ಹೊಸ ಮಾರುತಿ 800 ಕಾರಿನ ಬಗ್ಗೆ ಇನ್ನಷ್ಟು ಮಾಹಿತಿ

Posted By:
ಕೆಲವು ದಿನಗಳ ಹಿಂದೆ ಮಾರುತಿ 800 ಬದಲಿ ಆವೃತ್ತಿ ಬಗ್ಗೆ ಕನ್ನಡ ಡ್ರೈವ್ ಸ್ಪಾರ್ಕ್ ಮಾಹಿತಿ ನೀಡಿತ್ತು. ಇದೀಗ ಹೊಸ ಮಾರುತಿ 800ಸಿಸಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. ಕಂಪನಿಯು ಈ ಕಾರನ್ನು ದೀಪಾವಳಿ ವೇಳೆಗೆ ರಸ್ತೆಗಿಳಿಸಲು ನಿರ್ಧರಿಸಿದೆ. ಕಂಪನಿಯು ಮುಂದಿನ ತಿಂಗಳಿನಿಂದಲೇ ಹೊಸ ಮಾರುತಿ 800 ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ.

ಕೆಲವು ವರದಿಗಳ ಪ್ರಕಾರ ಹೊಸ ಕಾರಿನ ಹೆಸರು ಆಲ್ಟೊ 800 ಎಂದಿರಲಿದೆಯಂತೆ. ಇದು ಹೆಚ್ಚು ಇಂಧನ ದಕ್ಷತೆ ಮತ್ತು ಆಧುನಿಕ ಫೀಚರುಗಳನ್ನು ಹೊಂದಿರುವ ನಿರೀಕ್ಷೆಯಿದೆ. ಮಾರುತಿ 800 ರಸ್ತೆಗಿಳಿದು ಈಗಾಗಲೇ ಬರೋಬ್ಬರಿ 25 ವರ್ಷಗಳು ಕಳೆದಿವೆ. ಆಲ್ಟೊ ರಸ್ತೆಗಿಳಿದು ಕೇವಲ 10 ವರ್ಷವಾಗಿದೆಯಷ್ಟೇ. ಇವೆರಡು ಹಳೆ ಕಾರುಗಳ ಯುಗಳ ಗೀತೆಯಾಗಿ ಹೊಸ 800ಸಿಸಿ ಕಾರು ಆಗಮಿಸಲಿದೆ.

ವಿಶೇಷವೆಂದರೆ ನೂತನ 800 ಕಾರಿಗೆ ಕಂಪನಿಯು ಹೊಸ ಎಂಜಿನ್ ಬಳಸಿಕೊಳ್ಳಲಿದೆ. ನೂತನ ತಂತ್ರಜ್ಞಾನ ಹೊಸ ಎಂಜಿನಿಂದಾಗಿ ಮೈಲೇಜ್ ಹೆಚ್ಚಾಗಲಿದೆ. ಮೂಲಗಳ ಪ್ರಕಾರ ನೂತನ 800 ಕಾರು ಆಲ್ಟೊಗಿಂತ ದುಬಾರಿ ಇರಲಿದೆಯಂತೆ. ಆಲ್ಟೊ ಪ್ಲಾಟ್ ಫಾರ್ಮಿನಲ್ಲೇ ಹೊಸ ಕಾರನ್ನು ಉತ್ಪಾದಿಸುವುದಾಗಿ ಮಾರುತಿ ಸುಜುಕಿ ಹೇಳಿದೆ.

ಈಗ ಮಾರುತಿ ಸುಜುಕಿ 800 ದರ ಸುಮಾರು 2.05 ಲಕ್ಷ ರುಪಾಯಿ ಮತ್ತು 2.3 ಲಕ್ಷ ರುಪಾಯಿ ನಡುವೆ ದೊರಕುತ್ತದೆ. ಮಾರುತಿ ಸುಜುಕಿ ಆಳ್ಟೊ ದರ ಕೂಡ 2.40 ಲಕ್ಷ ರು.ನಿಂದ 3.43 ಲಕ್ಷ ರು.ವರೆಗಿದೆ. ಕಂಪನಿಯು 1 ಸಾವಿರ ಸಿಸಿಯ ಆಲ್ಟೊ ಕೆ10 ಕೂಡ ಮಾರಾಟ ಮಾಡುತ್ತಿದೆ. ಇದರ ದರ 3.14 ಲಕ್ಷ ರು.ನಿಂದ 3.31 ಲಕ್ಷ ರು.ವರೆಗಿದೆ. ನೂತನ ಕಾರಿನ ದರ ಆಲ್ಟೊ ಕೆ10ಗಿಂತಲೂ ದುಬಾರಿಯಿರುವುದು ಸಂಶಯ.

ಮಾರುತಿ ಸುಜುಕಿ ಕಂಪನಿಯು ನೂತನ 800ಸಿಸಿ ಕಾರನ್ನು ಗುರ್ ಗಾಂವ್ ಘಟಕದಲ್ಲಿ ನಿರ್ಮಿಸಲಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಂಪನಿಯು ನೂತನ ಕಾರನ್ನು ಟೆಸ್ಟ್ ಮಾಡುತ್ತಿದೆ. ಈ ದೀಪಾವಳಿಗೆ ಹೊಸ ಕಾರೊಂದು ಖರೀದಿಸಬೇಕೆಂದು ಬಯಸುವರು ಮಾರುತಿ ಹೊಸ ಕಾರಿಗೆ ಕಾಯಬಹುದು.

English summary
Maruti Suzuki is all set to launch its new 800cc car this festive season. The Indian carmaker is planning to bring a new look Alto 800 by Diwali and is expected to begin commercial production of the car this July.
Story first published: Wednesday, June 27, 2012, 12:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark