ಶೀಘ್ರದಲ್ಲಿ ನಿರೀಕ್ಷಿಸಿ: ಮಹೀಂದ್ರ ಮಿನಿ ಕ್ಷೈಲೊ ಎಸ್ ಯುವಿ

Posted By:
Mini Xylo Will Be Launched Before Diwali
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು 2012ರ ಕ್ಷೈಲೊ ಮಲ್ಟಿ ಪರ್ಪೊಸ್ ವೆಹಿಕಲನ್ನು ಇತ್ತೀಚೆಗೆ ಪರಿಚಯಿಸಿತ್ತು. ಇದಕ್ಕಿಂತ ಸಣ್ಣಕಾರೊಂದರ ನಿರೀಕ್ಷೆಯಲ್ಲಿದ್ದವರಿಗೂ ಸಿಹಿಸುದ್ದಿಯಿದೆ. ಕಂಪನಿಯು ಮಿನಿ ಕ್ಷೈಲೊ ಕಾರನ್ನು ಪ್ರಸಕ್ತ ವರ್ಷದ ದೀಪಾವಳಿಗೆ ಮುನ್ನ ಪರಿಚಯಿಸಲಿದೆ.

ಮಿನಿ ಕ್ಷೈಲೊ ಕಾರನ್ನು ಕಂಪನಿಯು ಈಗಾಗಲೇ ಪುಣೆ ಮತ್ತು ಯುರೋಪ್ ನಲ್ಲಿ ಟೆಸ್ಟ್ ಮಾಡಿದೆ. "ಮಿನಿ ಕ್ಷೈಲೊ ಈಗಲೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಈ ಕಾರು ದೀಪಾವಳಿಗೆ ಮುನ್ನ ರಸ್ತೆಗಿಳಿಯಲಿದೆ" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಿನಿ ಕ್ಷೈಲೊ ಕಾರು ಐದು ಡೋರಿನ ಹ್ಯಾಚ್ ಬ್ಯಾಕ್ ಕಾರಾಗಿದ್ದು, ನೋಡಲು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ತರಹವೇ ಕಾಣುತ್ತದೆ. ಇದು ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕಾರಾಗಿದೆ. ಕಾರಿನ ಉದ್ದ ಕಡಿಮೆ ಇರುವುದರಿಂದ ಕಾರಿಗೆ ವಿಧಿಸುವ ಅಬಕಾರಿ ಸುಂಕ ಕಡಿಮೆಯಾಗಲಿದೆ. ಇದರಿಂದ ಈ ಕಾರಿನ ದರ ಸುಮಾರು 7 ಲಕ್ಷ ರು.ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಈ ಕಾರು ಪ್ರತಿಲೀಟರಿಗೆ 14 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವ ನಿರೀಕ್ಷೆಯಿದೆ.

English summary
Mahindra unveiled the 2012 Xylo MPV yesterday in Delhi and Mumbai. The new look Xylo has impressed many but the one car that everybody are waiting for from Mahindra is the mini Xylo. This compact SUV has been sighted several times around Pune and most recently we found images of the Mini Xylo being testing the snow in Europe.
Story first published: Friday, February 10, 2012, 11:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark