ವಾಹನ ಸಾಲಕ್ಕೆ ಕರ್ನಾಟಕ ಬ್ಯಾಂಕ್ ಮತ್ತು ಟಾಟಾ ಒಡಂಬಡಿಕೆ

ಮಂಗಳೂರು, ಜೂ 22: ಗ್ರಾಹಕರಿಗೆ ಅನುಕೂಲವಾಗುವಂತೆ ವಾಹನ ಸಾಲ ನೀಡುವ ಕುರಿತಾದ ಒಡಂಬಡಿಕೆ(ಎಂಒಯು)ಗೆ ಕರ್ನಾಟಕ ಬ್ಯಾಂಕ್ ಮತ್ತು ಟಾಟಾ ಮೋಟರ್ಸ್ ಸಹಿ ಹಾಕಿವೆ. ಇದರಿಂದಾಗಿ ಟಾಟಾ ಮೋಟರ್ಸ್ ವಾಹನಗಳನ್ನು ಖರೀದಿಸಲು ಯಾವ ಬ್ಯಾಂಕಿನಿಂದ ಸಾಲ ಪಡೆಯಲಿ ಎಂದು ಯೋಚಿಸುವರು ನಿರಾಳರಾಗಬಹುದು.

ಸಿಜಿಟಿಎಂಎಸ್ಇ(ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್) ಅಡಿಯಲ್ಲೂ ವಾಹನ ಸಾಲ ನೀಡುವುದಾಗಿ ಕರ್ನಾಟಕ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಇದರಡಿ ಸಾಲ ಪಡೆಯಲು ಗ್ರಾಹಕರು ಯಾವುದೇ ಭದ್ರತೆ ಅಥವಾ ಗ್ಯಾರಂಟಿ ನೀಡಬೇಕಿಲ್ಲ.

ಮಂಗಳೂರಿನಲ್ಲಿರುವ ಕರ್ನಾಟಕ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಟಾಟಾ ಮೋಟರ್ಸ್ ಮತ್ತು ಕರ್ನಾಟಕ ಬ್ಯಾಂಕ್ ನೂತನ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕ್ರೆಡಿಟ್-ರಿಟೇಲ್ ಹಣಕಾಸು ವಿಭಾಗದ ಜನರಲ್ ಮ್ಯಾನೆಜರ್ ಮಹಬಲೇಶ್ವರ ಎಂಎಸ್, ಟಾಟಾ ಮೋಟರ್ಸ್ ರಿಟೇಲ್, ಹಣಕಾಸು ಮತ್ತು ವಿಮಾ ವಿಭಾಗದ ಮುಖ್ಯಸ್ಥ ರಮೇಶ್ ದೊರೈರಾಜನ್ ಒಡಂಬಡಿಕೆ ಹಸ್ತಾಂತರಿಸಿಕೊಂಡರು.

ಕರ್ನಾಟಕ ಬ್ಯಾಂಕನ 500ಕ್ಕೂ ಹೆಚ್ಚಿನ ಶಾಖೆಗಳಲ್ಲಿ ಟಾಟಾ ಮೋಟರ್ಸ್ ಗ್ರಾಹಕರು ವಾಹನ ಸಾಲದ ಕುರಿತು ವಿಚಾರಿಸಬಹುದು. ಯಾವ ಕಾರಿಗೆ ಎಷ್ಟು ಬಡ್ಡಿದರ? ಯಾವ ಆಕರ್ಷಕ ಸ್ಕೀಮ್ ನೀಡಲಿದೆ? ಇತ್ಯಾದಿ ಮಾಹಿತಿಯನ್ನು ಕರ್ನಾಟಕ ಬ್ಯಾಂಕ್ ಅಥವಾ ಟಾಟಾ ಮೋಟರ್ಸ್ ಶೀಘ್ರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

Most Read Articles

Kannada
English summary
Tata Motors has now made car loans easier to get at least for the customers of Karnataka Bank. The Indian carmaker has signed a memorandum of understanding with Karnataka Bank to provide easy car loans to the bank's customers. Karnataka Bank has released a press release in this regard.
Story first published: Thursday, June 28, 2012, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X