ಪೋರ್ಷೆ ಬಹುನಿರೀಕ್ಷಿತ 7ನೇ ಜನರೇಷನ್ ಕಾರು ಬಿಡುಗಡೆ

By Nagaraja

ಜರ್ಮನಿಯ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಪೋರ್ಷೆ, ಬಹುನಿರೀಕ್ಷಿತ ಏಳನೆಯ ಪೀಳಿಗೆಯ 911 ಕರೆರಾ ಸ್ಪೋರ್ಟ್ಸ್ ಹಾಗೂ ಬಾಕ್ಸ್ಟರ್ ಎಸ್ ಕಾರುಗಳನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ದರ ಮಾಹಿತಿ
ಅತಿ ದುಬಾರಿ 911 ಕರೆರಾ ಕೋಪ್ 1.14 ಕೋಟಿ ರೂಪಾಯಿಗಳಷ್ಟು ದುಬಾರಿಯಾಗಿದೆ. ಇದಕ್ಕಿಂತಲೂ ಹೆಚ್ಚು ಸ್ಪೋರ್ಟ್ ಲುಕ್ ಹೊಂದಿರುವ ಪವರ್‌ಫುಲ್ 911 ಕರೆರಾ ಎಸ್ ಕೋಪ್ 1.33 ಕೋಟಿ ರು.ಗಳಷ್ಟು ಬೆಳೆಬಾಳುವುದಾಗಿದೆ. ಅಲ್ಲದೆ ದೆಹಲಿಯ ಎಕ್ಸ್ ಶೋ ರೂಂಗಳಲ್ಲಿ ಬಾಕ್ಸ್ಟರ್ ಎಸ್ ದರ 81.72 ಲಕ್ಷ ರುಪಾಯಿಗಳಾಗಿದೆ.

ನೂತನ 911 ಕರೆರಾ 3.8 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 400 ಬಿಎಚ್‌ಪಿ ಉತ್ಪಾದಿಸಲಿದೆ. ಅಂದರೆ ಕೇವಲ 4.3 ಸೆಕೆಂಡುಗಳಲ್ಲಿ 0-100 ಕೀ. ಮೀ. ವೇಗ ವರ್ಧಿಸಲಿದೆ. ಗ್ರಾಹಕರಿಗೆ ಸ್ಪೋರ್ಟ್ಸ್ ಕ್ರೊನೊ ಪ್ಯಾಕೇಜ್ ಆಳವಡಿಸಿಕೊಳ್ಳುವ ಆಯ್ಕೆ ಕೂಡಾ ಲಭ್ಯವಿದ್ದು, ಇದರಿಂದ ವೇಗ ವರ್ಧನೆಯು 4.1 ಸೆಕೆಂಡುಗಳಿಗೆ ಇಳಿಯಲಿದೆ. ಅಲ್ಲದೆ ಗರಿಷ್ಠ ವೇಗ ಪ್ರತಿ ಗಂಟೆಗೆ 302 ಕೀ. ಮೀ. ಸಿಗಲಿದೆ.

ಪೋರ್ಷೆ 911 ಕರೆರಾ ಎಸ್

ಪೋರ್ಷೆ 911 ಕರೆರಾ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಪೋರ್ಟ್ಸ್ ಕಾರು ಆಗಿದೆ. ಇದರಿಂದಾಗಿ ಏಳನೇ ಪೀಳಿಗೆಯ ಪೋರ್ಷೆ 911 ಕರೆರಾ ಅತಿ ಹೆಚ್ಚು ಬೇಡಿಕೆ ಪಡಿದಿದೆ

ಪೋರ್ಷೆ 911 ಕರೆರಾ ಎಸ್

400 ಹಾರ್ಸ್ ಪವರ್ ಉತ್ಪಾದಿಸಲಿರುವ ಕರೆರಾ ಎಸ್ ಪ್ರತಿ ಗಂಟೆಗೆ 302 ಕೀ. ಮೀ ಗರಿಷ್ಠ ವೇಗವನ್ನು ಪಡೆದುಕೊಳ್ಳಲಿದೆ.

ಪೋರ್ಷೆ 911 ಕರೆರಾ ಎಸ್

ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಪೋರ್ಷೆ 911 ಕರೆರಾ ಸ್ವಲ್ಪ ವಿಭಿನ್ನ ಶೈಲಿಯನ್ನು ಹೊಂದಿದೆ. ಕಾರಿನ ನಿರ್ವಹಣೆ ಹೆಚ್ಚಿಸಲು ತಂತ್ರಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ಪ್ರಯೋಗಿಸಲಾಗಿದೆ.

ಪೋರ್ಷೆ 911 ಕರೆರಾ ಎಸ್

ಹೊಸ ಪೋರ್ಷೆ 911 ಕಾರು ಸ್ಪೋರ್ಟಿ ಲುಕ್ ಹೊಂದಿದ್ದು ಇಂಟಿರಿಯರ್ ಭಾಗಗಳನ್ನು ಬ್ಲ್ಯಾಕ್ ಲೆಥರ್ ಹಾಗೂ ಕಾರ್ಬನ್ ಫೈಬರ್‌ನಲ್ಲಿ ತಯಾರಿಸಲಾಗಿದೆ.

ಷೋರ್ಷೆ ಬಾಕ್ಸ್ಟರ್ ಎಸ್

ಪೋರ್ಷೆಯ ಐಷಾರಾಮಿ ಕಾರುಗಳು ಭಾರತೀಯ ಸೆಲೆಬ್ರಿಟಿಗಳ ಪಾಲಿಗಂತೂ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿದೆ. ಇದರಿಂದಾಗಿ ಪೋರ್ಷೆ ಇಂಡಿಯಾ ಸದಾ ಸುದ್ದಿಯಲ್ಲಿರುತ್ತದೆ.

ಪೋರ್ಷೆ ಬಾಕ್ಸ್ಟರ್ ಎಸ್

ಕಳೆದ ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ಭಾರಿ ಏರುಗತಿ ಕಂಡಿರುವ ಪೋರ್ಷೆ ಇಂಡಿಯಾ 117 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಸ್ಥಾಪಿಸಿದೆ.

ಪೋರ್ಷೆ ಅಭಿಮಾನಿ ಶ್ರೀದೇವಿ

ದೇಶದ ಸೆಲೆಬ್ರೆಟಿಗಳ ಪೈಕಿ ಕೊನೆಯದಾಗಿ ನಟಿ ಶ್ರೀದೇವಿ ಪೋರ್ಷೆ ಕಾರು ಖರೀದಿಸಿದ್ದಾರೆ. ಶ್ರೀದೇವಿ ಇತ್ತೀಚೆಗಿನ ಇಂಗ್ಲಿಂಷ್ ವಿಂಗ್ಲಿಷ್ ಚಿತ್ರದ ಯಶಸ್ಸನ್ನು ಆಚರಿಸಿಕೊಂಡಿದ್ದರು.

ಪತಿಗೆ ದುಬಾರಿ ಪೋರ್ಷೆ ಗಿಫ್ಟ್

ಪತಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರಿಗೆ ಶ್ರೀದೇವಿ ಅತಿ ದುಬಾರಿ ಪ್ರೀಮಿಯಂ ಎಸ್‌ಯುವಿ ಕಯೇನೆ ಕಾರು ಉಡುಗೊರೆಯಾಗಿ ನೀಡಿದ್ದರು.

ಕಪಿಲ್ ದೇವ್ ಪೋರ್ಷೆ ಸವಾರಿ

ಭಾರತ ಕ್ರಿಕೆಟ್‌ನ ಚೊಚ್ಚಲ 1983 ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಪೋರ್ಷೆ ಪನರಮಾ ಪ್ರೀಮಿಯಂ ಸೆಡಾನ್ ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ.

ಕಪಿಲ್ ದೇವ್ ಪೋರ್ಷೆ ಸವಾರಿ

ಕಪಿಲ್ ದೇಶದಲ್ಲಿ ಬಿಡುಗಡೆಯಾದ ಮೊದಲ ಪೋರ್ಷೆ ಪನರಮಾ ಕಾರನ್ನು ಖರೀದಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಪಿಲ್ ಪಾಜಿ, ಪೋರ್ಷೆ ಕಾರು ಲಗ್ಷುರಿ, ದಕ್ಷತೆ ಹಾಗೂ ಸ್ಪೋರ್ಟ್ಸ್ ಲುಕ್‌ಗೆ ಪ್ರಸಿದ್ಧಿ ಪಡೆದಿದೆ ಎಂದಿದ್ದರು.

ಪೋರ್ಷೆ

ಷೋರ್ಷೆ ಕರೆರಾ ಆಕರ್ಷಕ ಲುಕ್

ಪೋರ್ಷೆ

ಬಾಕ್ಸ್ಟರ್ ಎಸ್ ಭಂಗಿ

ಪೋರ್ಷೆ 911 ಕರೆರಾ ಎಸ್

ಪೋರ್ಷೆ 911 ಕರೆರಾ ಎಸ್

Most Read Articles

Kannada
English summary
Porsche, the venerable German sports car brand has launched the new seventh generation 911 Carrera sports car and Boxter S in India.
Story first published: Thursday, November 22, 2012, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X