ಡಿಸೆಂಬರ್ ತಿಂಗ್ಲಲ್ಲಿ ಅಗ್ಗದ ಸ್ಕೋಡಾ ಸೂಪರ್ಬ್

ಸ್ಕೋಡಾ ಕಂಪನಿಯ ಪ್ರೀಮಿಯಂ ಸೆಡಾನ್ ಕಾರು ಸೂಪರ್ಬ್ ನ ಅಗ್ಗದ ಆವೃತ್ತಿ ಈ ವರ್ಷದ ಡಿಸೆಂಬರ್ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ಜೆಕ್ ಗಣರಾಜ್ಯದ ಕಂಪನಿಯ ನೂತನ ಆವೃತ್ತಿಯ ದರ ಪ್ರೀಮಿಯಂಗಿಂತ ಸುಮಾರು 1.4 ಲಕ್ಷ ರು. ಕಡಿಮೆ ಇರುವ ನಿರೀಕ್ಷೆಯಿದೆ. ಹೀಗಾಗಿ ಅಗ್ಗದ ಸೂಪರ್ಬ್ ದರ ಸುಮಾರು 17 ಲಕ್ಷ ರುಪಾಯಿ ಇರಲಿದೆ.

ಈಗ ರಸ್ತೆಯಲ್ಲಿರುವ ಸ್ಕೋಡಾ ಸೂಪರ್ಬ್ ದರ 18-26 ಲಕ್ಷ ರು.ವರೆಗಿದೆ. ಇದು ಕಂಪನಿಯ ದರ ಇಳಿಕೆ ಕಾರ್ಯತಂತ್ರದ ಭಾಗವಾಗಿದೆ. ಸ್ಕೋಡಾ ಕಂಪನಿಯು ರಾಪಿಡ್ ಸೆಡಾನ್ ಮತ್ತು ಫಾಬಿಯಾ ಕಾರುಗಳ ಅಗ್ಗದ ಆವೃತ್ತಿಗಳನ್ನೂ ಪರಿಚಯಿಸಿದೆ.

ಸ್ಕೋಡಾ ಕಂಪನಿಯ ಸೂಪರ್ಬ್ ಕಾರು ಹೋಂಡಾ ಅಕಾರ್ಡ್ ಜೊತೆ ಪೈಪೋಟಿ ನಡೆಸುತ್ತಿದೆ. ಆದರೆ ಹೋಂಡಾ ಅಕಾರ್ಡ್ ಡೀಸೆಲ್ ಆಯ್ಕೆಯಲ್ಲಿ ದೊರಕದೆ ಇರುವುದು ಕಂಪನಿಗೆ ವರವಾಗಿದೆ. ಲೌರಾ ಸೆಡಾನ್ ಆವೃತ್ತಿಯು ಕಂಪನಿಯ ಇನ್ನೊಂದು ದುಬಾರಿ ಕಾರಾಗಿದೆ.

ನೂತನ ಸ್ಕೋಡಾ ಸೂಪರ್ಬ್ ಆವೃತ್ತಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ. 1.8 ಲೀಟರಿನ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸುಮಾರು 160 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಪವರ್ ನೀಡಲಿದೆ. 2.0 ಲೀಟರಿನ ಟಿಡಿಐ ಟರ್ಬೊ ಡೀಸೆಲ್ ಎಂಜಿನ್ 140 ಹಾರ್ಸ್ ಪವರ್ ಮತ್ತು 320 ಎನ್ಎಂ ಟಾರ್ಕ್ ಪವರ್ ನೀಡಲಿದೆ.

ನೂತನ ಅಗ್ಗದ ಸೂಪರ್ಬ್ ಕಾರು ಆರು ಸ್ಪೀಡಿನ ಮ್ಯಾನುಯಲ್ ಗೇರ್ ಮತ್ತು ಆರು ಸ್ಪೀಡಿನ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ನಿರೀಕ್ಷೆಯಿದೆ. ಆದರೆ ಎಂಟ್ರಿ ಲೆವೆಲ್ ಸೂಪರ್ಬ್ ಕಾರಿನಲ್ಲಿ ಕೆಲವು ಸ್ಟಾಂಡರ್ಡ್ ಫೀಚರುಗಳು ಮಿಸ್ ಆಗುವ ಸಾಧ್ಯತೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Czech carmaker Skoda Auto is expected to launch a low cost variant of its Superb premium sedan termed as Ambition in December this year. The new variant is anticipated to have a price cut of Rs 1.4 lakhs restricting the price to around Rs 17 lakh. The current Superb models are being sold with a price tag that
Story first published: Monday, March 26, 2012, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X