ಸ್ಕೋಡಾ ಅಗ್ಗದ ಸೂಪರ್ಬ್ ಆಂಬಿಷನ್ ಕಾರು ರಸ್ತೆಗೆ

ಸ್ಕೋಡಾ ಕಂಪನಿಯು ಸೂಪರ್ಬ್ ಆಂಬಿಷನ್ ಸೆಡಾನ್ ಕಾರಿನ ಅಗ್ಗದ ಆವೃತ್ತಿಯನ್ನು ಹೊರತಂದಿದೆ. ಇದರ ಮುಂಬೈ ಎಕ್ಸ್‌ಶೋರೂಂ ದರ 18.55 ಲಕ್ಷ ರುಪಾಯಿ. ಆಂಬಿಷನ್ ದುಬಾರಿ ಆವೃತ್ತಿಯ ಕೆಲವು ಫೀಚರುಗಳನ್ನು ತೆಗೆದು ಅಗ್ಗದ ಆವೃತ್ತಿಗಳನ್ನು ಹೊರತರಲಾಗಿದೆ.

ಜೆಕ್ ಗಣರಾಜ್ಯದ ಕಾರುಕಂಪನಿಗೆ ನೂತನ ಹ್ಯುಂಡೈ ಫ್ಲೂಡಿಕ್ ಸೊನಾಟಾ ಪೈಪೋಟಿ ನೀಡುತ್ತಿದೆ. ಜೊತೆಗೆ ಶೀಘ್ರದಲ್ಲಿ ಟೊಯೊಟಾ ಕ್ಯಾಮ್ರಿ ಕೂಡ ಬರಲಿವೆ. ಇದರ ಪೆಟ್ರೋಲ್ ಆವೃತ್ತಿ ಆರಂಭಿಕ ದರ 18.55 ಲಕ್ಷ ರುಪಾಯಿ ಇದೆ. ಡೀಸೆಲ್ ಆವೃತ್ತಿ ದರ 23.19 ಲಕ್ಷ ರುಪಾಯಿ ಇದೆ.

ಸೂಪರ್ಬ್ ಕಾರಿನ ಕ್ಷೆನನ್ ಹೆಡ್‌ಲ್ಯಾಂಪ್ ಬದಲಾಯಿಸಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ. ಜೊತೆಗೆ ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಕೂಡ ತೆಗೆಯಲಾಗಿದೆ. ಟಾಪ್ ಎಂಡ್ ಆವೃತ್ತಿಯಲ್ಲಿರುವ ಟಚ್‌ಸ್ಕ್ರೀನ್ ಸಿಸ್ಟಮ್‌ಗೆ ಬದಲಾಗಿ ಸ್ಟಾಂಡರ್ಡ್ ಆಡಿಯೋ ಸಿಸ್ಟಮ್ ಅಳವಡಿಸಲಾಗಿದೆ. 6 ಸಿಡಿ ಚೇಂಜರಿಗೆ ಬದಲಾಗಿ ಸಿಂಗಲ್ ಸಿಡಿ ಪ್ಲೇಯರ್ ಇದೆ.

ಸ್ಕೋಡಾ ಸೂಪರ್ಬ್ ಎಕ್ಸ್‌ಶೋರೂಂ ದರ

ಸೂಪರ್ಬ್ ಆಂಬಿಷನ್ 1.8 ಟಿಎಸ್ಐ ಎಂಟಿ: 18.55 ಲಕ್ಷ ರು

ಸೂಪರ್ಬ್ ಆಂಬಿಷನ್ 2.0 ಟಿಡಿಐ ಸಿಆರ್ ಎಟಿ: 23.19 ಲಕ್ಷ ರು.

ಸೂಪರ್ಬ್ ಎಲೆಜೆನ್ಸ್ 1.8 ಟಿಎಸ್ಐ ಎಂಟಿ: 20.20 ಲಕ್ಷ ರು.

ಸೂಪರ್ಬ್ ಎಲಿಜೆನ್ಸ್ 2.0 ಟಿಡಿಐ ಸಿಆರ್ ಎಟಿ: 24.24 ಲಕ್ಷ ರು.

ಸೂಪರ್ಬ್ ಎಲೆಜೆನ್ಸ್ 3.6 ವಿ6: 28.74 ಲಕ್ಷ ರು.

(ಇಲ್ಲಿ ಎಟಿ ಅಂದರೆ ಆಟೋಮ್ಯಾಟಿಕ್, ಎಂಟಿ ಅಂದ್ರೆ ಮ್ಯಾನುಯಲ್ ಗೇರ್)

Most Read Articles

Kannada
English summary
Skoda has launched the low priced version of its flagship sedan, the Superb Ambition with a starting price of Rs.18.55 lakhs (ex showroom Mumbai). The Skoda Superb Ambition is a stripped down version of the executive sedan with some features missing.
Story first published: Monday, April 16, 2012, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X