ಎಕ್ಸ್‌ಯುವಿ500: ಪೆಟ್ರೋಲ್, ಆಟೋಮ್ಯಾಟಿಕ್ ಕಾರ್ ಬರುತ್ತೆ

ಎಕ್ಸ್‌ಯುವಿ 500 ಮಹೀಂದ್ರ ಕಂಪನಿಯ ಪ್ರಪ್ರಥಮ ಜಾಗತಿಕ ಎಸ್‌ಯುವಿ. ದೇಶದ ವಾಹನ ಮಾರುಕಟ್ಟೆಯಲ್ಲಿ ಕಂಪನಿಯ ನಿರೀಕ್ಷೆಯನ್ನೂ ಮೀರಿ ಎಕ್ಸ್‌ಯುವಿ 500 ಬೇಡಿಕೆ ಪಡೆದುಕೊಳ್ಳುತ್ತಿದೆ. ಜೂನ್ 8 ಅಂದರೆ ಇವತ್ತಿನಿಂದ ಮಹೀಂದ್ರ ಎಕ್ಸ್ ಯುವಿ ಬುಕ್ಕಿಂಗ್ ಸಹ ಪುನಾರಂಭಗೊಂಡಿದೆ.

ಕಂಪನಿಯು ಎಕ್ಸ್‌ಯುವಿ 500 ಸ್ಪೋರ್ಟ್ ಕಾರಿನ ವೇಟಿಂಗ್ ಪಿರೆಯಿಡ್ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ರಸ್ತೆಗಳಿಗೂ ಎಕ್ಸ್‌ಯುವಿ 500 ಪರಿಚಯಿಸಲು ಕಂಪನಿ ಯೋಜಿಸಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ಕಂಪನಿಯ ಎಕ್ಸ್‌ಯುವಿ 500 ಕಾರಿನ ಪೆಟ್ರೋಲ್ ಆವೃತ್ತಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಅಭಿವೃದ್ಧಿಯ ಹಂತದಲ್ಲಿದೆಯಂತೆ.

2.2 ಲೀಟರ್ ಡೀಸೆಲ್ ಎಂಜಿನಿನ ಎಕ್ಸ್‌ಯುವಿ ಮಾತ್ರವಲ್ಲದೇ ಕಂಪನಿಯು ಶೀಘ್ರದಲ್ಲಿ ಪೆಟ್ರೋಲ್ ಆವೃತ್ತಿಯನ್ನೂ ಪರಿಚಯಿಸಲಿದೆ. ದೇಶದಲ್ಲಿ ಈಗ ಪೆಟ್ರೋಲ್ ಕಾರಿಗೆ ಬೇಡಿಕೆ ಕಡಿಮೆಯಿದೆ. ಹೀಗಾಗಿ ಕಂಪನಿಯು ಪೆಟ್ರೋಲ್ ಆವೃತ್ತಿ ಪರಿಚಯಿಸಲು ಮೀನಮೇಷ ಎನಿಸುತ್ತಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚಿರುವ ನಿರೀಕ್ಷೆಯಲ್ಲಿ ಕಂಪನಿಯಿದೆ.

XUV500 ಕಾರನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಬೇಕಾದರೆ ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ಆಯ್ಕೆಯಿರುವುದು ಅಗತ್ಯ. ಜಾಗತಿಕ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಹೀಗಾಗಿ ಕಂಪನಿಯು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸೌಲಭ್ಯವಿರು ಎಕ್ಸ್‌ಯುವಿ500 ಸ್ಪೋರ್ಟ್ ಯುಟಿಲಿಟಿ ವೆಹಿಕಲನ್ನೂ ಅಭಿವೃದ್ಧಿಪಡಿಸುತ್ತಿದೆ.

ಒಂದು ಮೂಲದ ಪ್ರಕಾರ ಎಕ್ಸ್‌ಯುವಿ500 ಪೆಟ್ರೋಲ್ ಆವೃತ್ತಿಯನ್ನು ಕಂಪನಿಯು ದೇಶದ ಮಾರುಕಟ್ಟೆಗೆ ಪರಿಚಯಿಸುವುದಿಲ್ಲವಂತೆ. ಆದರೆ ಆಟೋಮ್ಯಾಟಿಕ್ ಗೇರ್ ಕಾರನ್ನು ಖರೀದಿಸುವ ಅವಕಾಶವನ್ನು ಕಂಪನಿಯು ದೇಶದ ಗ್ರಾಹಕರಿಗೆ ನೀಡಲಿದೆ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶೀಘ್ರದಲ್ಲಿ XUV500 ಉತ್ಪಾದನೆಯನ್ನು ಹೆಚ್ಚಿಸಲು ಸಹ ಯೋಜಿಸಿದೆ. ಕಂಪನಿಯು ಈಗ ಪ್ರತಿ ತಿಂಗಳಿಗೆ 3 ಸಾವಿರ ಎಕ್ಸ್ಯುವಿ ಉತ್ಪಾದಿಸುತ್ತಿದ್ದು, ಇದನ್ನು 5 ಸಾವಿರ ಯುನಿಟಿಗೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದೆ.

Most Read Articles

Kannada
English summary
Mahindra will introduce XUV500 Petrol And Automatic Variants. Now Mahindra XUV500 2.2 Litre diesel engine Variants Available in India.
Story first published: Friday, June 8, 2012, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X