ಕೀನ್ಯಾದಲ್ಲಿ ಮಹೀಂದ್ರ: ಎಕ್ಸ್‌ಯುವಿ ಕಾರಲ್ಲಿ ಪಯಣ

Posted By:

ದೇಶದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ತಜ್ಞ ಮಹೀಂದ್ರ ಕಂಪನಿಯು ವಿವಿಧ ಎಕ್ಸ್‌ಯುವಿ ಮತ್ತು ಪಿಕಪ್ ವಾಹನಗಳನ್ನು ಕೀನ್ಯಾ ದೇಶದ ವಾಹನ ಮಾರುಕಟ್ಟೆಗೆ ಪರಿಚಯಿಸಿದೆ. ಮಹೀಂದ್ರ ಎಕ್ಸ್‌ಯುವಿ500, ಸ್ಕಾರ್ಪಿಯೊ ಮತ್ತು ಪಿಕಪ್ ಶ್ರೇಣಿಯ ವಾಹನಗಳನ್ನು ಕಂಪನಿಯು ಕೀನ್ಯಾದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಜಿನಿಯೊ ಪಿಕಪ್ ಮತ್ತು ಮ್ಯಾಕ್ಸಿಮೊ ಮಿನಿ ಟ್ರಕ್ ಕೂಡ ಸೇರಿದೆ.

ಕೀನ್ಯಾ ದೇಶದಲ್ಲಿ ಕಂಪನಿಯ ವಾಹನಗಳನ್ನು ಮಾರಾಟ ಮಾಡುವ ಕೆಲಸವನ್ನು ಸಿಂಬಾ ಕಾರ್ಪೊರೇಷನಿಗೆ ನೀಡಲಾಗಿದೆ. ಇದು ಕ್ಷೈಲೊನ್ ಮೋಟರ್ಸ್ ಕಂಪನಿಯ ಡೀಲರ್ ಷಿಪ್ ಆಗಿದೆ. ಮಹೀಂದ್ರ ವಾಹನಗಳಿಗೆ ಬಿಡಿಭಾಗಗಳು, ಸರ್ವಿಸ್, ಆಕ್ಸೆಸರಿಗಳನ್ನೂ ನೀಡುವುದಾಗಿ ಸಿಂಭಾ ಹೇಳಿದೆ.

"ಆಫ್ರಿಕಾ ಕಾಂಟಿನೆಂಟಿಗೆ ಮಾರುಕಟ್ಟೆಯನ್ನು ವಿಸ್ತರಿಸುವ ಭಾಗವಾಗಿ ಕೀನ್ಯಾ ದೇಶಕ್ಕೆ ಮಹೀಂದ್ರ ವಾಹನಗಳನ್ನು ಪರಿಚಯಿಸಲಾಗಿದೆ. ಯುರೋಪ್, ದಕ್ಷಿಣ ಆಫ್ರಿಕಾ, ಈಜಿಪ್ಟ್, ದಕ್ಷಿಣ ಮತ್ತು ಕೇಂದ್ರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಕೀನ್ಯಾದಲ್ಲಿ ನಮ್ಮ ವಾಹನಗಳು ದೊರಕುತ್ತಿದೆ" ಎಂದು ಮಹೀಂದ್ರ ರಫ್ತು ವಹಿವಾಟು ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಸಂಜಯ್ ಯಾದವ್ ಹೇಳಿದ್ದಾರೆ.

ಸ್ಪೋರ್ಟ್ ಯುಟಿಲಿಟಿ ವೆಹಿಕಲ್‌ ಸೆಗ್ಮೆಂಟಿನಲ್ಲಿ ಮಹೀಂದ್ರ ಎಕ್ಸ್‌ಯುವಿ ಆಕರ್ಷಕ ಬೆಲೆಗೆ ದೊರಕುವುದು ಇದರ ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಕಾರಿನ ಆರಂಭಿಕ ದರ 11,38,000 ರು. ಆಗಿದೆ. ಈ ಕಾರಿಗೆ ದೇಶದಲ್ಲಿ ಅತ್ಯಧಿಕ ಬೇಡಿಕೆಯಿದ್ದ ಹಿನ್ನಲೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಎಕ್ಸ್ ಯುವಿ ಪ್ರವೇಶಿಸುವುದು ವಿಳಂಬವಾಗಿತ್ತು.

ಓದಿ: ಮಹೀಂದ್ರ ಎಕ್ಸ್‌ಯುವಿ 500 ಬಗ್ಗೆ ಹೆಚ್ಚಿನ ಮಾಹಿತಿ

English summary
India's largest SUV manufacturer, Mahindra today launched its international range of utility vehicles and pick-ups for the Kenyan market. This included its award winning XUV500 SUV, the Scorpio SUV and Pick Up range, the Genio Pick-Up and the Maxximo mini-truck.
Story first published: Saturday, July 7, 2012, 15:56 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark