ರೇಸಿಂಗ್ ದುನಿಯಾಕ್ಕೆ ಮೈಕಲ್ ಶೂಮಕರ್ ಅಲ್‌ವಿದಾ

ಏಳು ಬಾರಿಯ ವಿಶ್ವ ಚಾಂಪಿಯನ್ ಮೈಕಲ್ ಶೂಮಕರ್ ಫಾರ್ಮುಲಾ ಒನ್ ರೇಸಿಂಗ್ ಜಗತ್ತಿಗೆ ಎರಡನೇ ಬಾರಿ ವಿದಾಯ ಹಾಡಲು ನಿರ್ಧರಿಸಿದ್ದಾರೆ. ಈ ಸೀಸನಿನ ಬಳಿಕ ಫಾರ್ಮುಲಾ ಒನ್‌ಗೆ ನಿವೃತ್ತಿ ಹೇಳಲು ಇಚ್ಛಿಸುತ್ತಿದ್ದೇನೆ. ಹಾಗಿದ್ದರೂ ವಿಶ್ವ ಶ್ರೇಷ್ಠ ಡ್ರೈವರ್‌ಗಳ ವಿರುದ್ಧ ಸ್ಪರ್ಧಿಸುವ ಸಾಮರ್ಥ್ಯ ನನ್ನಲ್ಲಿದೆ. ಆದರೆ ಇದೀಗ ಗುಡ್-ಬೈ ಹೇಳುವ ಸಮಯ ಬಂದಿದೆ ಎಂದು ಶೂಮಕರ್ ಸ್ಪಷ್ಟಪಡಿಸಿದ್ದಾರೆ.

ಜನನ: 03/01/1969
ರಾಷ್ಟ್ರೀಯತೆ: ಜರ್ಮನಿ
ತಂಡ: ಮರ್ಸಿಡಿಸ್
ಒಟ್ಟು ರೇಸ್: 304
ಚಾಂಪಿಯನ್‌ಶಿಪ್ ಗೆಲುವು: 7 (1994, 1995, 2000, 2001, 2002, 2003, 2004)
ಒಟ್ಟು ರೇಸಿಂಗ್ ಗೆಲುವು: 91
ಮೊದಲ ರೇಸ್: 1991 ಬೆಲ್ಜಿಯಂ ಗ್ರಾಂಡ್ ಪ್ರಿಕ್ಸ್
ಮೊದಲ ಗೆಲುವು: 1992 ಬೆಲ್ಜಿಯಂ ಗ್ರಾಂಡ್ ಪ್ರಿಕ್ಸ್
ಕೊನೆಯ ಗೆಲುವು: 2006 ಚೈನೀಸ್ ಗ್ರಾಂಡ್ ಪ್ರಿಕ್ಸ್
ಕೊನೆಯ ರೇಸ್: 2012 ಕೊರಿಯಾ ಗ್ರಾಂಡ್ ಪ್ರಿಕ್ಸ್

ಈ ಹಿಂದೆ 2009ರಲ್ಲಿ ಹೇಳಿದಂತೆ ನನ್ನ ಯಶಸ್ಸನ್ನು ತುಲನೆ ಮಾಡಿ ನೋಡುವ ಅಗತ್ಯವಿತ್ತು. ಬಹುಶ: ಇದರಿಂದಾಗಿಯೇ ನನ್ನ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಒಟ್ಟಿನಲ್ಲಿ ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ. ಕಳೆದ ಆರು ವರ್ಷಗಳಲ್ಲಿ ನಾನು ಹಲವು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ನನ್ನಲ್ಲಿ ನಂಬಿಯನ್ನಿರಿಸಿದ ಎಲ್ಲರಿಗೂ ವಿಶೇಷವಾಗಿಯೂ ನನ್ನ ಕುಟುಂಬ, ಮೋಟಾರ್‌ಸ್ಪೋರ್ಟ್, ಸ್ನೇಹಿತರು ಹಾಗೂ ಜತೆಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ಎಫ್-1 ರೇಸನ್‌ಗಳಲ್ಲಿ ಕಳೆದ 20 ವರ್ಷಗಳಿಗಿಂದ ತನ್ನದೆ ಆದ ಛಾಪು ಮೂಡಿಸಿರುವ ಶೂಮಕರ್ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಮುಂಬರುವ ನವೆಂಬರ್ 25ರಂದು ಸಾಗಲಿರುವ ಬ್ರೆಜಿಲ್ ಗ್ರಾಂಡ್ ಪ್ರಿ ರೇಸ್ ಶೂಮಕರ್ ಪಾಲಿಗೆ ಕೊನೆಯದಾಗಿರಲಿದೆ. 43ರ ಹರೆಯದಲ್ಲೂ ಅವರ ಕ್ರೀಡಾಸ್ಫೂರ್ತಿ ಇಂದಿಗೂ ಯುವ ಕ್ರೀಡಾಳುಗಳಲ್ಲಿ ಉತ್ಸಾಹ ತುಂಬಲು ಕಾರಣವಾಗಿದೆ. ಅಂದ ಹಾಗೆ ಇದು ಎರಡನೇ ಬಾರಿ ಶೂಮಕರ್ ನಿವೃತ್ತಿ ಘೋಷಿಸುತ್ತಿದ್ದಾರೆ. 1991 ರೇಸಿಂಗ್‌ ಫೀಲ್ಡ್‌ಗೆ ಕಾಲಿಟಿದ್ದ ಶೂಮಕರ್ ಈ ವರೆಗೆ ದಾಖಲೆಯ 91 ರೇಸಿಂಗ್‌ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಶೂಮಕರ್ ಮೊದಲ ಬಾರಿಗೆ 2005ರಲ್ಲಿ ವಿದಾಯ ಘೋಷಿಸಿದ್ದರು.

ಶೂಮಕರ್ ಎಂಟ್ರಿ

ಶೂಮಕರ್ ಎಂಟ್ರಿ

ಚಿಕ್ಕವನಿಂದಲೇ ರೇಸಿಂಗ್ ಮೇಲೆ ಶೂಮಕರ್‌ಗೆ ಅತಿಯಾದ ಆಸಕ್ತಿಯಿತ್ತು. ಇದಕ್ಕೆ ಉತ್ತಮ ಪ್ರೋತ್ಸಾಹ ನೀಡಿದ್ದ ಶೂಮಕರ್ ತಂದೆಯವರು ಪೆಡಲ್ ಕಾರ್ಟ್ ಮೋಟಾರ್‌ಸೈಕಲ್ ಕೊಡುಗೆಯಾಗಿ ನೀಡಿದ್ದರು.

ಬೆಂಬಿಡದ ವಿವಾದ

ಬೆಂಬಿಡದ ವಿವಾದ

ಪ್ರತಿಯೊಬ್ಬ ಚಾಂಪಿಯನ್ ವ್ಯಕ್ತಿಯ ಹಿಂದುಗಡೆ ವಿವಾದಗಳು ಸುತ್ತಾಡುತ್ತಿರುವುದು ಸಾಮಾನ್ಯ. ಇದರಂತೆ ಶೂಮಕರ್ ಕೂಡಾ ವಿವಾದಗಳಿಂದ ಹೊರತಾಗಿರಲಿಲ್ಲ. 1994ನೇ ಇಸವಿಯಲ್ಲಿ ಮೊದಲ ರೇಸಿಂಗ್ ಗೆದ್ದಾಗಲೂ ಅವರನ್ನು ವಿವಾದಗಳು ಬೆನ್ನತ್ತಿತ್ತು.

ರೈನ್ ಕಿಂಗ್ ಶೂಮಕರ್

ರೈನ್ ಕಿಂಗ್ ಶೂಮಕರ್

ಭಾರಿ ಮಳೆ ಸುರಿಯುತ್ತಿದ್ದರೂ ಉತ್ತಮ ಗತಿಯಲ್ಲಿ ಫಾರ್ಮುಲಾ ಒನ್ ಚಾಲನೆ ಮಾಡುವಲ್ಲಿ ಶೂಮಕರ್ ನಿಸ್ಸೀಮರು. ಅವರ ಈ ವಿಶೇಷ ಸಾಮರ್ಥ್ಯದಿಂದಲೇ ರೈನ್ ಕಿಂಗ್ ಎಂಬ ಪಟ್ಟ ದೊರಕಿತ್ತು. 2003ರಲ್ಲಿ ಮಳೆ ನಡುವೆ ನಡೆದ 30 ಸ್ಪರ್ಧೆಗಳಲ್ಲಿ 17 ಬಾರಿ ಶೂಮಕರ್ ಜಯಭೇರಿ ಬಾರಿಸಿದ್ದರು.

ರೇಸಿಂಗ್ ದುನಿಯಾದ ಬಾದ್‌ಷಾ

ರೇಸಿಂಗ್ ದುನಿಯಾದ ಬಾದ್‌ಷಾ

ಮೈಕಲ್‌ ಶೂಮಕರ್‌ಗೆ ಸರಿಯಾಟಿ ಮೈಕಲ್ ಶೂಮಕರ್ ಎಂದೇ ವ್ಯಾಖ್ಯಾನಿಸಬಹುದು. ಏಳು ಚಾಂಪಿಯನ್‌ಶಿಪ್ ಗೆದ್ದಿರುವುದು ಅವರಿಗೆ ಎಫ್-1 ಚಾಂಪಿಯನ್ ಪಟ್ಟ ನೀಡಿದೆ.

ಮೈಕಲ್ ಶೂಮಕರ್ ದಾಖಲೆ

ಮೈಕಲ್ ಶೂಮಕರ್ ದಾಖಲೆ

ಚಾಂಪಿಯನ್‌ಶಿಪ್ ಗೆಲುವು: 7 (1994, 1995, 2000, 2001, 2002, 2003, 2004)

ಒಟ್ಟು ರೇಸಿಂಗ್ ಗೆಲುವು: 91

ಟ್ರ್ಯಾಕ್‌ನಲ್ಲಿ ಶೂಮಕರ್

ಟ್ರ್ಯಾಕ್‌ನಲ್ಲಿ ಶೂಮಕರ್

ರೇಸ್‌ನ ಅಂತಿಮ ಕ್ಷಣದಲ್ಲಿ ಆವೇಗ ಹೆಚ್ಚಿಸಿಕೊಳ್ಳಲು ಶೂಮಕರ್ ಹೆಸರುವಾಸಿಯಾಗಿದ್ದರು. ಒಂದು ವೇಳೆ ರೇಸಿಂಗ್‌ ಆರಂಭ ಹಂತದಲ್ಲಿ ಹಿಂದೆ ಬಿದ್ದರೂ ಅಂತಿಮ ಕ್ಷಣದಲ್ಲಿ ಆವೇಗ ಹೆಚ್ಚಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿತ್ತು

ಸಚಿನ್ ಭೇಟಿ ಮರೆಯಲಾಗದ ಕ್ಷಣ

ಸಚಿನ್ ಭೇಟಿ ಮರೆಯಲಾಗದ ಕ್ಷಣ

ಕ್ರಿಕೆಟ್‌ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿರುವುದು ಶೂಮಕರ್ ಜೀವನದ ಮರೆಯಲಾಗದ ಕ್ಷಣ. ಇವರಿಬ್ಬರ ನಡುವೆ ಉತ್ತಮ ಗೆಳೆತನ ಮೂಡಿಬಂದಿದೆ.

ಛಲಗಾರ ಶೂಮಕರ್

ಛಲಗಾರ ಶೂಮಕರ್

ಎರಡನೇ ಬಾರಿಯೂ ನಿವೃತ್ತಿ ಘೋಷಿಸುವಾಗಲೂ ದಿಟ್ಟವಾಗಿ ಉತ್ತರಿಸಿರುವ ಶೂಮಕರ್, ತನ್ನಲ್ಲಿ ಈಗಲೂ ಸಾಧಿಸುವ ಛಲವಿದೆ. ಆದರೆ ಇದೀಗ ನಿವೃತ್ತಿ ಘೋಷಿಸುವ ಸಕಾಲ ಎಂದು ಮನಗಂಡಿರುವುದಾಗಿ ತಿಳಿಸಿದ್ದಾರೆ.

Most Read Articles

Kannada
English summary
The Formula One legend Michael Schumacher is retiring at the end of the 2012 season. Drivespark takes a look at Micheal Schumacher's illustrious F1 career and lays it down for you in black and white.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X