ಸಣ್ಣಕಾರು ಇಳಿಮುಖ, ಸ್ಪೋರ್ಟ್ ಕಾರುಗಳಿಗೆ ಹೆಚ್ಚಿದ ಬೇಡಿಕೆ

SUV Market Grow
ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಣ್ಣಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದ್ದವು. ಸಹಜವಾಗಿ ಈ ಸೆಗ್ಮೆಂಟಿನ ಮಾರುಕಟ್ಟೆ ಪಾಲು ಕೂಡ ಗಮನಾರ್ಹವಾಗಿ ಏರಿಕೆ ಕಾಣುತ್ತಿತ್ತು. ಆದರೆ ಈ ಟ್ರೆಂಡ್ ಕಳೆದ ವರ್ಷದ ಮಾರಾಟದಲ್ಲಿ ಬದಲಾಗಿದೆ. ಸಣ್ಣಕಾರುಗಳ ಬೇಡಿಕೆ ಇಳಿಮುಖವಾಗಿದೆ.

2011ರಲ್ಲಿ ದೇಶದ ಸಣ್ಣಕಾರು ಮಾರುಕಟ್ಟೆ ಪಾಲು ಶೇಕಡ 50ಕ್ಕಿಂತ ಕಡಿಮೆಯಾಗಿದೆ. ಟಾಟಾ, ರೆನಾಲ್ಟ್, ನಿಸ್ಸಾನ್, ಬಜಾಜ್ ಮತ್ತು ಜನರಲ್ ಮೋಟರ್ಸ್ ನಂತಹ ಕಾರು ಕಂಪನಿಗಳ ಮಾರಾಟ ನೀರಸವಾಗಿದೆ.

ಟಾಟಾ ನ್ಯಾನೊ, ಮಾರುತಿ ಆಲ್ಟೊ, ಫೋರ್ಡ್ ಫಿಗೊ, ವ್ಯಾಗನಾರ್, ಹ್ಯುಂಡೈ ಸ್ಯಾಂಟ್ರೊ, ಐ10 ಮತ್ತು ಇಯಾನ್ ಸೇರಿದಂತೆ ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಕಾರುಗಳ ಮಾರುಕಟ್ಟೆ ಪಾಲು ಶೇಕಡ 47ಕ್ಕೆ ತಲುಪಿದೆ. ಅಂದರೆ 2010ರ ಮಾರಾಟಕ್ಕೆ ಹೋಲಿಸಿದರೆ ಶೇಕಡ 07ರಷ್ಟು ಇಳಿಕೆ ದಾಖಲಿಸಿದೆ.

ಆದರೆ ಪ್ರೀಮಿಯಂ ಕಾಂಪ್ಯಾಕ್ಟ್ ಕಾರು ಸೆಗ್ಮೆಂಟಿನ ಪರಿಸ್ಥಿತಿ ಇವುಗಳಿಗಿಂತ ಕೊಂಚ ಸುಧಾರಿಸಿದೆ. ಮಾರುತಿ ಸ್ವಿಫ್ಟ್, ಹ್ಯುಂಡೈ ಐ20 ಮತ್ತು ಫೋಕ್ಸ್ ವ್ಯಾಗನ್ ಪೊಲೊ ಮುಂತಾದ ಕಾರುಗಳ ಸೆಗ್ಮೆಂಟ್ 2011ರಲ್ಲಿ ಶೇಕಡ 6.5ರಷ್ಟು ಏರಿಕೆ ದಾಖಲಿಸಿದ್ದು, ಮಾರುಕಟ್ಟೆ ಪಾಲು ಶೇಕಡ 11ರಷ್ಟನ್ನು ಉಳಿಸಿಕೊಂಡಿದೆ.

ಅಚ್ಚರಿಯೆಂದರೆ ಈ ಸಮಯದಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮಾರುಕಟ್ಟೆ ಗಮನಾರ್ಹವಾಗಿ ಪ್ರಗತಿ ಕಂಡಿದೆ. 2011ರಲ್ಲಿ ಎಸ್ ಯುವಿ ಮಾರುಕಟ್ಟೆ ಪಾಲು ಶೇಕಡ 35ಕ್ಕೆ ತಲುಪಿದೆ. ದೇಶದ ಮತ್ತು ವಿದೇಶದ ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಕಳೆದ ವರ್ಷ ಅತ್ಯುತ್ತಮ ಬೇಡಿಕೆಯಿತ್ತು.

ಸಣ್ಣಕಾರುಗಳಿಗೆ ಬೇಡಿಕೆ ಕಡಿಮೆಯಾಗಿರುವ ಮತ್ತು ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಬೇಡಿಕೆ ಹೆಚ್ಚಾಗಿರುವ ಮಾಹಿತಿಯನ್ನು ದೇಶದ ವಾಹನ ತಯಾರಿಕ ಕಂಪನಿಗಳ ಒಕ್ಕೂಟ(ಸ್ಯಾಮ್) ನೀಡಿದೆ.

Most Read Articles

Kannada
English summary
Indian Small Car Market dipping bellow 50 percent in 2011. And Sport Utility Market grow 32 percent.
Story first published: Monday, February 13, 2012, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X