ಮಾನೆಸರ್ ಕಿರಿಕ್: ಹೊಸ ಮಾರುತಿ 800 ಆಗಮನ ವಿಳಂಬ

Posted By:
ನವದೆಹಲಿ, ಜು 21: ಮಾನೆಸರ್ ಘಟಕದಲ್ಲಿನ ಗಲಭೆ ಹಿನ್ನಲೆಯಲ್ಲಿ ನೂತನ 800ಸಿಸಿ ಸಣ್ಣಕಾರು ಆಗಮನ ವಿಳಂಬವಾಗಲಿದೆ ಎಂದು ಮಾರುತಿ ಸುಜುಕಿ ಪ್ರಕಟಿಸಿದೆ. ಕಂಪನಿಯು ಮಾರುತಿ 800 ಬದಲಿ ಆವೃತ್ತಿಯೊಂದನ್ನು ಪ್ರಸಕ್ತ ವರ್ಷದ ದೀಪಾವಳಿ ವೇಳೆಗೆ ಪರಿಚಯಿಸಲು ಯೋಜಿಸಿತ್ತು.

"ಹೌದು, ಘಟಕದಲ್ಲಿನ ಗಲಭೆಯಿಂದಾಗಿ ನಾವು 800ಸಿಸಿ ಕಾರನ್ನು ಪರಿಚಯಿಸುವ ಸಮಯವನ್ನು ಮುಂದೂಡಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಶಿಂಝೊ ನಕನಿಶಿ ಹೇಳಿದ್ದಾರೆ.

ಕಂಪನಿಯು ಅತ್ಯಧಿಕ ಇಂಧನ ದಕ್ಷತೆಯ 800ಸಿಸಿ ಕಾರೊಂದನ್ನು ಹಬ್ಬದ ವೇಳೆಗೆ ಪರಿಚಯಿಸುವುದಾಗಿ ಹೇಳಿತ್ತು. ಈ ಕಾರು ಆಲ್ಟೊ ಕಾರಿಗಿಂತ ಹೆಚ್ಚು ದುಬಾರಿಯಾಗಿರಲಿದೆ ಎಂದು ಹೇಳಲಾಗಿತ್ತು. ಗುರ್ ಗಾಂವ್ ಘಟಕದಲ್ಲಿ ನೂತನ ಕಾರಿನ ಉತ್ಪಾದನೆಯನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸುವ ನಿರೀಕ್ಷೆಯಿದೆ.

ನಗರಗಳಲ್ಲಿ 800 ಕಾರಿನ ಮಾರಾಟವನ್ನು ಮಾರುತಿ ಈಗಾಗಲೇ ಸ್ಥಗಿತಗೊಳಿಸಿದೆ. ಆಲ್ಟೋ ಬೇಡಿಕೆ ತುಸು ಕಡಿಮೆಯಾಗಿರುವುದರಿಂದ ನೂತನ 800 ಸಿಸಿ ಕಾರೊಂದರ ಮೂಲಕ ಪಾಲು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಕಂಪನಿ ಹೊಂದಿತ್ತು.

ಮಾನೆಸರ್ ಘಟಕದಲ್ಲಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ನಡುವೆ ಜುಲೈ 18ರಂದು ಆರಂಭವಾದ ಜಗಳವು ಒಂದು ಹತ್ಯೆಯಲ್ಲಿ ಅಂತ್ಯವಾಗಿತ್ತು.ಮಾನವಸಂಪನ್ಮೂಲ ವಿಭಾಗದ ಎಂಡಿ ಅವನೀಶ್ ಕುಮಾರ್ ದೇವ್ ರನ್ನು ನೌಕರರು ಸಜೀವವಾಗಿ ದಹಿಸಿದ್ದರು.

ಓದಿ: ಮಾನೆಸರ್ ಘಟಕವೆಂಬ ಮಾರುತಿ ಅಗ್ನಿ ಪರ್ವತ

English summary
Maruti Suzuki New 800 cc Smallcar launch will delay due to manesar plant violence. Company before scheduled 800 cc car launch during Diwali. MSI MD Shinzo Nakanishi Confirmed reschedule the launch of the 800 cc car.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark