ಆಹಾ ಬ್ಲ್ಯಾಕ್ ಬ್ಯೂಟಿ ಫಿಗರ್ ನೋಡಿದ್ರಾ..?

Written By:

ಹೌದು, ಇವಳು ಬ್ಲ್ಯಾಕ್ ಬ್ಯೂಟಿ. ಇದು ವಿಶ್ವದ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಮೆರ್ಸಿಡಿಸ್ ಬೆಂಝ್‌ನಿಂದ ಆಗಮನವಾಗುತ್ತಿರುವ ನೂತನ 2014 ಎಂವೈ ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್ ಸ್ಪೋರ್ಟ್ಸ್ ಕಾರಿದು. ಈ ಹಿಂದಿನ ಎಸ್‌ಎಲ್‌ಎಸ್ ಎಎಂಜಿ ಜಿಟಿ3 ಆವೃತ್ತಿದಿಂದ ಸ್ಪೂರ್ತಿ ಪಡೆದು ಪರಿಷ್ಕೃತ ಕಾರು ಇನ್ನು ಕೆಲವೇ ಸಮಯದೊಳಗೆ ರಿಲೀಸ್ ಮಾಡಲಾಗುತ್ತದೆ.

ಮರ್ಸಿಡಿಸ್ ಎಎಂಜಿನಿಂದ ಆಗಮನವಾಗಲಿರುವ ಬ್ಲ್ಯಾಕ್ ಸಿರೀಸ್‌ನ ಐದನೇ ಮಾಡೆಲ್ ಉಸಿರು ಬಿಗಿ ಹಿಡಿಯುವಂತಹ ವಿನ್ಯಾಸ, ಮಹೋನ್ನತ ಡ್ರೈವಿಂಗ್ ಡೈನಾಮಿಕ್ಸ್ ಸಹಿತ ಎಎಂಜಿ ಲೈಟ್‌ವೇಟ್ ನಿರ್ವಹಣಾ ತಂತ್ರಗಾರಿಕೆಯನ್ನು ಹೊಂದಿರಲಿದೆ.

6.3 ಲೀಟರ್ ವಿ8 ಎಂಜಿನ್ ಹೊಂದಿರುವ ಮರ್ಸಿಡಿಸ್ ಎಎಂಜಿ 7,400 ಆರ್‌ಪಿಎಂನಲ್ಲಿ 622 ಹಾರ್ಸ್ ಪವರ್ ಉತ್ಪಾದಿಸಲಿದೆ. ಲೈಟ್ ಅಲಾಯ್ ವೀಲ್ ಸಹಿತ ನೂತನ ಸ್ಪೋರ್ಟ್ಸ್ ಟಯರ್‌ಗಳು ಕಾರಿನ ಆಕರ್ಷವನ್ನು ಹೆಚ್ಚಿಸಿದೆ.

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

7 ಸ್ಪೀಡ್ ಸ್ಪೋರ್ಟ್ಸ್ ಟ್ರಾನ್ಸ್‌ಮಿಷನ್ ಹೊಂದಿರುವ 2014ಎಂವೈ ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್ ಮುಂದಿನ ವರ್ಷ ಅಮೆರಿಕ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್ ಕಾರು ತಯಾರಿಸಲಾಗಿದೆ. ಉತ್ತಮ ಡ್ರೈವಿಂಗ್ ನಿರ್ವಹಣೆಯು ಕಾರಿನ ಪ್ರಮುಖ ಪೀಚರ್ಸ್ ಆಗಿದೆ ಎಂದು ಮರ್ಸಿಡಿಸ್ ಅಭಿಪ್ರಾಯಪಟ್ಟಿದೆ.

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

ಹೈಟೆಕ್ ಪ್ಯಾಕೆಜ್ ಜತೆ ಗರಿಷ್ಠ ನಿರ್ವಹಣೆಯ ಸೂಪರ್ ಸ್ಫೋರ್ಟ್ಸ್ ಕಾರಿಗಳಿಗೆ ಅಭಿಮಾನಿಗಳು ಮಾರು ಹೋಗುತ್ತಾರೆ. ಇದನ್ನೇ ಪ್ರಮುಖವಾಗಿಯಾಗಿರಿಸಿಕೊಂಡು ಕಾರಿನ ಎಂಜಿನ್, ಟ್ರಾನ್ಸ್‌ಮಿಷನ್, ಸಸ್ಪೆಷನ್ ಹಾಗೂ ಏರೋಡೈನಾಮಿಕ್‌ಗಳನ್ನು ಅಭವೃದ್ಧಿಪಡಿಸಲಾಗಿದೆ.

ಪ್ರಮುಖ ಫೀಚರ್ಸ್

ಪ್ರಮುಖ ಫೀಚರ್ಸ್

ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್

ಡಿಸ್‌ಪ್ಲೇಸ್‌ಮೆಂಟ್: 6208 ಸಿಸಿ

ಬೋರ್ x ಸ್ಟ್ರೋಕ್: 4.02 x 3.72 ಇಂಚು

ಕಂಪ್ರೆಷನ್ ಅನುಪಾತ: 11.3 : 1

ಔಟ್‌ಪುಟ್: 622 hp at 7,400 rpm

ಮಾಕ್ಸ್. ಟರ್ಕ್ಯೂ: 468 lb-ft at 5,500 rpm

ಮಾಕ್ಸಿಮಮ್ ಎಂಜಿನ್ ಸ್ಪೀಡ್: 8,000 rpm

ಎಂಜಿನ್ ಭಾರ: 452 lbs

ವೇಗವರ್ಧನೆ 0-60 mph: 3.5 s

ಗರಿಷ್ಠ ವೇಗ: 196 mph

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

ಪರಿಷ್ಕೃತ ಎಂಜಿನ್‌ನಿಂದ ಹೆಚ್ಚಿನ ಪವರ್ ಉತ್ಪಾದನೆ.

ಟರ್ಕ್ಯೂ ಟ್ಯೂಬ್

ಪರಿಷ್ಕೃತ ಎಎಂಜಿ ಸ್ಪೀಡ್ ಸೆನ್ಸಿಟೀವ್ ಪವರ್ ಸ್ಟೀರಿಂಗ್

ಗರಿಷ್ಠ ನಿರ್ವಹಣೆಯ ಟು ಪೀಸ್ ಸೆರಾಮಿಕ್ ಬ್ರೇಕ್

ಪರಿಷ್ಕೃತ ಎಎಂಜಿ ಸ್ಪೀಡ್ ಶಿಫ್ಟ್ ಡಿಸಿಟಿ 7 ಸ್ಪೀಡ್ ಸ್ಪೋರ್ಟ್ಸ್ ಟ್ರಾನ್ಸ್‌ಮಿಷನ್

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

ಎಎಂಜಿ ಕಾರ್ಬನ್ ಫೈಬರ್ ಎಕ್ಸ್‌ಟೀರಿಯರ್ ಮಿರರ್

ಎಎಂಜಿ ಕಾರ್ಬನ್ ಫೈಬರ್ ಎಂಜಿನ್ ಕವರ್

ಎಎಂಜಿ ಇಂಟಿರಿಯರ್ ಕಾರ್ಬನ್ ಫೈಬರ್ ಪ್ಯಾಕೆಜ್

ಎಎಂಜಿ ಏರೋಡೈನಾಮಿಕ್ ಪ್ಯಾಕೆಜ್

ಪೊಲಿಷ್ಡ್ ರಿಮ್, ಬ್ಲ್ಯಾಕ್ ವೀಲ್

ಮರ್ಸಿಡಿಸ್ ಬೆಂಝ್ ಬ್ಲ್ಯಾಕ್ ಬ್ಯೂಟಿ

ಮುಂಬರುವ ಲಾಸ್ ಏಂಜಲೀಸ್ ಆಟೋ ಷೋದಲ್ಲಿ ನೂತನ ಮರ್ಸಿಡಿಸ್ ಎಎಂಜಿ ಕಾರು ಪ್ರದರ್ಶನಗೊಳ್ಳಲಿದ್ದು, ಭಾರಿ ಜನಮನ್ನಣೆ ಪಡೆಯುವ ನಿರೀಕ್ಷೆಯಿದೆ.

English summary
German Luxury car maker Mercedes Benz has released the AMG Black series sports car images. The new car will be displayed in upcoming 2012 Los Angels Auto Show.
Story first published: Tuesday, November 20, 2012, 12:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark