ಹುರ್ರೆ..! ಮಾರುತಿ ಎರ್ಟಿಗಾ ರಸ್ತೆಗೆ, ದರ 5.89 ಲಕ್ಷ ರು.

Posted By:

ಬಹುನಿರೀಕ್ಷಿತ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಅನಿರೀಕ್ಷಿತವಾಗಿ ಕೆಲವು ಗಂಟೆಗಳಷ್ಟು ಬೇಗನೇ ರಸ್ತೆಗಿಳಿದಿದೆ. ಇದು 1.3 ಲೀಟರ್ ಡಿಡಿಐಎಸ್ ಡೀಸೆಲ್ ಮತ್ತು ನೂತನ 1.4 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದೆ.

ನೂತನ ಎರ್ಟಿಗಾ ಕಾರಿನ ದರ ಆಕರ್ಷಕವಾಗಿದೆ. ಎರ್ಟಿಗಾ ದರ 5.89 ರು.ನಿಂದ 8.45 ಲಕ್ಷ ರುಪಾಯಿವರೆಗಿದೆ. ಮಾರುತಿ ಸುಜುಕಿ ರಿಟ್ಜ್ ಪ್ಲಾಟ್‌ಫಾರ್ಮ್ ಆಧರಿತವಾಗಿ ಬಂದಿರುವ ಎರ್ಟಿಗಾ ಮೊದಲ ನೋಟಕ್ಕೆ ಗಮನಸೆಳೆಯುವಂತಿದೆ. ಹೊಸ ಮಾರುತಿ ಸುಜುಕಿ ಎರ್ಟಿಗಾ ಆರುಬಣ್ಣಗಳ ಆಯ್ಕೆಯಲ್ಲಿ ದೊರಕುತ್ತದೆ.ನೂತನ ಮಾರುತಿ ಸುಜುಕಿ ಎರ್ಟಿಗಾ ಡ್ಯಾಷ್ ಬೋರ್ಡ್, ಸ್ಟಿಯರಿಂಗ್ ವೀಲ್ ಇತ್ಯಾದಿ ಫೀಚರುಗಳು ಸ್ವಿಫ್ಟ್ ಕಾರಿನಿಂದ ಕದ್ದಂತೆ ಭಾಸವಾಗುತ್ತದೆ. ಕಾರಿನ ಇಂಟಿರಿಯರೊಳಗೆ ಹಗುರ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು ಆಕರ್ಷಕವಾಗಿ ಕಾಣುತ್ತದೆ.

To Follow DriveSpark On Facebook, Click The Like Button

ನೂತನ ಮಾರುತಿ ಸುಜುಕಿ ಎರ್ಟಿಗಾ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಮೂರು ಆವೃತ್ತಿಗಳು ಪೆಟ್ರೋಲ್ ಮತ್ತು ಮೂರು ಆವೃತ್ತಿಗಳು ಡೀಸೆಲ್ ಆಯ್ಕೆಯಲ್ಲಿ ದೊರಕುತ್ತದೆ. ಆರು ಬಣ್ಣಗಳ ಆಯ್ಕೆಯಲ್ಲಿ ದೊರಕುತ್ತದೆ.

ನೂತನ 1.4 ಲೀಟರ್ ಪೆಟ್ರೋಲ್ ಮೋಟರ್ ವಿವಿಟಿ ತಂತ್ರಜ್ಞಾನ ಹೊಂದಿದೆ. ಇದು 1372 ಸಿಸಿ ಎಂಜಿನ್ ಹೊಂದಿದ್ದು, 95 ಹಾರ್ಸ್ ಪವರ್ ನೀಡುತ್ತದೆ. ಎರ್ಟಿಗಾ ಡೀಸೆಲ್ ಕಾರು 1.3 ಲೀಟರಿನ ವೇರಿಯೆಬಲ್ ಜಿಯೊಮೆಟ್ರಿ ಟರ್ಬೊ(ವಿಜಿಟಿ) ಎಂಜಿನ್ ಹೊಂದಿದೆ. ಇದೇ ಎಂಜಿನ್ SX4 ಕಾರಿನಲ್ಲೂ ಇದೆ.

ಎರ್ಟಿಗಾ  ಎಲ್ಎಕ್ಸ್ಐ/ಎಲ್‌ಡಿಐ  ವಿಎಕ್ಸ್ಐ/ವಿಡಿಐ  ಝಡ್ಎಕ್ಸ್ಐ/ಝಡ್‌ಡಿಐ
 ಪೆಟ್ರೋಲ್  5.89 ಲಕ್ಷ ರು.  6.60 ಲಕ್ಷ ರು.  7.30 ಲಕ್ಷ ರು.
 ಡೀಸೆಲ್  7.30 ಲಕ್ಷ ರು.  7.60 ಲಕ್ಷ ರು.  8.45 ಲಕ್ಷ ರು
English summary
Maruti Suzuki has today launched the Ertiga MPV with a mouth watering price tag. The Maruti Suzuki Ertiga has a starting price of Rs.5.89 lakhs for the entry level petrol variant and Rs.7.30 lakhs for the diesel variant.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark