ಸಣ್ಣಕಾರು ಪಲ್ಸ್ ದರ 11 ಸಾವಿರ ರು. ಹೆಚ್ಚಿಸಿದ ರೆನೊ

Posted By:
Renault raises Compact Car Pulse Price
ಫ್ರಾನ್ಸಿನ ಬೃಹತ್ ವಾಹನ ಕಂಪನಿ ರೆನೊದ ಭಾರತದ ಅಂಗಸಂಸ್ಥೆ, ತನ್ನ ಕಾಂಪ್ಯಾಕ್ಟ್ ಪ್ರೀಮಿಯಂ ಕಾರು ಪಲ್ಸಿನ ದರವನ್ನು ಸುಮಾರು 11 ಸಾವಿರ ರುಪಾಯಿನಷ್ಟು ಹೆಚ್ಚಿಸಿದೆ. ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕಾರಿನ ದರವನ್ನು ರೆನೊ ಹೆಚ್ಚಿಸಿದೆ.

ವಿಶೇಷವೆಂದರೆ ರೆನೊ ಪಲ್ಸ್ ಕಳೆದ ತಿಂಗಳು ರಸ್ತೆಗಿಳಿದಿತ್ತು. ಇದರ ಆರಂಭಿಕ ದರ 5.77 ಲಕ್ಷ ರುಪಾಯಿ(ದೆಹಲಿ ಎಕ್ಸ್ ಶೋರೂಂ). "ಬಿಡಿಭಾಗಗಳ ದರ ಹೆಚ್ಚಾಗಿರುವುದರಿಂದ ನಮ್ಮಲ್ಲಿ ಬೇರೆ ಆಯ್ಕೆ ಇಲ್ಲ. ದರ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ" ಎಂದು ರೆನೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮರ್ಕ್ ನಾಸೀಫ್ ಹೇಳಿದ್ದಾರೆ.

"1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ರೆನೊ ಪಲ್ಸ್ ಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯು ಈಗ ದೇಶದ ರಸ್ತೆಗೆ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕೊಲಿಯೊಸ್ ಮತ್ತು ಪ್ರೀಮಿಯಂ ಸೆಡಾನ್ ಫ್ಲೂಯೆನ್ಸ್ ಕಾರುಗಳನ್ನು ಕೂಡ ಮಾರಾಟ ಮಾಡುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Renault India increased compact car Pulse price by Rs.11,000. Company upseting rising input cost and pass on a part of the cost to customers. Renault Pulse price Rs.5.77 lakh.
Story first published: Friday, February 24, 2012, 14:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark