ಕ್ರಿಕೆಟಿಗ ರಾಹುಲ್ ದ್ರಾವಿಡ್ ಟಸ್ಕನ್ ಸ್ಟೋರಿ ನಿಮ್ಗೊತ್ತ?

ಹದಿನೈದು ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ದ್ರಾವಿಡ್ ವಿದಾಯ ಹೇಳಿದ್ದನ್ನು ರಾಹುಲ್ ಅಭಿಮಾನಿಗಳು ಇನ್ನೂ ಅರಗಿಸಿಕೊಂಡಿಲ್ಲ. ಕ್ರಿಕೆಟ್ ತಂಡದಲ್ಲಿ ಗೋಡೆಯೆಂದು ಖ್ಯಾತಿ ಪಡೆದ ಅವರ ನಿವೃತ್ತಿ ಕನ್ನಡ ಡ್ರೈವ್ ಸ್ಪಾರ್ಕ್ ತಂಡಕ್ಕೂ ಬೇಸರ ತಂದಿದೆ. ಆದರೆ ಅವರ ಕುರಿತು ಮಾತನಾಡಲು ನಮ್ಮ ಸಹೋದರ ತಾಣ ದಟ್ಸ್ ಕ್ರಿಕೆಟ್ ಇದೆಯಲ್ವ? ಆದ್ರೂ ವಾಹನ ವೆಬ್ ಸೈಟಿನೊಳಗೆ ಅವರನ್ನು ಅಹ್ವಾನಿಸಲು ನಮಗೆ ಒಂದು ನೆಪವಿದೆ. ಅದು ಅವರ ಕಾರು ಸ್ಟೋರಿ.

ನಿಮ್ಗೊತ್ತ ರಾಹುಲ್ ದ್ರಾವಿಡ್ ಮನಸ್ಸು ಮಾಡಿದರೆ ಫೆರಾರಿ ಅಥವಾ ಬಿಎಂಡಬ್ಲ್ಯುನಂತಹ ಹಾರ್ಸ್ ಪವರ್ ಕಾರು ಖರೀದಿಸಬಹುದಿತ್ತು. ಆದ್ರೆ ಡ್ರಾವಿಡ್ ಪ್ರಕಾರ ಅವೆಲ್ಲ ಡ್ರೈವಿಂಗ್ ನಲ್ಲಿ ಹೆಚ್ಚು ಕಂಫರ್ಟ್ ನೀಡುವುದಿಲ್ಲ. ಹೀಗಾಗಿ ರಾಹುಲ್ ಪ್ರೀತಿಯಿಂದ ಸವಾರಿ ಮಾಡುವ ಕಾರಿನ ಹೆಸರು ಹ್ಯುಂಡೈ ಟಸ್ಕನ್. ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಕಾರನ್ನು ಡ್ರಾವಿಡ್ ಗೆ ಉಡುಗೊರೆ ನೀಡಿತ್ತು.

ಹ್ಯುಂಡೈ ಟಸ್ಕನ್: ಇದು ಕಾಂಪ್ಯಾಕ್ಟ್ ಕ್ರಾಸೊವರ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದ್ದು, ಎಲೆಂಟ್ರಾ ಪ್ಲಾಟ್ ಫಾರ್ಮ್ ನಲ್ಲಿ ರಸ್ತೆಗಿಳಿದಿದೆ. ಈ ಕಾರು ಆರಾಮದಾಯಕತೆ, ಸ್ಥಳಾವಕಾಶ ಮತ್ತು ದರದಿಂದಾಗಿ ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಿದೆ. ಇದು 2.0 ಲೀಟರಿನ ಐ4 ಎಂಜಿನ್ ಹೊಂದಿದೆ. ಈ ಆಕರ್ಷಕ ಸ್ಪೋರ್ಟ್ ಕಾರಿನ ದರ 16 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. (ಸೆಲೆಬ್ರಿಟಿ ಕಾರು)

Most Read Articles

Kannada
English summary
Celebrity Cars: Rahul Dravid not big car enthusiast.He drive SUV Hyundai Tucson gifted by the ICC for being the best Test Cricket Player.
Story first published: Saturday, March 10, 2012, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X