ಅಧಿಕೃತ: ಮಹೀಂದ್ರ ಕ್ವಾಂಟೊ, ಮುಂದಿನ ತಿಂಗಳು ರಸ್ತೆಗೆ

Posted By:
Mahindra Mini Xylo Officially Named Quanto
ಈಗಾಗಲೇ ಮಿನಿ ಕ್ಷೈಲೊ ಕಾರಿನ ಹೊಸ ಹೆಸರು ಕ್ವಾಂಟೊ ಎಂದು ನಾವು ಕಂಪನಿಯ ಮೂಲಗಳಿಂದ ಸ್ಪಷ್ಟಪಡಿಸಿಕೊಂಡು ವರದಿ ಮಾಡಿದ್ದೇವು. ಇದೀಗ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯೇ ಹೊಸ ಹೆಸರಿನ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಹೊಸ ಹೆಸರು "ಮಹೀಂದ್ರ ಕ್ವಾಂಟೊ" ಎಂದು ತಿಳಿಸಿದೆ.

ನೂತನ ಕ್ವಾಂಟೊ ಕಾರು ಮುಂದಿನ ತಿಂಗಳ ಮಧ್ಯಾವಧಿಯಲ್ಲಿ ರಸ್ತೆಗಿಳಿಯಲಿದೆ. ಇದು ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಸ್ಪೋರ್ಟ್ಸ್ ಯುಟಿಲಿಟಿ ವಾಹನವಾಗಿರಲಿದೆ. ಕಂಪನಿಯು ಪ್ರಸಕ್ತ ವರ್ಷ ದೇಶದ ರಸ್ತೆಗೆ ಪರಿಚಯಿಸುವ ಪ್ರಪ್ರಥಮ ಎಸ್‌ಯುವಿ ಇದಾಗಿದೆ.

ಕ್ವಾಂಟಮ್ ಎಂಬ ಪದವನ್ನು ವಿಭಜಿಸಿ ಕ್ವಾಂಟೊ ಹೆಸರಿಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಕಾರು ಹೆಚ್ಚು ಸ್ಥಳಾವಕಾಶ, ಹೆಚ್ಚು ಶಕ್ತಿಶಾಲಿ, ಹೆಚ್ಚು ಸೀಟುಗಳು ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವುದಾಗಿ ಕಂಪನಿಯು ಹೇಳಿದೆ.

ಕಂಪನಿಯು ಗ್ರಾಹಕರಿಂದ ಸಾಕಷ್ಟು ಫೀಡ್ ಬ್ಯಾಕ್ ಮತ್ತು ವಿವಿಧ ಸಂಶೋಧನೆ ನಡೆಸಿ ನೂತನ ಕ್ವಾಂಟೊ ಕಾರನ್ನು ಅಭಿವೃದ್ಧಿಪಡಿಸಿದೆ. "ದೇಶಕ್ಕೆ ಸಣ್ಣ ಎಸ್‌ಯುವಿ ಅಗತ್ಯವಿರುವುದನ್ನು ಪರಿಗಣಿಸಿ ನೂತನ ಕ್ವಾಂಟೊ ಅಭಿವೃದ್ಧಿಪಡಿಸಲಾಗಿದೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ನ ವಾಹನ ವಿಭಾಗದ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ.

ನೂತನ ಮಹೀಂದ್ರ ಕ್ಯಾಂಟೊ ಆವೃತ್ತಿಯ ದರ ಸುಮಾರು 4.5 ಲಕ್ಷ ರು.ನಿಂದ 5.5 ಲಕ್ಷ ರು. ನಡುವೆ ಇರುವ ನಿರೀಕ್ಷೆಯಿದೆ. ಮಾಮೂಲಿ ಹ್ಯಾಚ್ ಬ್ಯಾಕುಗಳನ್ನು ಖರೀದಿಸುವರನ್ನು ವಿನೂತನ ಸ್ಪೋರ್ಟಿ ವಿನ್ಯಾಸದ ಕ್ವಾಂಟೊ ಕಾರು ಸೆಳೆಯುವ ನಿರೀಕ್ಷೆಯಿದೆ.

ಈ ಹಬ್ಬದ ವೇಳೆಗೆ ರಸ್ತೆಗಿಳಿಯಲಿರುವ ಹತ್ತು ಕಾರುಗಳ ಮಾಹಿತಿ ಬೇಕೆ? ಓದಿ: ಹಬ್ಬಕ್ಕೆ ಬರುವ ಕಾರುಗಳು

English summary
Mahindra and Mahindra has named its soon to be launched compact SUV as the Quanto. The Quanto was previously referred to as the mini Xylo. The new compact SUV will be launched during the second half of September. Built on the Ingenio platform, the Mahindra Quanto is a sub four meter SUV.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark