ನೂತನ ಷೆವರ್ಲೆ ಸ್ಪಾರ್ಕ್ ಲಾಂಚ್; ದರ 3.16 ಲಕ್ಷ ರು.

Written By:

ಅಮೆರಿಕದ ಪ್ರಮುಖ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್, ಷೆವರ್ಲೆ ಸ್ಪಾರ್ಕ್‌ನ ನೂತನ ಫೇಸ್‌ಲಿಫ್ಟಡ್ ಮಾದರಿಯನ್ನು ಭಾರತದಲ್ಲಿ ಪರಿಚಯಿಸಿಕೊಂಡಿದೆ. ಸಂಪೂರ್ಣ ಕಾಸ್ಮೆಟಿಕ್ಸ್ ಬದಲಾವಣೆಯೊಂದಿಗೆ ಅಕ್ಟೋಬರ್ 25ರಂದು (ಇಂದು) ರಸ್ತೆಗಿಳಿದಿರುವ ಷೆವರ್ಲೆ ಸ್ಪಾರ್ಕ್ ದೆಹಲಿ ಏಕ್ಸ್ ಶೋರೂಂಗಳಲ್ಲಿ 3.16 ದರ ಹೊಂದಿದೆ.

ಪರಿಷ್ಕರಿಸಿದ ಮುಂದಿನ ಭಾಗ ಹೆಚ್ಚಿನ ಆಕ್ರಮಣಶೀಲ ವಿನ್ಯಾಸವನ್ನು ಕಾರು ಪಡೆದುಕೊಂಡಿದೆ. ನೂತನ ಬಣ್ಣಗಳ ಆಯ್ಕೆ, ಸುಧಾರಿತ ವಿನ್ಯಾಸ, ಫ್ರಂಟ್ ಗ್ರಿಲ್, ಬಂಪರ್, ಹೆಡ್‌ಲ್ಯಾಂಪ್ ಹಾಗೂ ಇಂಡಿಕೆಟರ್‌ಗಳನ್ನು ನೂತನ ಮಾದರಿಯಲ್ಲಿ ಪರಿಚಯಿಸಲಾಗಿದೆ.

ಪೆಟ್ರೋಲ್ ಹಾಗೂ ಪೆಟ್ರೋಲ್-ಎಲ್‌ಪಿಜಿ ಡ್ಯುಯಲ್ ಫ್ಯೂಯಲ್ ಆಯ್ಕೆ ಸೇರಿದಂತೆ ಒಟ್ಟು ಐದು ವೆರಿಯಂಟ್‌ಗಳಲ್ಲಿ ಕಾರು ತಲುಪಿದೆ. ಒಂದು ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ನಾಲ್ಕು ಸಿಲಿಂಡರ್‌ನ ಸಾಮರ್ಥ್ಯದ ಸ್ಪಾರ್ಕ್ 63 ಬಿಎಚ್‌ಪಿ- 90 ಎನ್‌ಎಂ ಉತ್ಪಾದಿಸುತ್ತದೆ. ಅಲ್ಲದೆ ಪ್ರತಿ ಲೀಟರ್‌ಗೆ 18 ಕಿಲೋ ಮೀಟರ್ ಇಂಧನ ದಕ್ಷತೆಯನ್ನು ಹೊಂದಿದೆ. ಇದು ಮಾರುತಿ ಆಲ್ಟೊ 800 ಹಾಗೂ ಹ್ಯುಂಡೈ ಇಯಾನ್‌ಗೆ ಹೋಲಿಸಿದಾಗ ತುಂಬಾನೇ ಕಡಿಮೆಯಾಗಿದೆ. ಈ ಎರಡು ಮಾದರಿಗಳಲ್ಲಿ ಪ್ರತಿ ಲೀಟರ್‌ಗೆ 22 ಕಿಲೋ ಮೀಟರ್ ಇಂಧನ ದಕ್ಷತೆ ದೊರಕಲಿದೆ.

ಷೆವರ್ಲೆ ಸ್ಪಾರ್ಕ್ ದರ ಮಾಹಿತಿ:

ಷೆವರ್ಲೆ ಸ್ಪಾರ್ಕ್ ದರ ಮಾಹಿತಿ:

ಷೆವರ್ಲೆ ಸ್ಪಾರ್ಕ್ ಬೇಸ್ ವೆರಿಯಂಟ್: 3.16 ಲಕ್ಷ ರು.

ಷೆವರ್ಲೆ ಸ್ಪಾರ್ಕ್ ಎಲ್‌ಎಸ್ ವೆರಿಯಂಟ್: 3.41 ಲಕ್ಷ ರು.

ಷೆವರ್ಲೆ ಸ್ಪಾರ್ಕ್ ಎಲ್‌ಟಿ ವೆರಿಯಂಟ್: 3.70 ಲಕ್ಷ ರು.

ಷೆವರ್ಲೆ ಸ್ಪಾರ್ಕ್ ಎಲ್‌ಎಸ್ ಎಲ್‌ಪಿಜಿ: 3.71 ಲಕ್ಷ ರು.

ಷೆವರ್ಲೆ ಸ್ಪಾರ್ಕ್ ಎಲ್‌ಟಿ ಎಲ್‌ಪಿಜಿ: 3.99 ಲಕ್ಷ ರು.

(ಎಕ್ಸ್ ಶೋರೂಂ ದೆಹಲಿ)

ಷೆವರ್ಲೆ ಸ್ಪಾರ್ಕ್ ಕಲರ್ಸ್

ಷೆವರ್ಲೆ ಸ್ಪಾರ್ಕ್ ಕಲರ್ಸ್

ಸ್ಯಾಂಡ್‌ರಿಫ್ಟ್ ಗ್ರೇ

ಲಿನೆನ್ ಬೀಗೆ

ಕ್ಯಾವಿಯರ್ ಬ್ಲ್ಯಾಕ್

ವೆಲ್ವೆಟ್ ರೆಡ್

ಮಿಸ್ಟಿ ಲೇಕ್

ಸಮ್ಮಿತ್ ವೈಟ್

ಡ್ಯುಯಲ್ ಟೋನ್ ಇಂಟಿರಿಯರ್ ಆಂಡ್ ಆಪ್ಟಿಮಾಕ್ಸ್ ಕ್ಯಾಬಿನ್

ಡ್ಯುಯಲ್ ಟೋನ್ ಇಂಟಿರಿಯರ್ ಆಂಡ್ ಆಪ್ಟಿಮಾಕ್ಸ್ ಕ್ಯಾಬಿನ್

ಭಾರತೀಯ ಸಂಪ್ರದಾಯದಿಂದ ಸ್ಫೂರ್ತಿ ಪಡೆದುಕೊಂಡು ಕಾರಿನ ಒಳಭಾಗಗಳನ್ನು ಆಲಂಕರಿಸಲಾಗಿದೆ. ಇದರಿಂದ ಗ್ರಾಹಕರಿಗೆ ಉತ್ತಮ ಅನುಭವ ಸಿಗುವ ವಿಶ್ವಾಸವಿದೆ.

ಷೆವರ್ಲೆ ಸ್ಪಾರ್ಕ್

ಷೆವರ್ಲೆ ಸ್ಪಾರ್ಕ್

ನೂತನ ಫ್ರಂಟ್ ಗ್ರಿಲ್ ಪರಿಚಯಿಸಲಾಗಿದೆ. ಇದರಿಂದ ಷೆವರ್ಲೆ ಸ್ಪಾರ್ಕ್ ಆಧುನಿಕತೆಯನ್ನು ಪಡೆದಿದೆ

ಷೆವರ್ಲೆ ಸ್ಪಾರ್ಕ್

ಷೆವರ್ಲೆ ಸ್ಪಾರ್ಕ್

ನೂತನ ಕ್ಲಸ್ಟರ್ ವೈಶಿಷ್ಟ್ಯವನ್ನು ಷೆವರ್ಲೆ ಸ್ಪಾರ್ಕ್ ಹೊಂದಿದೆ. ಇದು ಚಾಲಕನಿಗೆ ಹೆಚ್ಚಿನ ಅನುಕೂಲತೆ ನೀಡಲಿದೆ.

ಷೆವರ್ಲೆ ಸ್ಪಾರ್ಕ್

ಷೆವರ್ಲೆ ಸ್ಪಾರ್ಕ್

ಪರಿಷ್ಕರಿಸಿದ ಮುಂದಿನ ಭಾಗ ಹೆಚ್ಚಿನ ಆಕ್ರಮಣಶೀಲ ವಿನ್ಯಾಸವನ್ನು ಕಾರು ಪಡೆದುಕೊಂಡಿದೆ. ನೂತನ ಬಣ್ಣಗಳ ಆಯ್ಕೆ, ಸುಧಾರಿತ ವಿನ್ಯಾಸ, ಫ್ರಂಟ್ ಗ್ರಿಲ್, ಬಂಪರ್, ಹೆಡ್‌ಲ್ಯಾಂಪ್ ಹಾಗೂ ಇಂಡಿಕೆಟರ್‌ಗಳನ್ನು ನೂತನ ಮಾದರಿಯಲ್ಲಿ ಪರಿಚಯಿಸಲಾಗಿದೆ.

English summary
GM India has launched the Chevrolet Spark facelift today at a starting price of 3.16 lakhs ex-showroom Delhi.
Story first published: Thursday, October 25, 2012, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark