ಎರ್ಟಿಗಾ, ಡಿಜೈರ್ ಕಾರುಗಳಿಗೆ ಬೊಂಬಾಟ್ ಬೇಡಿಕೆ

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮೇ ತಿಂಗಳ ಮಾರಾಟ ಶೇಕಡ 5ರಷ್ಟು ಇಳಿಕೆ ಕಂಡಿದೆ. ಆದರೆ ಇದೇ ಸಮಯದಲ್ಲಿ ಕಂಪನಿಯ ಎರ್ಟಿಗಾ ಮತ್ತು ಡಿಜೈರ್ ಕಾರುಗಳ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ.

2012ರ ಮೇ ತಿಂಗಳಲ್ಲಿ ಮಾರುತಿ ಸಣ್ಣ ಪೆಟ್ರೋಲ್ ಕಾರುಗಳ ಮಾರಾಟ ಶೇಕಡ 29ರಷ್ಟು ಇಳಿಕೆ ಕಂಡಿದೆ. ಕಂಪನಿಯ ಜನಪ್ರಿಯ ಆವೃತ್ತಿಗಳಾದ ಆಲ್ಟೊ, 800, ಎಸ್ಟಾರ್ ಮತ್ತು ವ್ಯಾಗನಾರ್ ಬೇಡಿಕೆಯು ಕಡಿಮೆಯಾಗಿದೆ. ಪೆಟ್ರೋಲ್ ದರ ದುಬಾರಿಯಾಗಿರುವುದರಿಂದ ಜನರು ಸಣ್ಣಕಾರುಗಳ ಖರೀದಿ ಕಡಿಮೆ ಮಾಡಿದ್ದೇ ಮಾರಾಟ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಆದರೆ ಕಳೆದ ತಿಂಗಳು ಮಾರುತಿ ಸುಜುಕಿ ಎರ್ಟಿಗಾ ಬುಕ್ಕಿಂಗ್ ಸುಮಾರು 32 ಸಾವಿರ ಯುನಿಟ್ ದಾಟಿದೆ. ಕಂಪನಿಯು ಸುಮಾರು 7 ಸಾವಿರದಷ್ಟು ಎರ್ಟಿಗಾ ಡೆಲಿವರಿ ಮಾಡಿದೆ. ಎರ್ಟಿಗಾ, ಡಿಜೈರ್, ಸ್ವಿಫ್ಟ್ ಡೀಸೆಲ್ ಆವೃತ್ತಿಗಳಿಗೆ ಕಳೆದ ತಿಂಗಳು ಅತ್ಯಧಿಕ ಬೇಡಿಕೆಯಿತ್ತು.

ಮೇ ತಿಂಗಳಲ್ಲಿ ಸುಮಾರು 17,707 ಯುನಿಟ್ ನೂತನ ಡಿಜೈರ್ ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡ 63.8ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯು ನೂತನ ಮಾಡೆಲ್ ಡಿಜೈರ್ ಗೆ ಸಾಕಷ್ಟು ಹೊಸ ಫೀಚರುಗಳನ್ನು ಅಳವಡಿಸಿದ್ದು, ಗ್ರಾಹಕರನ್ನು ಸೆಳೆಯಲು ಕಾರಣವಾಗಿದೆ.

ಡೀಸೆಲ್ ಸ್ವಿಫ್ಟ್ ಬುಕ್ಕಿಂಗ್ ಹೆಚ್ಚಿರುವುದರಿಂದ ವೇಟಿಂಗ್ ಪಿರೆಯಿಡ್ ಕೂಡ ಜಾಸ್ತಿಯಿದೆ. ಆದರೂ ಸಣ್ಣಕಾರು ವಿಭಾಗದಲ್ಲಿ ಸ್ವಿಫ್ಟ್, ಎಸ್ಟಿಲೊ ಮತ್ತು ರಿಟ್ಜ್ ಮಾರಾಟ ಶೇಕಡ 14.7ರಷ್ಟು ಏರಿಕೆ ಕಂಡಿದೆ.

ಆದರೆ ಮಾರುತಿ ಸುಜುಕಿ ಕಂಪನಿಯ ಮಧ್ಯಮ ಗಾತ್ರದ ಎಸ್ಎಕ್ಸ್4 ಮಾರಾಟ ನಿರಾಶದಾಯಕವಾಗಿದೆ. ಕಂಪನಿಯು ಕಳೆದ ತಿಂಗಳು ಕೇವಲ 404 ಎಸ್ಎಕ್ಸ್ ಮಾರಾಟ ಮಾಡಿದೆ. ಆದರೆ ಕಳೆದ ತಿಂಗಳು ಇದರ ಮಾರಾಟ 2,707 ಯುನಿಟ್ ಆಗಿತ್ತು.

2012ರ ಮೇ ತಿಂಗಳಲ್ಲಿ ಕಂಪನಿಯು ಒಟ್ಟಾರೆ 98,884 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ 1,04,073 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 5ರಷ್ಟು ಇಳಿಕೆ ಕಂಡಿದೆ.

Most Read Articles

Kannada
English summary
Maruti Suzuki India reported sales dip 5% in may 2012. Company total sales at 98,884 unit sales in last month. Maruti Suzuki sold 1,04,073 units in May 2011.
Story first published: Friday, June 1, 2012, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X