ಪರಿಷ್ಕೃತ ಮಾರುತಿ ರಿಟ್ಜ್ ಮಾಹಿತಿ ಬಹಿರಂಗ

Posted By:
To Follow DriveSpark On Facebook, Click The Like Button
ದೇಶದ ವಾಹನ ಪ್ರೇಮಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ ಸುಜುಕಿ ಸ್ವಿಫ್ಟ್ ಪರಿಷ್ಕೃತ ಆವೃತ್ತಿ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ. ಕಂಪನಿಯು ಈ ಕಾರನ್ನು ಕೆಲವು ವಾರಗಳ ಹಿಂದೆ ಜರ್ಮನಿಯಲ್ಲಿ ಬಿಡುಗಡೆಮಾಡಿತ್ತು. ಇದೀಗ ಇಂಗ್ಲೆಂಡಿನಲ್ಲಿ ಬಿಡುಗಡೆ ಮಾಡಿದೆ.

ಇಂಗ್ಲೆಂಡಿನಲ್ಲಿ ರಿಟ್ಜ್ ಆವೃತ್ತಿಗೆ ಸುಜುಕಿ ಸ್ಪಾಷ್ ಎಂದು ನಾಮಕರಣ ಮಾಡಲಾಗಿದೆ. ಅದರ ದರ ಅಲ್ಲಿ 7,777 ಪೌಂಡ್. ಅಂದ್ರೆ ಸುಮಾರು 6.69 ಲಕ್ಷ ರುಪಾಯಿ. ನೂತನ ಸುಜುಕಿ ಸ್ಪಾಷ್ ಕಾರಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ ಗಳನ್ನು ಅಳವಡಿಸಲಾಗಿದೆ. ಇಂಟಿರಿಯರ್ ಕೂಡ ಕೊಂಚ ಬದಲಾವಣೆ ಮಾಡಲಾಗಿದೆ.

ಮಾರುತಿ ಸುಜುಕಿ ಸ್ಪಾಷ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. 1.0 ಲೀಟರಿನ ಪೆಟ್ರೋಲ್ ಎಂಜಿನ್ 68 ಅಶ್ವಶಕ್ತಿ ನೀಡುತ್ತದೆ. ಇದು ಪ್ರತಿಲೀಟರಿಗೆ ಸುಮಾರು 25 ಕಿ.ಮೀ. ಮೈಲೇಜ್ ನೀಡುತ್ತದೆ. 1.2 ಲೀಟರಿನ ಎಂಜಿನ್ 93 ಅಶ್ವಶಕ್ತಿ ನೀಡುತ್ತದೆ. ಇದು ಪ್ರತಿಲೀಟರಿಗೆ 23 ಕಿ.ಮೀ. ಮೈಲೇಜ್ ನೀಡುತ್ತದೆ.

ಸುಜುಕಿ ಸ್ಪಾಷ್ ಇಂಗ್ಲೆಂಡಿನಲ್ಲಿ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಸ್ಪಾಷ್ ಎಸ್ ಝಡ್2, ಎಸ್ ಝಡ್3, ಎಸ್ ಝಡ್4 ಎಂಬ ಮೂರು ಆವೃತ್ತಿಗಳಲ್ಲಿ ದೊರಕುವ ಈ ಕಾರುಗಳಲ್ಲಿ ಹಲವು ಸ್ಟಾಂಡರ್ಡ್ ಫೀಚರುಗಳೂ ಇವೆ.

ಅಂದರೆ ಸ್ಟಿಯರಿಂಗ್ ವೀಲ್ ನಲ್ಲಿರುವ ಆಡಿಯೋ ಕಂಟ್ರೋಲ್, ಎಂಪಿ3 ಪ್ಲೇಯರ್, ಚರ್ಮದ ಹಾಸಿರುವ ಸ್ಟಿಯರಿಂಗ್ ವೀಲ್ ಮತ್ತು ಮುಂಭಾಗದಲ್ಲಿ ಎಲೆಕ್ಟ್ರಿಕ್ ವಿಂಡೋ ಇದೆ. ಬೇಕಾದರೆ 15 ಇಂಚಿನ ಅಲಾಯ್ ವೀಲ್ ಮತ್ತು ಕೀಲೆಸ್ ಎಂಟ್ರಿ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಮಾರುತಿ ಸುಜುಕಿ ಕಂಪನಿಯು ಪರಿಷ್ಕೃತ ರಿಟ್ಜ್ ಆವೃತ್ತಿಯನ್ನು ದೀಪಾವಳಿ ವೇಳೆಗೆ ಪರಿಚಯಿಸುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ರಿಟ್ಜ್: ಸಂಪೂರ್ಣ ವಿಮರ್ಶೆ ಓದಿ

English summary
Suzuki Ritz(called as splash in uk) launched in UK. We expect new face-lifted Ritz will launch India before Diwali. Suzuki Splash facelift will be powered by two petrol engines.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark