ಡಿಜೈರಿಗಿಂತ ಅಗ್ಗದ ಮಾರುತಿ ಸೆಡಾನಿಗೆ ಸುಸ್ವಾಗತ

Maruti Could Build Cheaper Sedan Above Dzire
ಎಂಟ್ರಿ ಲೆವೆಲ್ ಸ್ವಿಫ್ಟ್ ಡಿಜೈರ್ ಮತ್ತು ಎಸ್ಎಕ್ಸ್4 ಕಾರುಗಳ ನಡುವಿನ ಸೆಗ್ಮೆಂಟಿಗೆ ಹೊಸ ಅಗ್ಗದ ಸೆಡಾನ್ ಕಾರನ್ನು ಪರಿಚಯಿಸಲು ಮಾರುತಿ ಸುಜುಕಿ ಯೋಜಿಸಿದೆ. ಈ ಕಾರಿನ ದರ ಸುಮಾರು 10 ಲಕ್ಷ ರುಪಾಯಿಗಿಂತ ಕಡಿಮೆ ಇರಲಿದೆ.

ಮಾರುತಿ ಸುಜುಕಿ ನೂತನ ಕಾರು ಸ್ವಿಫ್ಟ್ ಡಿಜೈರಿಗಿಂತ ದೊಡ್ಡದಿರಲಿದೆ. ಅಂದರೆ ಈ ಕಾರು ಹೆಚ್ಚು ಲಗೇಜ್ ಸ್ಥಳಾವಕಾಶ ಹೊಂದಿರಲಿದೆ. ಆದರೆ ಈ ಕಾರಿನ ದರ ಮಾರುತಿ ಎಸ್ಎಕ್ಸ್4 ಮಧ್ಯಮ ಗಾತ್ರದ ಸೆಡಾನಿಗಿಂತ ಕಡಿಮೆ ಇರಲಿದೆ.

ಮಾರುತಿ ಸುಜುಕಿ ಕಂಪನಿಯು ಈಗ ಆಲ್ಟೊ ಕೆ10, ಎಸ್ಟಾರ್, ವ್ಯಾಗನಾರ್ ಮತ್ತು ಎಸ್ಟಿಲೊ ಇತ್ಯಾದಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಎಲ್ಲಾ ಕಾರುಗಳ ದರ ಅಷ್ಟೇನೂ ದುಬಾರಿಯಲ್ಲ. ಆದರೆ ಕಂಪನಿ ಇನ್ನು ಮುಂದೆ ಪರಿಚಯಿಸಲಿರುವ ಸೆಡಾನ್ ಕಾರು ಎಸ್ಎಕ್ಸ್4 ಮತ್ತು ಡಿಜೈರ್ ನಡುವೆ ಇರಲಿದೆ. ಈ ಸೆಗ್ಮೆಂಟಿನಲ್ಲಿ ಕಂಪನಿಗೆ ಸದ್ಯಕ್ಕೆ ಯಾವುದೇ ಪೈಪೋಟಿಗಳಿಲ್ಲ.

ಕಂಪನಿಯ ನೂತನ ಅಗ್ಗದ ಸೆಡಾನ್ ಕಾರಿನ ಕುರಿತು ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಕಂಪನಿಯ ಕಡೆಯಿಂದ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಅಲ್ಲಿವರೆಗೆ ಕಾಯೋಣ.

Most Read Articles

Kannada
English summary
Maruti Suzuki may build a new sedan that will be placed between the entry-level Swift Dzire and the SX4 mid-level sedan, said reports. The carmaker is reportedly expecting to gain market share in the below Rs 10 lakh car segment.
Story first published: Thursday, April 5, 2012, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X