳಸಿದ ಪ್ರಮುಖ ಕಾರಿದು. ಇದರ ಕಾರ್ಯಕ್ಷಮತೆ, ಶಕ್ತಿಶಾಲಿ ಎಂಜಿನ್, ಕಣ್ಮನ ಸೆಳೆಯುವ ವಿನ್ಯಾಸ ಬೆರಗು ಹುಟ್ಟಿಸುತ್ತದೆ.
ಇವಿಷ್ಟು ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಳಕೆಯಾಗಿದ್ದ ಟಾಪ್ 5 ಕಾರುಗಳು.


Click it and Unblock the Notifications









