ಜಾಗತಿಕ ಮಾರುಕಟ್ಟೆಗೆ ಮಹೀಂದ್ರ ಎಕ್ಸ್‌ಯುವಿ ಲಗ್ಗೆ

Posted By:

ದೇಶದ ಎಸ್‌ಯುವಿ ತಜ್ಞ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಎಕ್ಸ್‌ಯುವಿ 500 ಕೊನೆಗೂ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕಂಪನಿಯು ಆಸ್ಟ್ರೇಲಿಯಾದಲ್ಲಿ ಎಕ್ಸ್‌ಯುವಿ ಬಿಡುಗಡೆ ಮಾಡಿದೆ. ಕಂಪನಿಯು ಕಳೆದ ವರ್ಷವೇ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲು ಯೋಜಿಸಿತ್ತು. ಆದರೆ ದೇಶದ ಜನರು ಕಂಪನಿಯ ನಿರೀಕ್ಷೆಯನ್ನೂ ಮೀರಿ ಎಕ್ಸ್ ಯುವಿಗೆ ಬೇಡಿಕೆಯಿಟ್ಟ ಹಿನ್ನಲೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸುವ ಯೋಜನೆಯನ್ನು ಮುಂದೂಡಲಾಗಿತ್ತು.

ಆಸ್ಟ್ರೇಲಿಯಾದ ರಸ್ತೆ ಸುರಕ್ಷತೆ ಆಡಳಿತ ANCAP ವಿಭಾಗದಿಂದ XUV 500 ಕಾರಿಗೆ ನಾಲ್ಕು ಸ್ಟಾರ್ ದೊರಕಿರುವುದರಿಂದ ಜಾಗತಿಕ ಪ್ರವೇಶ ಸರಾಗವಾಗಿದೆ. ಆಸ್ಟ್ರೇಲಿಯಾದಲ್ಲಿ ಬಹುಬೇಡಿಕೆಯಿರುವ ಹೋಲ್ಡನ್ ಕಂಪನಿಯ ಕ್ಯಾಪ್ಟಿವಾಕ್ಕಿಂತ ಕಡಿಮೆ ದರಕ್ಕೆ ಎಕ್ಸ್ ಯುವಿ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಆಸ್ಟ್ರೇಲಿಯಾದಲ್ಲಿ ಎಕ್ಸ್‌ಯುವಿ ದರ ಕೇವಲ 29.900 ಡಾಲರ್‌ನಿಂದ ಆರಂಭವಾಗುತ್ತದೆ.

ಅಂದರೆ ಎರಡು ವೀಲ್ ಡ್ರೈವ್ ಸಾಮರ್ಥ್ಯದ ಎಕ್ಸ್‌ಯುವಿ 500 ದರ 29,900 ರು. ಮತ್ತು 4 ವೀಲ್ ಡ್ರೈವ್ ಸಾಮರ್ಥ್ಯದ ಆವೃತ್ತಿಗೆ 32,900 ಡಾಲರ್ ನಿಗದಿಪಡಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಷೆವರ್ಲೆ ಕ್ಯಾಪ್ಟಿವಾಕ್ಕಿಂತ ಇದು ತುಂಬಾ ಅಗ್ಗವಾಗಿದೆ.

ಮಹೀಂದ್ರ ಎಕ್ಸ್‌ಯುವಿ 500 ಕಾರು 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದರು 140 ಹಾರ್ಸ್ ಪವರ್ ಮತ್ತು 330ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು ಇತ್ತೀಚೆಗೆ ರಸ್ತೆಗಿಳಿದ ದೇಶದ ಜನಪ್ರಿಯ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದೆ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯೂ ಈಗಲೂ ದೇಶದಲ್ಲಿ ಎಕ್ಸ್‌ಯುವಿ500 ವೇಟಿಂಗ್ ಪಿರೆಯಿಡ್ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಆಸ್ಟ್ರೇಲಿಯಾದಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಲ್ಲಿ ಕಂಪನಿಯಿದೆ.

ಆಸ್ಟ್ರೇಲಿಯಾ ಆವೃತ್ತಿಗೆ ಕಂಪನಿಯು ಕೆಲವು ಪ್ರೀಮಿಯಂ ಫೀಚರುಗಳನ್ನು ಅಳವಡಿಸಲಿದೆ. ಅತ್ಯಧಿಕ ರೆಸಲ್ಯೂಷನ್ ಇರುವ ಕಲರ್ ಎಲ್ ಸಿಡಿ ಟಚ್ ಸ್ಕ್ರೀನ್ ಇರುವ ಸ್ಯಾಟಲೈಟ್ ನ್ಯಾವಿಗೇಷನ್, ಬ್ಲೂಟೂಥ್ ಫೋನ್ ಮತ್ತು ಮ್ಯೂಸಿಕ್ ಸ್ಟ್ರೀಮಿಂಗ್, ಎಲ್ ಇಡಿ ಪಾರ್ಕಿಂಗ್ ಲೈಟ್, ಟೈರ್ ಪ್ರೆಷರ್ ಮಾನಿಟರ್ ಇತ್ಯಾದಿ ಪ್ರೀಮಿಯಂ ಫೀಚರುಗಳು ಇರಲಿವೆ.

ಕಂಪನಿಯು ಈಗಾಗಲೇ ದಕ್ಷಿಣ ಆಫ್ರಿಕಾ ವಾಹನ ಪ್ರದರ್ಶನದಲ್ಲಿ ಎಕ್ಸ್‌ಯುವಿ 500 ಪ್ರದರ್ಶಿಸಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಅಮೆರಿಕದ ಮಾರುಕಟ್ಟೆಗೆ ಎಕ್ಸ್‌ಯುವಿ 500 ಪರಿಚಯಿಸುವ ಯೋಜನೆ ಹೊಂದಿದೆ.

English summary
Mahindra has finally begun what it had hoped to start late last year. The Indian SUV specialist has finally made the XUV 500 a global SUV in the international market by launching it in Australia. Mahindra had always said the XUV 500 was its global model and its plans to launch the XUV in the international market was curtailed due to the high demand in India.
Story first published: Monday, June 18, 2012, 15:15 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark