ಆಟೋಮ್ಯಾಟಿಕ್ ಗೇರ್ ಕಾರುಗಳಿಗೆ ಸಖತ್ ಬೇಡಿಕೆ

ದೇಶದ ಜನರೀಗ ಆಟೋಮ್ಯಾಟಿಕ್ ಕಾರುಗಳಿಗೆ ಹಾಯ್ ಹೇಳುತ್ತಿದ್ದಾರೆ. ಸಾಂಪ್ರದಾಯಿಕ ಮ್ಯಾನುಯಲ್ ಗೇರ್ ಕಾರುಗಳ ಮಾರಾಟ ಕಡಿಮೆಯಾಗುತ್ತಿದ್ದು, ಸ್ವಯಂಚಾಲೀತ ಗೇರ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆಟೋಮ್ಯಾಟಿಕ್ ಗೇರ್ ಕಾರುಗಳ ಆರಾಮದಾಯಕತೆಯ ಚಾಲನೆ ಅನುಭವ ಹೆಚ್ಚಿನ ಜನರನ್ನು ಸೆಳೆಯುತ್ತಿದೆ.

ಆದರೆ ಮ್ಯಾನುಯಲ್ ಗೇರ್ ಕಾರುಗಳಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಗೇರ್ ಕಾರುಗಳು ಕಡಿಮೆ ಮೈಲೇಜ್ ನೀಡುತ್ತವೆ. ಆದರೆ ಸದ್ಯ ಆಟೋಮ್ಯಾಟಿಕ್ ಗೇರ್ ಪ್ರತಿಷ್ಠೆಯ ವಿಷಯವೂ ಆಗಿರುವುದರಿಂದ ಹೆಚ್ಚಿನವರು ಗೇರ್ ಆಯ್ಕೆಯಲ್ಲಿ ಮೈಲೇಜ್ ವಿಷ್ಯವನ್ನು ಪರಿಗಣಿಸುತ್ತಿರುವಂತೆ ಕಾಣುತ್ತಿಲ್ಲ.

ಮಾರುತಿ ಸುಜುಕಿ, ಹ್ಯುಂಡೈ, ಫೋಕ್ಸ್ ವ್ಯಾಗನ್, ಹೋಂಡಾ ಮತ್ತು ಆಡಿಯಂತಹ ಕಾರು ಕಂಪನಿಗಳು ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವುದಾಗಿ ಹೇಳಿವೆ. ಸಾಮಾನ್ಯ ದರದ ಕಾರುಗಳಿಗಿಂತ ಪ್ರೀಮಿಯಂ ಕಾರುಗಳನ್ನು ಖರೀದಿಸುವಾಗ ಹೆಚ್ಚಿನ ಜನರು ಆಟೋಮ್ಯಾಟಿಕ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಗಮನಾರ್ಹ ವಿಷಯವೆಂದರೆ ಮಾರುತಿ ಸುಜುಕಿ ಎ-ಸ್ಟಾರ್ ಮತ್ತು ಹ್ಯುಂಡೈ ಐ10ನಂತಹ ಎಂಟ್ರಿ ಲೆವೆಲ್ ಕಾರುಗಳನ್ನು ಖರೀದಿಸುವಾಗಲೂ ಆಟೋಮ್ಯಾಟಿಕ್ ಗೇರ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಿಟಿ ರಸ್ತೆಯಲ್ಲಿಯಂತೂ ಆಟೋಮ್ಯಾಟಿಕ್ ಗೇರ್ ಕಾರುಗಳ ಇಂಧನ ದಕ್ಷತೆ ತೀರಾ ಕಡಿಮೆಯಾಗಿದೆ.

ಮ್ಯಾನುಯಲ್ ಗೇರ್ ಕಾರುಗಳಿಗೆ ಹೋಲಿಸಿದರೆ ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಹೋಂಡಾ ಸಿಟಿ ಆಟೋಮ್ಯಾಟಿಕ್ ಆವೃತ್ತಿಗಳ ಮಾರಾಟವು ಶೇಕಡ 20ರಷ್ಟು ಏರಿಕೆ ಕಂಡಿದೆ. ಹೋಂಡಾ ಸಿವಿಕೆ ಆಟೋಮ್ಯಾಟಿಕ್ ಕಾರುಗಳ ಮಾರಾಟ ಶೇಕಡ 30ರಷ್ಟು ಏರಿಕೆ ಕಂಡಿದೆ. ಹೋಂಡಾ ಅಕಾರ್ಡ್ ಮತ್ತು ಸಿಆರ್ ವಿ ಆಟೋಮ್ಯಾಟಿಕ್ ಗೇರ್ ಕಾರುಗಳ ಮಾರಾಟ ಶೇಕಡ 60ರಷ್ಟು ಹೆಚ್ಚಳವಾಗಿದೆ.

1987ರಲ್ಲಿಯೇ ಮಾರುತಿ 800 ಕಾರು ಆಟೋಮ್ಯಾಟಿಕ್ ಆವೃತ್ತಿ ರಸ್ತೆಗಿಳಿದಿತ್ತು. "ಜನರು ಜಾಗತಿಕ ಟ್ರೆಂಡಿಗೆ ತಕ್ಕಂತೆ ವರ್ತಿಸುತ್ತಿದ್ದಾರೆ. ಈಗ ಹೆಚ್ಚಿನ ಕಾರುಗಳು ಆಟೋಮ್ಯಾಟಿಕ್ ಆಗಿದ್ದು, ಸಾಂಪ್ರದಾಯಿಕ ಗೇರುಗಳತ್ತ ಒಲವು ತೋರುತ್ತಿಲ್ಲ" ಎಂದು ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಮಯಾಂಕ್ ಪಾರೇಕ್ ಹೇಳಿದ್ದಾರೆ.

ಆಟೋಮ್ಯಾಟಿಕ್ ಗೇರ್ ಕಾರುಗಳಿಗೆ ಬೇಡಿಕೆ ಹೆಚ್ಚಲು ಆಡಿ ಮತ್ತು ಬಿಎಂಡಬ್ಲ್ಯುನಂತಹ ಐಷಾರಾಮಿ ಕಾರುಗಳು ಕೂಡ ಕಾರಣವಾಗಿವೆ. ಅವು ದೇಶದಲ್ಲಿ ಕೇವಲ ಆಟೋಮ್ಯಾಟಿಕ್ ಗೇರ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು.

ಸಂಚಾರ ದಟ್ಟನೆ ಹೆಚ್ಚಳ ಕೂಡ ಆಟೋಮ್ಯಾಟಿಕ್ ಕಾರುಗಳ ಮಾರಾಟ ಹೆಚ್ಚಳು ಕಾರಣವಾಗಿದೆ. ಟ್ರಾಫಿಕ್‌ನಲ್ಲಿ ಕಾರು ನಿಲ್ಲಿಸಿದಾಗ ಮ್ಯಾನುಯಲ್ ಆಗಿ ಗೇರ್ ಬದಲಾಯಿಸುವುದಕ್ಕಿಂತ ಆಟೋಮ್ಯಾಟಿಕ್ ಹೆಚ್ಚು ಆರಾಮದಾಯಕತೆ ಉಂಟು ಮಾಡುತ್ತದೆ. ಅಧ್ಯಯನಗಳ ಪ್ರಕಾರ ಆಟೊಮ್ಯಾಟಿಕ್ ಕಾರುಗಳ ಬಳಕೆಯಲ್ಲಿ ಶೇಕಡ 60ರಷ್ಟು ಕಡಿಮೆ ಶಕ್ತಿ ಬಳಕೆಯಾಗುತ್ತದೆ.

ಸಾಂಪ್ರದಾಯಿಕ ಮ್ಯಾನುಯಲ್ ಕಾರುಗಳಿಗಿಂತ ಆಟೋಮ್ಯಾಟಿಕ್ ಕಾರುಗಳು ದುಬಾರಿಯಾಗಿವೆ. ಆದರೆ ಆಟೋಮ್ಯಾಟಿಕ್ ಜೊತೆ ಸಾಕಷ್ಟು ಪ್ರೀಮಿಯಂ ಫೀಚರುಗಳನ್ನು ನೀಡುವ ಮೂಲಕ ಕಾರು ಕಂಪನಿಗಳು ಸ್ವಯಂಚಾಲೀತ ಗೇರ್ ಕಾರುಗಳ ಮಾರಾಟ ಹೆಚ್ಚಿಸುತ್ತಿವೆ.

ಇದರೊಂದಿಗೆ ಆಟೋಮ್ಯಾಟಿಕ್ ಕಾರುಗಳ ದರ ತಗ್ಗಿಸಲು ಕೂಡ ಕಂಪನಿಗಳು ಪ್ರಯತ್ನಿಸುತ್ತಿವೆ. ಕಾರು ಕಂಪನಿಗಳು ಸರಿಯಾದ ತಂತ್ರಜ್ಞಾನಕ್ಕೆ ಹೂಡಿಕೆ ಮಾಡಿ ಆಟೋಮ್ಯಾಟಿಕ್ ಕಾರುಗಳ ಇಂಧನ ದಕ್ಷತೆ ಹೆಚ್ಚಿಸಿದರೆ ಕಾರು ಖರೀದಿದಾರರು ಮೈಲೇಜ್ ಕುರಿತು ಚಿಂತೆ ಮಾಡಬೇಕಿಲ್ಲ.

Most Read Articles

Kannada
English summary
The automatic gearbox is getting more and more fans in India with more people preferring to buy cars with an auto box rather than the traditional manual gearbox. The automatic transmission's ability to deliver a stress free drive.
Story first published: Friday, April 27, 2012, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X