ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಅನಾವರಣ, ದರ 20 ಲಕ್ಷ

Posted By:

ಮರ್ಸಿಡಿಸ್ ಬೆಂಝ್ ಕಂಪನಿಯು ಆತುರ ಆತುರದಲ್ಲಿ ದೇಶದ ರಸ್ತೆಗೆ ನೂತನ ಬಿ ಕ್ಲಾಸ್ ಸ್ಪೋರ್ಟ್ಸ್ ಟೂರರ್ ಕಾರನ್ನು ಅನಾವರಣ ಮಾಡಿದೆ. ಕಂಪನಿಯ ಆತುರಕ್ಕೆ ಸಾಕ್ಷಿಯಾಗಿ ಲೆಫ್ಟ್ ಹ್ಯಾಂಡ್ ಡ್ರೈವ್(ವಿದೇಶಿ ಆವೃತ್ತಿ) ಕಾರನ್ನು ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಗಿದೆ. ಬಹುಶಃ ದೇಶದ ರಸ್ತೆಗೆ ಆಗಮಿಸಲಿರುವ ಕಾರಿನ ಉತ್ಪಾದನೆ ಇನ್ನೂ ಆರಂಭವಾಗಿಲ್ಲವೆಂದೆನಿಸುತ್ತದೆ.

ನೂತನ ಬಿ-ಕ್ಲಾಸ್ ಕಾರು ದೇಶದ ರಸ್ತೆಗೆ ಸೆಪ್ಟಂಬರ್ ವೇಳೆಗೆ ಆಗಮಿಸಲಿದೆ. ಈ ಕಾರಿನ ಪ್ರಚಾರಕ್ಕಾಗಿ ಕಂಪನಿಯು ಗೌರವ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ನಟರೊಂದಿಗೆ ಅಲ್ಟಿಮೇಟ್ ಟೂರಿಂಗ್(ದೇಶದ್ಯಾಂತ ಪ್ರವಾಸ) ನಡೆಸಲು ಯೋಜಿಸಿದೆ.

ನೂತನ ಬಿ-ಕ್ಲಾಸ್ ಕಾರಿನ ದರ ಸುಮಾರು 20 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ಮರ್ಸಿಡಿಸ್ ಬೆಂಝ್ ಕಂಪನಿಯ ಅಗ್ಗದ ಕಾರಾಗಿರಲಿದೆ. ಕಂಪನಿಯು ಬಿಕ್ಲಾಸ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಹೊರತರಲಿದೆ. ಇದು 7ಜಿ ಡಿಸಿಟಿ ಗೇರ್ ಬಾಕ್ಸ್ ಹೊಂದಿರಲಿದೆ.

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನೂತನ ಬಿಕ್ಲಾಸ್ ಕಾರುಗಳ ಬುಕ್ಕಿಂಗ್ ಆರಂಭವಾಗುವ ನಿರೀಕ್ಷೆಯಿದೆ. ದೇಶದ ಯುವಪೀಳಿಗೆಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಕಂಪನಿಯು ನೂತನ ಕಾರನ್ನು ಹೊರತರಲಿದೆ.

ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಆಡಿ ಮತ್ತು ಬಿಎಂಡಬ್ಲ್ಯು ದೆಸೆಯಿಂದ ಮರ್ಸಿಡಿಸ್ ಬೆಂಝಿಗೆ ಮೂರನೇ ಸ್ಥಾನಕ್ಕೆ ಸರಿದಿದೆ. ಕಳೆದುಕೊಂಡ ಮಾರುಕಟ್ಟೆ ಪಾಲನ್ನು ಮತ್ತೆ ಸ್ವಾಧೀನಗೊಳಿಸಲು ಬೆಂಝ್ ಕಂಪನಿಗೆ ನೂತನ ಬಿ-ಕ್ಲಾಸ್ ಕಾರುಗಳು ನೆರವಾಗುವುದೇ ಕಾದು ನೋಡಬೇಕಿದೆ.

English summary
Mercedes Benz India has unveiled the B-Class in India at the Buddh International Circuit, Greater Noida. Mercedes Benz calls the B-Class a sports tourer which offers comfort of a sedan, flexibility of an MPV and qualities of an SUV.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark